ಉಪೇಂದ್ರ ಶಿಷ್ಯನ ‘ಐ ಆ್ಯಮ್ ಗಾಡ್’ ಟ್ರೇಲರ್; ನ.7ಕ್ಕೆ ಸಿನಿಮಾ ಬಿಡುಗಡೆ

ಉಪೇಂದ್ರ ಶಿಷ್ಯನ ‘ಐ ಆ್ಯಮ್ ಗಾಡ್’ ಟ್ರೇಲರ್; ನ.7ಕ್ಕೆ ಸಿನಿಮಾ ಬಿಡುಗಡೆ


‘ಐ ಆಯಮ್ ಗಾಡ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದು ಉಪೇಂದ್ರ ಅವರ ಶಿಷ್ಯ ರವಿ ಗೌಡ (ರವಿ ಗೌಡ) ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರುವ ಸಿನಿಮಾ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ರಿಯಲ್ ಸ್ಟಾರ್ ಉಪೇಂದ್ರ (ಉಪೇಂದ್ರ) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಟ್ರೇಲರ್ ಬಿಡುಗಡೆ ಮಾಡಿ, ಮೆಚ್ಚುಗೆ ಇದೆ. ಈ ಸಿನಿಮಾದ 2 ಹಾಡುಗಳು ಹಿಟ್ ಆಗಿವೆ. ಈಗ ಟ್ರೇಲರ್ ಮೂಲಕ ಗಮನ ಸೆಳೆಯಲಾಗಿದೆ. ‘ಐ ಆಯಮ್ ಗಾಡ್’ (ನಾನು ದೇವರು) ಚಿತ್ರದಲ್ಲಿ ಲವ್ ಸ್ಟೋರಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ಇದೆ.

‘ಐ ಆ್ಯಮ್ ಗಾಡ್’ ಎಂಬ ಡೈಲಾಗ್ ಕೇಳಿದರೆ ಉಪೇಂದ್ರ ಅವರೇ ನೆನಪಾಗುತ್ತಾರೆ. ‘ಎ’ ಸಿನಿಮಾ ಆ ಡೈಲಾಗ್ ಅಷ್ಟು ಫೇಮಸ್. ರವಿ ಗೌಡ ಅವರು ಉಪೇಂದ್ರರ ಗರಡಿಯಲ್ಲಿ ಸಿನಿಮಾದ ಪಾಠಗಳನ್ನು ಕಲಿತವರು. ಉಪೇಂದ್ರ ಜೊತೆ ‘ಉಪ್ಪಿ 2’ ಸಿನಿಮಾದಲ್ಲಿ ಕೆಲಸ ಮಾಡಿ ಅವರು ಅನುಭವ ಪಡೆದರು. ಈಗ ‘ಐ ಆಯಮ್ ಗಾಡ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಉಪೇಂದ್ರ ಅವರಿಗೆ ‘ಐ ಆಯಮ್ ಗಾಡ್’ ಸಿನಿಮಾದ ಟ್ರೇಲರ್ ಇಷ್ಟವಾಗಿದೆ. ಟ್ರೇಲರ್ ಬಿಡುಗಡೆ ಬಳಿಕ ಅವರು ಮಾತನಾಡಿ, ತಮ್ಮ ಶಿಷ್ಯನ ಸಿನಿಮಾ ಪ್ರೀತಿಯನ್ನು ಶ್ಲಾಘಿಸಿದರು. ‘ಉಪ್ಪಿ 2’ ಸಿನಿಮಾದ ಸಂದರ್ಭದಲ್ಲಿ ರವಿ ಗೌಡ ಬಹಳ ಆಸಕ್ತಿಯಿಂದ ಸಿನಿಮಾದ ಕೆಲಸಗಳನ್ನು ಕಲಿಯುವಂತೆ ಉಪೇಂದ್ರ ನೆನಪು ಮಾಡಿಕೊಂಡರು.

‘ಐ ಆಯಮ್ ಗಾಡ್’ ಸಿನಿಮಾದ ಟ್ರೇಲರ್:

ಈ ವೇಳೆ ಮಾತನಾಡಿದ ರವಿ ಗೌಡ, ‘ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದಾಗ ಯೂನಿವರ್ಸಿಟಿ ಬೇಡ ಉಪ್ಪಿ ಸರ್’ ಹತ್ತಿರ ಹೋಗುವುದೇ ಬೆಸ್ಟ್’ ಅಂತ ಹೋಗಿ ರಿಕ್ವೆಸ್ಟ್ ಮಾಡಿ ಸೇರಿದೆ. ಐ ಆ್ಯಮ್ ಗಡ್ ಸಿನಿಮಾ ಕಷ್ಟಪಟ್ಟು ಮಾಡಿದ್ದೇವೆ. ಬಂದು ನೋಡಿ ಅಂತ ನಾವು ಹೇಳಲ್ಲ. ಆದರೆ ನಿಮ್ಮ ಗುಂಪಿನಲ್ಲಿ ಪ್ರತಿ ಶುಕ್ರವಾರ ಕನ್ನಡ ಸಿನಿಮಾ ನೋಡುವ ಒಬ್ಬ ವ್ಯಕ್ತಿ ಇದ್ದೇ ಇರ್ತಾರೆ. ಅವರಿಗೆ ಕರೆ ಮಾಡಿ ನಮ್ಮ ಸಿನಿಮಾ ಹೇಗಿದೆ ಅಂತ ಕೇಳಿ ಸಾಕು’ ಎಂದು ಹೇಳಿದರು.

ಇದನ್ನೂ ಓದಿ: ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದವರ ಸುಳಿವು ಪತ್ತೆ

‘ಐ ಆಯಮ್ ಗಾಡ್’ ಸಿನಿಮಾದ ಟ್ರೇಲರ್‌ನಲ್ಲಿ ಕಥೆಯ ಬಗ್ಗೆ ಹಿಂಟ್ ನೀಡಲಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಲವ್ ಸ್ಟೋರಿ ಇರುವ ಸಿನಿಮಾ ಎಂಬ ಸುಳಿವು ಸಿಕ್ಕಿದೆ. ಸಿನಿಮಾದ ಮೇಕಿಂಗ್ ಶೈಲಿ ಗಮನ ಸೆಳೆಯುತ್ತಿದೆ. ಉಪ್ಪಿ ಶಿಷ್ಯನ ಸಿನಿಮಾ ಎಂಬ ಕಾರಣದಿಂದಲೂ ಹೆಚ್ಚು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ವಿಜೇತಾ, ರವಿಶಂಕರ್‌, ಅವಿನಾಶ್‌, ಅರುಣಾ ಬಾಲರಾಜ್‌, ನಿರಂಜನ್‌ ಕುಮಾರ್‌ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *