Headlines

ಬಜೆಟ್ 2026: ಸರ್ಕಾರಕ್ಕೆ ಎಲ್ಲೆಲ್ಲಿಂದ ಆದಾಯ; ಎಲ್ಲೆಲ್ಲಿಗೆ ಖರ್ಚು? ಇಲ್ಲಿದೆ ಆಯ ಮತ್ತು ವ್ಯಯಗಳ ಲೆಕ್ಕ

ಬಜೆಟ್ 2026: ಸರ್ಕಾರಕ್ಕೆ ಎಲ್ಲೆಲ್ಲಿಂದ ಆದಾಯ; ಎಲ್ಲೆಲ್ಲಿಗೆ ಖರ್ಚು? ಇಲ್ಲಿದೆ ಆಯ ಮತ್ತು ವ್ಯಯಗಳ ಲೆಕ್ಕ


2026ರ ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು 53.47 ಲಕ್ಷ ಕೋಟಿ ರೂ ಮೊತ್ತದ ಬಜೆಟ್ (ಯೂನಿಯನ್ ಬಜೆಟ್ 2026) ಮಂಡಿಸಿದ್ದಾರೆ. ಇದು ದೊಡ್ಡ ಗಾತ್ರದ ಬಜೆಟ್ ಆಗಿದೆ. ಕೆಲವು ಪ್ರಮುಖ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಯಶಸ್ವಿಯಾದ ಅನೇಕ ಹಳೆಯ ಯೋಜನೆಗಳನ್ನು ಮುಂದುವರಿಸಲಾಗಿದೆ. ನೀತಿ ಸ್ಥಿರತೆಯಿಂದ ಈ ಬಜೆಟ್ ಗಮನ ಸೆಳೆದಿದೆ. ಭವಿಷ್ಯದ ದೃಷ್ಟಿಯಲ್ಲಿ ರೂಪುಗೊಂಡ ಬಜೆಟ್ ಎಂದು ಹಲವು ವಿಶ್ಲೇಷಕರು ಹೇಳುತ್ತಿದ್ದಾರೆ.

ಸರ್ಕಾರಕ್ಕೆ ಆದಾಯ ಎಲ್ಲಿಂದ?

  • ಸಾಲಗಳು ಮತ್ತು ಹೊಣೆಗಾರಿಕೆಗಳು: ಶೇ. 24
  • ಆದಾಯ ತೆರಿಗೆ: ಶೇ. 21
  • ಕಾರ್ಪೊರೇಟ್ ತೆರಿಗೆ: ಶೇ. 18
  • ಜಿಎಸ್ಟಿ ತೆರಿಗೆ ತೆರಿಗೆ: ಶೇ. 15
  • ಕೇಂದ್ರ ಅಬಕಾರಿ ಸುಂಕ: ಶೇ. 6
  • ಕಸ್ಟಮ್ಸ್: ಶೇ. 4
  • ತೆರಿಗೆಯೇತರ ಆದಾಯ: ಶೇ. 10
  • ಸಾಲೇತರ ಬಂಡವಾಳ ಆದಾಯ: ಶೇ. 2

ಸರ್ಕಾರದ ಹಣ ಎಲ್ಲಿಗೆ ಹೋಗುತ್ತೆ?

  • ರಾಜ್ಯಗಳ ತೆರಿಗೆ ಪಾಲು: ಶೇ. 22
  • ಸಾಲಕ್ಕೆ ಬಡ್ಡಿ ಪಾವತಿ: ಶೇ. 20
  • ಕೇಂದ್ರ ವಲಯ ಯೋಜನೆಗಳು: ಶೇ. 17
  • ರಕ್ಷಣೆ: ಶೇ. 11
  • ಕೇಂದ್ರ ಪ್ರಾಯೋಜಿತ ಯೋಜನೆಗಳು: ಶೇ. 8
  • ಹಣಕಾಸು ಆಯೋಗದ ವರ್ಗಾವಣೆ: ಶೇ. 7
  • ಪ್ರಮುಖ ಸಬ್ಸಿಡಿಗಳು: ಶೇ. 6
  • ನಾಗರಿಕರ ಪಿಂಚಣಿ: ಶೇ. 2

ಇದನ್ನೂ ಓದಿ: ತತ್ಕ್ಷಣದ ಪರಿಹಾರ ಮತ್ತು ಭವಿಷ್ಯದ ಪ್ರಗತಿಯ ನಡುವೆ ನೀತಿ ಸೇತುವಾಗಿರುವ ಬಜೆಟ್ 2026

ಅತಿಹೆಚ್ಚು ಅನುದಾನ ಪಡೆದ ಇಲಾಖೆಗಳು

  • ಸಾರಿಗೆ: 5.98 ಲಕ್ಷ ಕೋಟಿ ರೂ
  • ರಕ್ಷಣೆ: 5.94 ಲಕ್ಷ ಕೋಟಿ ರೂ
  • ಗ್ರಾಮೀಣಾಭಿವೃದ್ಧಿ: 2.73 ಲಕ್ಷ ಕೋಟಿ ರೂ
  • ಗೃಹ ವ್ಯವಹಾರಗಳು: 2.55 ಲಕ್ಷ ಕೋಟಿ ರೂ
  • ಕೃಷಿ ಹಾಗೂ ಪೂರಕ ಚಟುವಟಿಕೆ: 1.62 ಲಕ್ಷ ಕೋಟಿ ರೂ
  • ಶಿಕ್ಷಣ: 1.39 ಲಕ್ಷ ಕೋಟಿ ರೂ
  • ಬೆಲೆ: 1.09 ಲಕ್ಷ ಕೋಟಿ ರೂ
  • ಆರೋಗ್ಯ: 1.04 ಲಕ್ಷ ಕೋಟಿ ರೂ
  • ನಗರಾಭಿವೃದ್ಧಿ: 85,522 ಕೋಟಿ ರೂ
  • ಐಟಿ, ಟೆಲಿಕಾಂ: 74,560 ಕೋಟಿ ರೂ
  • ವಾಣಿಜ್ಯ ಮತ್ತು ಕೈಗಾರಿಕೆ: 70,296 ಕೋಟಿ ರೂ
  • ಸಾಮಾಜಿಕ ಕಲ್ಯಾಣ: 62,362 ಕೋಟಿ ರೂ
  • ಕೆಲವು ವಿಭಾಗಗಳು: 55,756 ಕೋಟಿ ರೂ
  • ತೆರಿಗೆ ಆಡಳಿತ: 45,500 ಕೋಟಿ ರೂ
  • ವಿದೇಶಾಂಗ ವ್ಯವಹಾರಗಳು: 22,119 ಕೋಟಿ ರೂ
  • ಹಣಕಾಸು: 20,649 ಕೋಟಿ ರೂ
  • ಈಶಾನ್ಯ ರಾಜ್ಯಗಳ ಅಭಿವೃದ್ಧಿ: 6,812 ಕೋಟಿ ರೂ
  • ಇತರೆ ವೆಚ್ಚಗಳು: ಶೇ. 7

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *