ರನ್ ಔಟ್ ವಿವಾದ, 21 ವರ್ಷದ ಅಂಪೈರ್ ಚಾಕುವಿನಿಂದ ಇರಿದು ಬರ್ಬರ ಹತ್ಯೆ!

ರನ್ ಔಟ್ ವಿವಾದ, 21 ವರ್ಷದ ಅಂಪೈರ್ ಚಾಕುವಿನಿಂದ ಇರಿದು ಬರ್ಬರ ಹತ್ಯೆ!



ರನ್ ಔಟ್ ವಿವಾದ, 21 ವರ್ಷದ ಅಂಪೈರ್ ಚಾಕುವಿನಿಂದ ಇರಿದು ಬರ್ಬರ ಹತ್ಯೆ!
ವಿಶಾಖಪಟ್ಟಣದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ದುರಂತ ಸಂಭವಿಸಿದೆ. ರನ್ ಔಟ್ ವಿಚಾರಕ್ಕೆ ನಡೆದ ಜಗಳದಲ್ಲಿ 21 ವರ್ಷದ ಯುವ ಅಂಪೈರ್ ಅಜಿತ್ ಬಾಬು ಬರ್ಬರವಾಗಿ ಕೊಲೆಯಾಗಿದ್ದಾರೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.<img>ದೇಶದೆಲ್ಲೆಡೆ ಐಪಿಎಲ್ ಸಂಭ್ರಮ ಮನೆ ಮಾಡಿರುವಾಗ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ರಕ್ತ ಹರಿದಿದೆ. ಸಣ್ಣ ರನ್ ಔಟ್ ವಿವಾದವು 21 ವರ್ಷದ ಅಂಪೈರ್ ಡೋಲಾ ಅಜಿತ್ ಬಾಬು ಅವರ ಪ್ರಾಣ ತೆಗೆದಿದೆ. ಈ ಘಟನೆ ಕ್ರೀಡಾ ಜಗತ್ತನ್ನೇ ಬೆಚ್ಚಿಬೀಳಿಸಿದೆ.<img>ಭಾನುವಾರ ಸಂಜೆ ವಿಶಾಖಪಟ್ಟಣದಲ್ಲಿ ಮೂರು ಸ್ಥಳೀಯ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಅಂಪೈರ್ ಅಜಿತ್ ಬಾಬು ನೀಡಿದ ರನ್ ಔಟ್ ತೀರ್ಮಾನದ ಬಗ್ಗೆ ಆಟಗಾರರು ಮತ್ತು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.<img>ಪಂದ್ಯ ಮುಗಿದ ನಂತರ, ಆರೋಪಿ ಕಾಂತ ಕಿಶೋರ್ (26) ಅಂಪೈರ್‌ಗಳನ್ನು ಮಾತುಕತೆಗೆಂದು ಕರೆದು ವಾಗ್ವಾದಕ್ಕಿಳಿದಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಆತ, ತನ್ನ ಬಳಿ ಇದ್ದ ಚಾಕುವಿನಿಂದ ಅಜಿತ್ ಬಾಬು ಅವರ ಎದೆಗೆ ಇರಿದು ಕೊಲೆ ಮಾಡಿದ್ದಾನೆ.<img>ತೀವ್ರವಾಗಿ ಗಾಯಗೊಂಡಿದ್ದ ಅಜಿತ್ ಬಾಬು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆಯೇ ಅವರು ಮೃತಪಟ್ಟರು. ಆರೋಪಿಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ. ಗಾಯಾಳು ಚಿರಂಜೀವಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.



Source link

Leave a Reply

Your email address will not be published. Required fields are marked *