Headlines

ರೈಲ್ವೇ ಪ್ರಯಾಣಿಕರಿಗೆ ಗುಡ್​​ ನ್ಯೂಸ್​​: ಯಲಹಂಕ- ಅರಸೀಕೆರೆ ಮೆಮು ರೈಲು ಸೇವೆ ಆರಂಭ

ರೈಲ್ವೇ ಪ್ರಯಾಣಿಕರಿಗೆ ಗುಡ್​​ ನ್ಯೂಸ್​​: ಯಲಹಂಕ- ಅರಸೀಕೆರೆ ಮೆಮು ರೈಲು ಸೇವೆ ಆರಂಭ


ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್: ಯಲಹಂಕ- ಅರಸೀಕೆರೆ ಮೆಮು ರೈಲು ಸೇವೆ ಆರಂಭ

ಬೆಂಗಳೂರು, ಮಾರ್ಚ್ 27: ತುಮಕೂರು ಮಾರ್ಗವಾಗಿ ಬೆಂಗಳೂರಿನಿಂದ ಅರಸೀಕೆರೆಗೆ ಮೆಮು ರೈಲು ಸೇವೆ ಆರಂಭಗೊಂಡಿದ್ದು, ಯಲಹಂಕದಿಂದ ಯಶವಂತಪುರ ಮಾರ್ಗವಾಗಿ ಮೆಮು ರೈಲು ಸಂಚಾರ ನಡೆಸಲಿದೆ ಎಂದು ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಕಚೇರಿಯಿಂದ ಮಾಹಿತಿ ನೀಡಲಾಗಿದೆ. ಬಹುದಿನದ ಬೇಡಿಕೆಯನ್ನು ನಿಗದಿಪಡಿಸಲಾಗಿದೆ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ನೂತನ ಮೆ ರೈಲಿನ ಸೇವೆಯನ್ನು ಒದಗಿಸಲಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಕೂಡ ಒಂದು ಪೋಸ್ಟ್ ಮಾಡಿ ಮಾಹಿತಿ ನೀಡಿ.

ಸೋಮಣ್ಣ ಪೋಸ್ಟ್‌ನಲ್ಲಿ ಏನಿದೆ?

ಯಲಹಂಕದಿಂದ, ಯಶವಂತಪುರ ಮಾರ್ಗವಾಗಿ ಹೊರಡುವ ಈ ಮೆಮು ರೈಲು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು, ಉದ್ಯೋಗಿಗಳು, ರೈತರು, ವ್ಯಾಪಾರಿಗಳು ಸೇರಿದಂತೆ ಪ್ರಯಾಣಿಕರಿಗೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಪ್ರಯಾಣದ ಆಯ್ಕೆಯನ್ನು ಒದಗಿಸಲಾಗಿದೆ. ಈ ಭಾಗದ ಪ್ರಯಾಣಿಕರು ಈ ನೂತನ ಮೆಮು ರೈಲಿನ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರುವುದು ಎಂದು ಸೋಮಣ್ಣ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ ಒಡೆತನದ ಕಾಲೇಜು ಸೇರಿ, ಆರ್‌ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ

ರೈಲಿನ ಕಾರ್ಯಕ್ರಮ

ಯಲಹಂಕ-ಅರಸೀಕೆರೆ ಮೆಮು ರೈಲು ಸಂಖ್ಯೆ 66505 ಬೆಳಗ್ಗೆ 6.45ಕ್ಕೆ ಯಲಹಂಕದಿಂದ ಹೊರಡಲಿದೆ, ಯಶವಂತಪುರ ಮಾರ್ಗವಾಗಿ ಬೆಳಿಗ್ಗೆ 8.58ಕ್ಕೆ ತುಮಕೂರಿಗೆ ತಲುಪಲಿದೆ. 11 ಗಂಟೆಗೆ ಅರಸೀಕರೆಗೆ ತೆರಳಲಿದೆ. ಅದೇ ರೀತಿ ಅರಸೀಕೆರೆಯಿಂದ ಯಲಹಂಕಕ್ಕೆ ಹೊರಡುವ ರೈಲು ಸಂಖ್ಯೆ 66506 ಅರಸೀಕೆರೆಯಿಂದ ಮಧ್ಯಾಹ್ನ 2.15ಕ್ಕೆ ಹೊರಟು ಸಂಜೆ 4.38ಕ್ಕೆ ತುಮಕೂರಿಗೆ, 7.15ಕ್ಕೆ ಯಲಹಂಕಕ್ಕೆ ತಲುಪಲಿದೆ. ಭಾನುವಾರದ ಹೊರತಾಗಿ ವಾರದ ಆರು ದಿನಗಳ ಕಾಲ ಈ ಮೆಮು ರೈಲು ಸೇವೆ ಪ್ರಯಾಣಿಕರಿಗೆ ಲಭ್ಯವಾಗಿದೆ ಎಂದು ಸೋಮಣ್ಣ ಮಾಹಿತಿ ನೀಡಿದ್ದಾರೆ.

ಭಾನುವಾರವೂ ರೈಲು ಸಂಚಾರಕ್ಕೆ ಬೇಡಿಕೆ

ಮೆಮು ರೈಲು ಸೇವೆಯ ಪ್ರಾರಂಭದ ಬಗ್ಗೆ ಸೋಮಣ್ಣ ಅವರು ಹಾಕಿರುವ ಪೋಸ್ಟ್‌ಗೆ ಸಾರ್ವಜನಿಕರಿಂದ ಉತ್ತಮವಾದ ಪ್ರತಿಕ್ರಿಯೆಯಿದೆ. ಆ ಮೇಲಿಂದ ಭಾನುವಾರವೂ ಸೇರಿ ವಾರದ 7 ದಿನಗಳ ಕಾಲವೂ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ. ತಿಪಟೂರಿನಿಂದ ಭಾನುವಾರಮಧ್ಯಾಹ್ನದ ಮೇಲೆ ಯಾವುದೇ ರೈಲು ಇರುವುದಿಲ್ಲ. ಹೀಗಾಗಿ ಅಂದೂ ಪ್ರಯಾಣಿಕರು ಜಾಸ್ತಿ ಇರುವುದಾಗಿ ಸಚಿವರ ಗಮನ ಸೆಳೆದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *