Headlines

ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ರಸ್ತೆ ಅಪಘಾತ ಸಂತ್ರಸ್ತರ ಪರಿಹಾರಕ್ಕೆ ಶೂನ್ಯ ತೆರಿಗೆ

ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ರಸ್ತೆ ಅಪಘಾತ ಸಂತ್ರಸ್ತರ ಪರಿಹಾರಕ್ಕೆ ಶೂನ್ಯ ತೆರಿಗೆ

ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ರಸ್ತೆ ಅಪಘಾತ ಸಂತ್ರಸ್ತರ ಪರಿಹಾರಕ್ಕೆ ಶೂನ್ಯ ತೆರಿಗೆ

ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಭರ್ಜರಿ ವಿನಾಯಿತಿ ನೀಡಿದೆ. ಈ ಪೈಕಿ ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೂ ಹೊಸ ಪದ್ಧತಿ ಘೋಷಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ 9ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ಬಾರಿಯ ಬಜೆಟ್ ಕುರಿತು ವಿಶ್ಲೇಷಣೆಗಳು ನಡೆಯುತ್ತಿದೆ. ಪ್ರಧಾನಿ ಮೋದಿ, ಕೇಂದ್ರ ಸಚಿವರು, ಬಿಜೆಪಿ ನಾಯಕರು ನಿರ್ಮಲಾ ಸೀತಾರಾಮನ್ ಬಜೆಟ್‌ಗೆ ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೆಲ ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಈ ಪೈಕಿ ಸಂಕಷ್ಟದಲ್ಲಿರುವ ಕುಟುಂಬಗಳ ಕಣ್ಣೀರಿನಲ್ಲಿ ತೆರಿಗೆ ವಸೂಲಿ ಮಾಡುವ ಸ್ವಾತಂತ್ರ್ಯ ಭಾರತದಿಂದ ಇದ್ದ ನೀತಿಗೆ ಬ್ರೇಕ್ ಹಾಕಲಾಗಿದೆ.

ರಸ್ತೆ ಅಪಘಾತದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರು, ಅವರ ಕುಟುಂಬಗಳಿಗೆ ನೆರವಾಗುವ ಹಾಗೂ ಜೊತೆಯಾಗಿ ನಿಲ್ಲುವ ಈ ಬಾರಿಯ ಬಜೆಟ್‌ನಲ್ಲಿ ಮಾಡಲಾಗಿದೆ. ರಸ್ತೆ ಅಪಘಾತದಲ್ಲಿನ ಸಂತ್ರಸ್ತರು, ಮಡಿದ ಕುಟುಂಬಕ್ಕೆ ನೀಡುವ ಪರಿಹಾರದ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಈ ಮೂಲಕ ಮಹತ್ವದ ನಿರ್ಧಾರವನ್ನು ಮೋದಿ ಸರ್ಕಾರ ತೆಗೆದುಕೊಂಡಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬ, ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡುತ್ತದೆ. ಈ ಪರಿಹಾರ ಸಂತ್ರಸ್ರರ ಕೈಸೇರುವಾಗ ತೆರಿಗೆ ಕಡಿತಗೊಳ್ಳಲಿದೆ. ಸದ್ಯ 50,000 ರೂಪಾಯಿ ವರೆಗಿನ ಪರಿಹಾರ ಮೊತ್ತಕ್ಕೆ ಶೇಕಡಾ 10ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ತೆರಿಗೆ ಇನ್ನು ಇರುವುದಿಲ್ಲ. ಸರ್ಕಾರ ಘೋಷಿಸಿದ ಸಂಪೂರ್ಣ ಮೊತ್ತ ಸಂತ್ರಸ್ತರ ಕೈಸೇರಲಿದೆ.

ಲಕ್ಷ ರೂಪಾಯಿ ಪರಿಹಾರಕ್ಕೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಉದಾಹರಣೆಗೆ 2 ಲಕ್ಷ ರೂಪಾಯಿ ಸರ್ಕಾರ ಹರಿಹಾರ ನೀಡಿದರೆ ಅದರಲ್ಲಿ 20,000 ರೂಪಾಯಿ ತೆರಿಗೆ ರೂಪದಲ್ಲಿ ಕಡಿತಗೊಳ್ಳಲಿದೆ. ಇದರಿಂದ ಗಾಯಗೊಂಡವರ ಚಿಕಿತ್ಸೆಗಾಗಿ ಮತ್ತೆ ಪರದಾಡುವಂತಾಗುತ್ತದೆ. ಹೀಗಾಗಿ ಈ ತೆರಿಗೆ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

ಸರ್ಕಾರದ ಹೊಸ ತೆರಿಗೆ ನೀತಿಯಿಂದ ಸರ್ಕಾರಕ್ಕೆ ನೆರವಾಗಲಿದೆ. ರಸ್ತೆ ಅಪಘಾತ ಪ್ರಮಾಣ ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭಾರಿ ಹೋರಾಟ ಮಾಡುತ್ತಿದೆ. ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಲು ಮನವಿ ಮಾಡುತ್ತಿದೆ. ಆದರೂ ರಸ್ತೆ ಅಪಘಾತದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಕೇಂದ್ರ ಸರ್ಕಾರ ಪರಿಹಾರ ಮೇಲಿನ ತೆರಿಗೆ ಕಡಿತಗೊಳಿಸಿ ಸಂತ್ರಸ್ತ ಕುಟುಂಬಗಳ ಸಮಾಧಾನಕ್ಕೆ ಕಾರಣಾಗಿದೆ.

Source link

Leave a Reply

Your email address will not be published. Required fields are marked *