ಥ್ರಿಲ್ಲರ್ ಮಂಜು, ಉಪೇಂದ್ರ ನಡುವಿನ 35 ವರ್ಷಗಳ ಸ್ನೇಹ ಎಂಥದ್ದು ನೋಡಿ

ಥ್ರಿಲ್ಲರ್ ಮಂಜು, ಉಪೇಂದ್ರ ನಡುವಿನ 35 ವರ್ಷಗಳ ಸ್ನೇಹ ಎಂಥದ್ದು ನೋಡಿ


ನಟ ಉಪೇಂದ್ರ ಹಾಗೂ ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರು ಒಟ್ಟಿಗೆ ಪ್ರಯಾಣಿಸಿದ್ದಾರೆ. ಎಲ್ಲಿಗೆ ಎಂಬುದನ್ನು ಥ್ರಿಲ್ಲರ್ ಮಂಜು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಆತ್ಮೀಯ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದಕ್ಕೆ ಉಪೇಂದ್ರ (ಉಪೇಂದ್ರ) ಅವರಿಗೆ ಥ್ರಿಲ್ಲರ್ ಮಂಜು ಧನ್ಯವಾದ. ‘ಒಂದು ಸಮಾರಂಭಕ್ಕೆ ಉಪ್ಪಿ ಸರ್ ನನ್ನ ಜೊತೆ ಬರುತ್ತಿದ್ದಾರೆ. ನನ್ನ ಸಂಬಂಧಿಯ ಮದುವೆಗೆ ಒಂದೇ ಮಾತು ಕರೆದಿದ್ದಕ್ಕೆ ಬಂದಿದ್ದಾರೆ. ಅವರ ಅಮೂಲ್ಯವಾದ ಕೊಡುಗೆ’ ಎಂದು ಥ್ರಿಲ್ಲರ್ ಮಂಜು (ಥ್ರಿಲ್ಲರ್ ಮಂಜು) ಹೇಳಿದ್ದಾರೆ. ಅದಕ್ಕೆ ಉಪೇಂದ್ರ ಹೇಳಿದ್ದಾರೆ. ‘ಮಾಸ್ಟರ್ ಕರೆದರೆ ಆಗಲ್ಲ ಅಂತ ಹೇಳೋಕೆ ಆಗತ್ತಾ? ನಮ್ಮ ಮತ್ತು ಇವರ ಸಂಬಂಧ 35 ವರ್ಷಗಳಷ್ಟು ಹಳೆಯದು. ಅಂದಿನಿಂದ ನಮಗೆ ಎಂಥೆಂಥಾ ಒಳ್ಳೊಳ್ಳೆಯ ಫೈಟ್ಸ್ ಕೊಟ್ಟಿದ್ದಾರೆ. ‘ಶ್’ ಸಿನಿಮಾ ಹಿಟ್ ಆಗಲು ಫೈಟ್ಸ್ ಕಾರಣ. ಅದನ್ನು ಮರೆಯೋಕೆ ಆಗಲ್ಲ. ಅವರು ಕರೆದಾಗ ಇಲ್ಲ ಅಂತ ಹೇಗೆ ಹೇಳಲಿ. ನಿಮ್ಮ ಜೊತೆ ಬರುತ್ತಿರುವುದು ತುಂಬಾ ಸಂತೋಷ’ ಎಂದು ಉಪೇಂದ್ರ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *