ಹುಬ್ಬಳ್ಳಿ, (ಡಿಸೆಂಬರ್ 07): ಇಂಡಿಗೋ ವಿಮಾನಯಾನ ಸಂಸ್ಥೆ ಸೃಷ್ಟಿಸಿದೆ ಈ ನರಕಯಾನ, ಆರನೇ ದಿನವಾದ ಇಂದು ಕೊಂಚ ಸುಧಾರಿಸಿದೆ. ಇಂದು ಇಂಡಿಗೋದ ಎಲ್ಲಾ ವಿಮಾನಗಳು ಕೂಡ ಹಾರಿಲ್ಲ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹಾರಬೇಕಾಗಿದ್ದ ಸುಮಾರು 61 ಇಂಡಿಗೋ ವಿಮಾನಗಳು ಇಂದೂ ಕೂಡ ಹಾರಾಡದೇ ನಿಂತಲ್ಲೇ ನಿಂತಿದೆ. ದೆಹಲಿ, ಹೈದರಾಬಾದ್, ಇಂದೋರ್, ರಾಯಪುರ, ಕೋಲ್ಕತ್ತಾ, ಮಂಗಳೂರು, ಕೊಚ್ಚಿ, ಶ್ರೀನಗರ, ಭೋಪಾಲ್ ಸೇರಿ ದೇಶದ ವಿವಿಧೆಡೆ ತೆರಳಬೇಕಿದ್ದ ಕೆಲ ವಿಮಾನಗಳು ಹಾರಾಟ ರದ್ದಾಗಿವೆ. ಇದರಿಂದ ಬೇರೆ ಕಡೆ ತೆರಳಲು ಮೊದಲೇ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ಟಿಕೆಟ್ ರದ್ದಾಗಿ ಇಂಡಿಗೋ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇನ್ನು ಇಂಡಿಗೋ ಈ ಸ್ಥಿತಿಗೆ ಕಾರಣ ಯಾರು ಎನ್ನುವ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಇನ್ನು ಕೆಲವು ಕೇಂದ್ರ ಸರ್ಕಾರವೇ ಇದಕ್ಕೆ ನೇರ ಕಾರಣ ಎಂದು ಟೀಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ಪಷ್ಟನೆ ನೀಡಿದ್ದಾರೆ.