ರಾಮ್ ಪೋತಿನೇನಿ, ಉಪೇಂದ್ರ (ಉಪೇಂದ್ರ) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ನಿನ್ನೆ (ನವೆಂಬರ್ 27) ಬಿಡುಗಡೆಯಾಗಿದೆ. ಸಿನಿಮಾಕ್ಕೆ ಮೊದಲ ದಿನ ಬಹಳ ಒಳ್ಳೆಯ ವಿಮರ್ಶೆಗಳು, ಪ್ರತಿಕ್ರಿಯೆಗಳು ಇವೆ. ಸಿನಿಮಾದ ಕತೆ, ಚಿತ್ರಕತೆ, ಸಂಭಾಷಣೆಗಳು ಅದ್ಭುತವಾಗಿದೆ ಎಂದು ವಿಮರ್ಶಕರು, ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದಾರೆ. ರಾಮ್ ಪೋತಿನೇನಿ, ಉಪೇಂದ್ರ ಅವರು ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟಿದ್ದರು. ಸಿನಿಮಾ ಪಕ್ಕಾ ಹಿಟ್ ಎಂದೆಂದೂ ಉಪ್ಪಿ, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಗಳಲ್ಲಿ ಹೇಳಿದ್ದರು. ಹಾಗಿದ್ದರೆ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಿದೆ?
‘ಆಂದ್ರ ಕಿಂಗ್ ತಾಲೂಕ’ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ 10 ಕೋಟಿಗೂ ಅಧಿಕ ಮೊತ್ತ ಗಳಿಸಿದೆ. ರಾಮ್ ಪೋತಿನೇನಿ ಸಿನಿಮಾಗಳು ಮೊದಲ ದಿನ 10 ಕೋಟಿ ಗಳಿಕೆ ಮಾಡುವುದು ಸಣ್ಣ ವಿಷಯವಲ್ಲ. ರಾಮ್ ಅವರ ಕಳೆದ ಕೆಲವು ಸಿನಿಮಾಗಳು ಮೊದಲ ದಿನ 5 ಕೋಟಿ ಸಹ ಗಳಿಸಿರುವುದು ಅನುಮಾನ. ಹಾಗಿರುವಾಗ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಮೊದಲ ದಿನ ಉತ್ತಮ ಗಳಿಕೆಯನ್ನೇ ಮಾಡಿದೆ.
‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಅಮೆರಿಕದಲ್ಲಿ ಉತ್ತಮ ಗಳಿಕೆ ಮಾಡಿದೆ. ಅಮೆರಿಕದಲ್ಲಿ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಸುಮಾರು 176 ಲೊಕೇಶನ್‌ಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನ ಅಮೆರಿಕ ಒಂದರಲ್ಲಿ 2.50 ಲಕ್ಷ ಡಾಲರ್ ಮೊತ್ತ ಗಳಿಸಿದೆ. ಅಂದರೆ ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಈ ಸಿನಿಮಾ ಮೊದಲ ದಿನ ಅಮೆರಿಕದಲ್ಲಿ 2.23 ಕೋಟಿ ರೂಪಾಯಿ ಹಣ ಗಳಿಸಿದೆ. ಸಿನಿಮಾ ಶುಕ್ರವಾರದಿಂದ ಕಲೆಕ್ಷನ್ ಹೆಚ್ಚಿಸಿಕೊಳ್ಳುವ ಭರವಸೆ ಮೂಡಿಸಿದೆ.
ಇದನ್ನೂ ಓದಿ:ರಾಮ್ ಪೋತಿನೇನಿಗೆ ಕನ್ನಡ ಹೇಳಿಕೊಟ್ಟ ಉಪೇಂದ್ರ
‘ಆಂಧ್ರ ಕಿಂಗ್ ತಾಲೂಕ’ ಸಿನಿಮಾದ ಮೊದಲ ದಿನ ಬಹಳ ಒಳ್ಳೆಯ ವಿಮರ್ಶೆಗಳು ಇವೆ. ಸರಳ ಹಾಗೂ ಸುಂದರ ಸಿನಿಮಾ ಇದೆಂದು ಹಲವಾರು ವಿಮರ್ಶಕರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳಿವೆ. ಶುಕ್ರವಾರ ಹಾಗೂ ವೀಕೆಂಡ್ ನಲ್ಲಿ ಸಿನಿಮಾದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಂಭವ ಇದೆ.
‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ, ಒಬ್ಬ ಅಭಿಮಾನಿ ಹಾಗೂ ಒಬ್ಬ ಸ್ಟಾರ್ ಹೀರೋ ನಡುವೆ ನಡೆಯುವ ಕಥೆಯನ್ನು ಒಳಗೊಂಡಿದೆ. ಒಬ್ಬರನ್ನೊಬ್ಬರು ಎಂದೂ ನೋಡದಿದ್ದರೂ ಸಹ ಹೇಗೆ ಒಬ್ಬರ ಜೀವನದ ಮೇಲೆ ಪ್ರಭಾವ ಬೀರಿದ್ದಾರೆ ಎಂಬುದನ್ನು ಚೆನ್ನಾಗಿ ತೋರಿಸಲಾಗಿದೆ. ಸಿನಿಮಾವನ್ನು ಮಹೇಶ್ ಬಾಬು ಪಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿ. ಮುರಳಿ ಶರ್ಮಾ ಮತ್ತು ರಾವ್ ರಮೇಶ್ ಅವರು ಪ್ರಧಾನ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ