Headlines

‘ಎ’ ಸಿನಿಮಾದಲ್ಲಿ ನಟಿಸಿದ ಬಾಲಕ ಬೆಳೆದು ದೊಡ್ಡವನಾಗಿ ಸುದ್ದಿಗೋಷ್ಠಿಯಲ್ಲಿ ಉಪೇಂದ್ರಗೆ ಸಿಕ್ಕಾಗ

‘ಎ’ ಸಿನಿಮಾದಲ್ಲಿ ನಟಿಸಿದ ಬಾಲಕ ಬೆಳೆದು ದೊಡ್ಡವನಾಗಿ ಸುದ್ದಿಗೋಷ್ಠಿಯಲ್ಲಿ ಉಪೇಂದ್ರಗೆ ಸಿಕ್ಕಾಗ


ಸಿನಿಮಾಗಳನ್ನು ಮಾಡುವಾಗ ನಿರ್ದೇಶಕರು ಸಾಕಷ್ಟು ಅತಿಥಿ ಪಾತ್ರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಹೀಗೆ ಬಂದು ಹಾಗೆ ಹೋಗುತ್ತಾರೆ. ಅವರ ಬಗ್ಗೆ ನಿರ್ದೇಶಕರಿಗೆ ನೆನಪಿರುವುದೇ ಇಲ್ಲ. ಮುಂದೊಂದು ದಿನ ಅವರು ಮತ್ತೆ ಸಿಗಬಹುದು. ಈ ರೀತಿಯ ಅಪರೂಪದ ಘಟನೆ ಒಂದು ‘ಯುಐ’ (UI) ಚಿತ್ರದ ಸುದ್ದಿಗೋಷ್ಠಿ ವೇಳೆ ನಡೆದಿತ್ತು ಎಂದರೆ ನಂಬಲೇಬೇಕು. ‘ಎ’ ಚಿತ್ರದಲ್ಲಿ ಬಾಲಕನ ಪಾತ್ರ ಮಾಡಿದ್ದ ಹುಡುಗ ಈಗ ಬೆಳೆದು ದೊಡ್ಡವನಾಗಿ ಉಪ್ಪಿ ಎದುರು ಬಂದು ನಿಂತಿದ್ದಾನೆ. ಆ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ ಕೇಳಿ.

‘ಎ’ ಸಿನಿಮಾ ಬಿಡುಗಡೆ ಆಗಿದ್ದು 1998ರಲ್ಲಿ. ಅಂದರೆ ಸುಮಾರು 27 ವರ್ಷಗಳ ಹಿಂದೆ. ‘ಐ ಆ್ಯಮ್ ಗಾಡ್, ಗಾಡ್ ಈಸ್ ಗ್ರೇಟ್’ ಎಂದು ಡೈಲಾಗ್ ಹೊಡೆಯುತ್ತಾ ಉಪ್ಪಿ ಸುತ್ತಾಡುವುದನ್ನು ಸಿನಿಮಾದಲ್ಲಿ ಕಾಣಬಹುದು. ಈ ಚಿತ್ರದ ಆರಂಭದಲ್ಲಿ ಬಾರದ ವ್ಯಕ್ತಿಗಳು ಎಂದು ಉಪೇಂದ್ರ ಸಾಯಿಸೋ ದೃಶ್ಯ ಇದೆ. ಈ ವೇಳೆ ಪತ್ತೆ ಬಳಿ ಉಪ್ಪಿ ಅವರು ನಡೆದು ಬರುವಾಗ, ಮಹಿಳೆ ಒಬ್ಬಳು ಪತಿಗೆ ‘ಸತ್ತೋಗು’ ಎಂದು ಹೇಳುತ್ತಾಳೆ. ಮರುಕ್ಷಣವೇ ಗುಂಡು ಹೊಡೆದು ಉಪ್ಪಿ ಆ ವ್ಯಕ್ತಿಯನ್ನು ಸಾಯಿಸುತ್ತಾರೆ. ಈ ರೀತಿಯಲ್ಲಿ ದೃಶ್ಯ ಇದೆ.

ಉಪ್ಪಿ ಹಾಗೂ ಎ ಕಲಾವಿದರ ಭೇಟಿ

ಇದನ್ನೂ ಓದಿ

ಈ ದಂಪತಿಗೆ ಒಂದು ಮಗು ಇರುತ್ತದೆ. ಆ ಬಾಲಕ ಅಳುತ್ತಾನೆ. ಇದಕ್ಕೆ ಸಮಜಾಯಿಶಿ ಕೊಡೋ ಉಪ್ಪಿ, ‘ಅಳಬೇಡ, ಅವರ ತೆವಲಿಗೆ ನಿನ್ನ ಹುಟ್ಟಿಸಿದ್ದಾರೆ. ಜಾಸ್ತಿ ಯೋಚನೆ ಮಾಡಿದ್ರೆ ನೀನು ನನ್ನ ರೀತಿ ಆಗ್ಬಿಡ್ತೀಯಾ. ಸೆಂಟಿಮೆಂಟ್ ಇದ್ರೆ ಖಾಲಿ ತಟ್ಟೆನೇ ಗಟ್ಟಿ ಆಗಿಬಿಡುತ್ತೆ. ಪ್ರಪಂಚ ವಿಶಾಲವಾಗಿದೆ. ಆರಾಮಾಗಿ ಹೋಗಿ ಬದುಕಿಕೋ’ ಎನ್ನುತ್ತಾರೆ ಉಪ್ಪಿ. ಆ ಕ್ಷಣವೇ ಬಾಲಕ ಓಡಿ ಹೋಗುತ್ತಾನೆ.

ಇದನ್ನೂ ಓದಿ: ‘ರಕ್ತ ಕಾಶ್ಮೀರ’ ಸಿನಿಮಾ ಪ್ರಚಾರಕ್ಕೆ ಉಪ್ಪಿ-ರಮ್ಯಾ ಬರುತ್ತಿಲ್ಲವೇಕೆ? ಉತ್ತರಿಸಿದ ಬಾಬು ಸಿಂಗ್

ಹೀಗೆ ಓಡಿ ಹೋದ ಬಾಲಕ ಮತ್ತೆ ಉಪ್ಪಿಗೆ ಸಿಕ್ಕಿದ್ದು ಸುದ್ದಿಗೋಷ್ಠಿಯಲ್ಲಿ. ‘ಯುಐ’ ಚಿತ್ರದ ಸುದ್ದಿಗೋಷ್ಠಿ ಹೈದರಾಬಾದ್‌ನಲ್ಲಿ ನಡೆದಿತ್ತು. ಈ ವೇಳೆ ಸುದ್ದಿಗೋಷ್ಠಿಗೆ ಆ ಹುಡುಗ ಕೂಡ ಬಂದಿದ್ದರು. ‘ಎ ಚಿತ್ರದಲ್ಲಿ ನಟಿಸಿದ ಹುಡುಗ ನಾನೇ’ ಎಂದು ಪರಿಚಯಿಸಿದ್ದ. ಇದನ್ನು ಕೇಳಿ ಉಪ್ಪಿ ಅವರಿಗೆ ಅಚ್ಚರಿ ಆಯಿತು. ‘ಅಲ್ಲಿ ಓಡಿ ಹೋದ ನೀವು, ಈಗ ಬಂದಿದ್ದೀರಾ’ ಎಂದು ಕೇಳಿ ನಕ್ಕರು ಉಪ್ಪಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 8:03 am, ಶುಕ್ರ, 31 ಅಕ್ಟೋಬರ್ 25



Source link

Leave a Reply

Your email address will not be published. Required fields are marked *