
ಬೆಂಗಳೂರು, ಮಾರ್ಚ್ 26: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಭಾರಿ ಆಲಿಕಲ್ಲು ಮಳೆ ಸುರಿದಿದೆ. ಬಿಸಿಲು ನಾಡು ಎಂದೆಂದೂ ಹೆಸರಾದ ಕಲಬುರಗಿ ಮತ್ತು ಧಾರವಾಡ ಜಿಲ್ಲೆಗಳಂತಹ ಕಾಶ್ಮೀರದಂತಹ ಹಿಮಾವೃತ ಪ್ರದೇಶಗಳಂತೆ ಕಾಣಿಸಿ ಗಮನ ಸೆಳೆದಿವೆ. ಕಲಬುರಗಿ ಜಿಲ್ಲೆಯ ಚನ್ನೂರು ಗ್ರಾಮದಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಇಡೀ ಪ್ರದೇಶವು ಹಿಮದ ರಾಶಿಯಿಂದ ಆವರಿಸಿತ್ತು. ರಸ್ತೆಗಳ ಮೇಲೆ ಮಂಜುಗಡ್ಡೆ ರಾಶಿ ಕಾಣಿಸಿದೆ. ಸಾಮಾನ್ಯವಾಗಿ ಕಾಣಸಿಗದ ಈ ಪ್ರಮಾಣದ ಆಲಿಕಲ್ಲು ಮಳೆಯು ಸ್ಥಳೀಯ ಜನಜೀವನದ ಮೇಲೆ ಪರಿಣಾಮ ಬೀರಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಮಳೆಯಿಂದಾಗಿ ದ್ರಾಕ್ಷಿ ಬೆಳೆ ವ್ಯಾಪಕವಾಗಿ ನಾಶವಾಗಿದೆ, ರೈತರಿಗೆ ದೊಡ್ಡ ನಷ್ಟವಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ