ಮುಂದಿನ 25 ವರ್ಷಕ್ಕೆ ಭಾರತದ ಬೆಳವಣಿಗೆಗೆ ಬುನಾದಿ ಹಾಕಿದೆ ಈ ಬಜೆಟ್: ಸಚಿವ ಪ್ರಲ್ಹಾದ್ ಜೋಶಿ

ಮುಂದಿನ 25 ವರ್ಷಕ್ಕೆ ಭಾರತದ ಬೆಳವಣಿಗೆಗೆ ಬುನಾದಿ ಹಾಕಿದೆ ಈ ಬಜೆಟ್: ಸಚಿವ ಪ್ರಲ್ಹಾದ್ ಜೋಶಿ


ಹೈದರಾಬಾದ್, ಫೆಬ್ರುವರಿ 6: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ (2026-27) ಮುಂದಿನ 25 ವರ್ಷಕ್ಕೆ ದೇಶದ ಬೆಳವಣಿಗೆಗೆ ಬುನಾದಿ ಹಾಕುವ ಕೆಲಸ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಪ್ರಲ್ಹಾದ್ ಜೋಶಿ) ಅಭಿಪ್ರಾಯಪಟ್ಟಿದ್ದಾರೆ. ನಾಂಪಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜೋಶಿ, 2047ರ ವಿಕಸಿತ ಭಾರತದ ಆಶಯಕ್ಕೆ ಬಜೆಟ್ ಕೆಲಸ ಮಾಡುತ್ತದೆ.

‘2013ರಲ್ಲಿ ವಿಶ್ವದ ಐದು ಶಿಥಿಲ ಆರ್ಥಿಕತೆಗಳಲ್ಲಿ ಭಾರತವೂ ಒಂದೆನಿಸಿತ್ತು. ಅಭಿವೃದ್ಧಿಶೀಲ ಮಾರುಕಟ್ಟೆಗಳು ತಮ್ಮ ಬೆಳವಣಿಗೆಗೆ ವಿದೇಶೀ ಬಂಡವಾಳದ ಮೇಲೆ ಅವಲಂಬಿತವಾಗಿವೆ. ಆ ಪರಿಸ್ಥಿತಿಯಿಂದ ಈಗ 2047ಕ್ಕೆ ವಿಕಸಿತ ಭಾರತದ ಆಶಯದಂತೆ ಸಾಗುತ್ತಿದೆ’ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

‘ವಿಶ್ವ ಶ್ರೇಣಿಯಲ್ಲಿ ಬದಲಾವಣೆ ಆಗುತ್ತದೆ. ಭಾರತವು ಈ ಬದಲಾವಣೆಯಲ್ಲಿ ಮುಂಚೂಣಿಯಲ್ಲಿರುತ್ತದೆ. ನಾವು ನಾಲ್ಕನೇ ಅತಿದೊಡ್ಡ ಹಾಗೂ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದ್ದೇವೆ. ಮುಂದಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ’ ಎಂದು ಪ್ರಲ್ಹಾದ್ ಜೋಶಿ.

ಇದನ್ನೂ ಓದಿ: ಕೃಷಿ ಕ್ಷೇತ್ರಕ್ಕೆ ತೊಂದರೆ ಇಲ್ಲ, ರೈತರು ಸೇಫ್; ಭಾರತ-ಅಮೆರಿಕ ಟ್ರೇಡ್ ಡೀಲ್‌ನಲ್ಲಿ ಏನಿದೆ?

ಎಐ ಕ್ಷೇತ್ರದ ಮಹತ್ವವನ್ನು ಒತ್ತಿ ಹೇಳಿದ ಗ್ರಾಹಕ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ, ಎಐ ಕ್ರಾಂತಿಯ ವಿದ್ಯುತ್ ಮತ್ತು ಇಂಟರ್ನೆಟ್ ಕ್ರಾಂತಿಗೆ ಹೋಲಿಕೆ ಮಾಡಲಾಗಿದೆ. ಹಾಗೆಯೇ, ತಮ್ಮ ಸರ್ಕಾರವು ಐ ಮಿಷನ್‌ಗೆ ನೀಡಿರುವ ಮಹತ್ವವನ್ನೂ ಎತ್ತಿ ತೋರಿಸಿದ್ದಾರೆ.

ಕ್ರಿಟಿಕಲ್ ಮಿನರಲ್ ಅಥವಾ ಮುಖ್ಯ ಖನಿಜಗಳು ಸೆಮಿಕಂಡಕ್ಟರ್, ಎಐ, ನವೀಕರಣ ಇಂಧನ, ಹಸಿರು ಇಂಧನದಂತಹ ಪ್ರಮುಖ ಸೆಕ್ಟರ್‌ಗಳಿಗೆ ಬಹಳ ಗಮನ ಸೆಳೆದಿದ್ದು, ಸರ್ಕಾರ ಕ್ರಿಟಿಕಲ್ ಮಿನರಲ್ಸ್ ಮಿಷನ್ ಜಾರಿಗೆ ತಂದಿದೆ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.

‘ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್, ಲಾಜಿಸ್ಟಿಕ್ಸ್ ಕ್ಷಮತೆ, ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್, ಐಐ, ನವೀಕರಣ ಇಂಧನ, ತಂತ್ರಜ್ಞಾನ ಪ್ರಭಾವಿತ ಬೆಳವಣಿಗೆಗೆ ಒತ್ತು ಕೊಡುತ್ತಾ ಆರ್ಥಿಕ ಪ್ರಗತಿ ಸಾಧಿಸುತ್ತಿರುವುದನ್ನು ಈ ಬಾರಿಯ ಬಜೆಟ್‌ನಲ್ಲಿ ಕಾಣಬಹುದು. ರಾಜ್ಯಗಳಿಗೆ ಸಾಕಷ್ಟು ಫಂಡಿಂಗ್ ಕೊಡಲಾಗಿದೆ, ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ರಾಜ್ಯಗಳನ್ನು ಶಕ್ತಗೊಳಿಸಲಾಗಿದೆ’ ಎಂದು ಹೊಸ ಮತ್ತು ನವೀಕರಣ ಸಚಿವರಾದ ಅವರು ಪ್ರಕಟಿಸಿದರು.

ಇದನ್ನೂ ಓದಿ: ವಾಣಿಜ್ಯಾತ್ಮಕವಾಗಿ ಲಾಭವಿದ್ದರೆ ವೆನೆಜುವೆಲಾದಿಂದಲೂ ತೈಲ ಪಡೆಯುತ್ತೇವೆ: ಭಾರತ ಸರ್ಕಾರದ ಹೇಳಿಕೆ

ಪ್ರಲ್ಹಾದ್ ಜೋಶಿ ಅವರು ನಾಂಪಲ್ಲಿ ಉದ್ಯಮದ ಪ್ರತಿನಿಧಿಗಳಿಗೆ ಹಾಜರಾಗಿದ್ದರು. ಈ ವೇಳೆ, ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಜೋಶಿ, 2047ರ ವಿಕಸಿತ ಭಾರತದ ದೂರಗಾಮಿ ಗುರಿಯ ಮುಂದುವರಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಲ್ಹಾದ್ ಜೋಶಿ ಅವರ ಎಕ್ಸ್ ಪೋಸ್ಟ್ ಗಳು

ಸರಳ ವಿಧಾನಗಳು, ಕಾನೂನು, ನೀತಿ ಸುಧಾರಣೆಗಳ ವ್ಯಾಪಾರ ವಾತಾವರಣವನ್ನು ಸುಲಭಗೊಳಿಸಲಾಗಿದೆ. ವ್ಯಾಪಾರಿಗಳು, ಎಂಎಸ್‌ಎಂಇಗಳು, ಉದ್ಯಮಗಳಿಗೆ ಶಕ್ತಿ ತುಂಬಲಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಪ್ರಲ್ಹಾದ್ ಜೋಷಿ ಮಾತನಾಡಿರುವ ವಿಡಿಯೋ

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *