Headlines

Hubli: ಪದ್ಮಶ್ರೀ ಪುರಸ್ಕೃತ ಪ್ರಭಾಕರ್ ಕೋರೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸನ್ಮಾನ

Hubli: ಪದ್ಮಶ್ರೀ ಪುರಸ್ಕೃತ ಪ್ರಭಾಕರ್ ಕೋರೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸನ್ಮಾನ


ಪ್ರಭಾಕರ್ ಕೋರೆ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಂದ ಸನ್ಮಾನ

ಹುಬ್ಬಳ್ಳಿ, ಜನವರಿ 27: 2026ನೇ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ಕೆಎಲ್‌ಐ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಪ್ರಭಾಕರ್ ಕೋರೆ ಅವರ ಕುಟುಂಬದ ಸದಸ್ಯರೊಡಗೂಡಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸನ್ಮಾನಿಸಿ, ಅಭಿನಂದಿಸಿದ್ದಾರೆ. ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿನ ಕೋರೆ ಅವರ ಅಭೂತಪೂರ್ವ ಸೇವೆಯನ್ನು ಗುರುತಿಸಿ ಅತ್ಯುನ್ನತ ಪ್ರಶಸ್ತಿಗೆ ಕೇಂದ್ರ ಸರ್ಕಾರ ಅವರನ್ನು ಆಯ್ಕೆ ಮಾಡಿದ್ದು, ಗಣರಾಜ್ಯೋತ್ಸವದ ಹಿಂದಿನ ದಿನ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದೆ.

ಇನ್ನು ಸನ್ಮಾನಿಸಿದ ಬಳಿಕ ಕೋರೆ ಅವರನ್ನು ಕೊಂಡಾಡಿರುವ ಜೋಶಿ, ಕೆಎಲ್‌ಇ ಶಿಕ್ಷಣ ಸಂಸ್ಥೆ ಕಟ್ಟಿ ಪ್ರಾಥಮಿಕ ಶಿಕ್ಷಣದಿಂದ ತಾಂತ್ರಿಕ, ವೈದ್ಯಕೀಯದಂತಹ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ಹಾಡಿ ಹೊಗಳಿದ್ದಾರೆ. ಸಮಾಜಕ್ಕೆ ಉತ್ತಮ ಶಿಕ್ಷಣ, ಆರೋಗ್ಯ ಕಲ್ಪಿಸುವಲ್ಲಿ ಅವರು ನಿರತರಾಗಿದ್ದಾರೆ, ಅನೇಕ ಗ್ರಾಮಗಳಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿ ಹಳ್ಳಿಗರ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಸಂಸದ ಬಸವರಾಜ ಬೊಮ್ಮಾಯಿ ಮತ್ತು ಜೋಶಿ ಕುಟುಂಬದ ಸದಸ್ಯರು.

ಇದನ್ನೂ ಓದಿ: ಪದ್ಮ ಪ್ರಶಸ್ತಿ ಪ್ರಕಟ; ರಾಜ್ಯದ ಶತಾವಧಾನಿ ಆರ್ ಗಣೇಶ್‌ಗೆ ಪದ್ಮಭೂಷಣ, 7 ಮಂದಿಗೆ ಪದ್ಮಶ್ರೀ ಅವಾರ್ಡ್

ಪ್ರತಿ ವರ್ಷ ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ, ಇಂಜಿನಿಯರಿಂಗ್, ವ್ಯಾಪಾರ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಭಾರತೀಯ ನಾಗರಿಕರಿಗೆ ಸರ್ಕಾರದಿಂದ ನೀಡಲಾಗುವ ಪದ್ಮ ಪ್ರಶಸ್ತಿಗೆ ಪ್ರಭಾಕರ ಕೋರೆ ಸೇರಿ ರಾಜ್ಯದ 8 ಮಂದಿ ಭಾಜನರಾಗಿದ್ದಾರೆ. ಅಂಕೇಗೌಡ ಎಂ., ಎಸ್.ಜಿ. ಸುಶೀಲಮ್ಮ, ಶಶಿಶೇಖರ್ ವೆಂಪತಿ, ಶುಭಾ ವೆಂಕಟೇಶ್ ಐಯ್ಯಂಗಾರ್, ಡಾ.ಸುರೇಶ್ ಹನಗವಾಡಿ, ಟಿ.ಟಿ. ಜಗನ್ನಾಥನ್ ಕೂಡ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಶತಾವಧಾನಿ ಆರ್. ಗಣೇಶ್ ಅವರಿಗೆ ಪ್ರಸಕ್ತ ಸಾಲಿನ ಪದ್ಮಭೂಷಣ ಪ್ರಶಸ್ತಿ ಒಲಿದು ಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *