
ನಮ್ಮ ಸುತ್ತಮುತ್ತ ಇರುವ ಅನೇಕರು ಸಣ್ಣ ವಿಷಯಗಳಿಗೂ ಬೇಜಾರು ಮಾಡಿಕೊಳ್ಳುತ್ತಾರೆ. ಅವರನ್ನು ನೋಡಿ, ಇಷ್ಟು ಸಣ್ಣ ವಿಷಯಕ್ಕೆ ಯಾಕಿವರು ಇಷ್ಟೊಂದು ಫೀಲ್ ಮಾಡ್ಕೊಳ್ತಾರೆ ಅನ್ಸುತ್ತೆ. ಮನೋವಿಜ್ಞಾನಿಗಳ ಪ್ರಕಾರ, ಇಂಥವರ ಮನಸ್ಥಿತಿ ಒಂದೇ ಕಾರಣಕ್ಕೆ ಸೀಮಿತವಾಗಿಲ್ಲ.
ಅವರ ವ್ಯಕ್ತಿತ್ವ, ಹಿಂದಿನ ಅನುಭವಗಳು, ಭಾವನೆಗಳನ್ನು ನಿಭಾಯಿಸುವ ರೀತಿ, ಆಲೋಚನಾ ಶೈಲಿ ಎಲ್ಲವೂ ಸೇರಿ ಈ ಮನಸ್ಥಿತಿಯನ್ನು ರೂಪಿಸುತ್ತವೆ. ಸಣ್ಣ ಸಮಸ್ಯೆಗಳು ದೊಡ್ಡದಾಗಿ ಕಾಣಿಸುವುದರ ಹಿಂದೆ ಆಳವಾದ ಮಾನಸಿಕ ಪ್ರಕ್ರಿಯೆಗಳು ಇರುತ್ತವೆ ಎಂದು ಮನೋವಿಜ್ಞಾನ ಹೇಳುತ್ತದೆ.