
ಜನವರಿ 22: ಎಟಿಎಂಗಳಲ್ಲಿ ಕ್ಯಾಶ್ ವಿತ್ಡ್ರಾ ಮಾಡಲು ನಿರ್ದಿಷ್ಟ ಮಿತಿ, ಶುಲ್ಕ ಇತ್ಯಾದಿ ನಿರ್ಬಂಧಗಳಿವೆ. ವಿವಿಧ ಬ್ಯಾಂಕುಗಳು ತಮ್ಮ ಈ ಎಟಿಎಂ ಶುಲ್ಕಗಳನ್ನು ನಿರಂತರವಾಗಿ ಪರಿಷ್ಕರಿಸುತ್ತವೆ. ಮುಂದಿನ ತಿಂಗಳಿಂದ ಹೊಸ ಎಟಿಎಂ ನಿಯಮಗಳು ಜಾರಿಗೆ ಬರಲಿವೆ. ಏಪ್ರಿಲ್ 1 ರಿಂದ ಬರಲಿರುವ ಈ ನಿಯಮ ಬದಲಾವಣೆಗಳು, ದಿನದ ವಿಟ್ಡ್ರಾಯಲ್ ಮಿತಿ, ಯುಪಿಐ ಆಧಾರಿತ ಕ್ಯಾಶ್ ವಿಟ್ಡ್ರಾಯಲ್ ಇತ್ಯಾದಿಗಳನ್ನು ಒಳಗೊಂಡಿದೆ.
ಯುಪಿಐ ಆಧಾರಿತ ಕ್ಯಾಶ್ ವಿತ್ತರಾಯಲ್‌ಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಶುಲ್ಕ
ಎಚ್ಡಿಎಫ್ಸಿ ಬ್ಯಾಂಕ್ ಈಗ ಎಟಿಎಂ ವಿಟ್ರಾಯಲ್ ನಿಯಮಗಳಲ್ಲಿ ಬದಲಾವಣೆಯಾಗಿದೆ. ಉಚಿತ ಎಟಿಎಂ ಟ್ರಾನ್ಸಾಕ್ಷನ್ ಮಾಡಲು ಇರುವ ಮಿತಿಯಲ್ಲಿ ಯುಪಿಐ ಆಧಾರಿತ ಕ್ಯಾಶ್ ವಿಟ್‌ರಾಯಲ್ ಕೂಡ ಸೇರಿರುತ್ತದೆ. ಎಟಿಎಂಗಳಲ್ಲಿ ಯುಪಿಐ ಬಳಸಿ ಕ್ಯಾಶ್ ವಿತ್ತ್ರಾ ಮಾಡುವುದನ್ನು ಎಟಿಎಂ ಟ್ರಾನ್ಸಾಕ್ಷನ್ ಎಂದು ನಡೆಸಲಾಗುತ್ತದೆ. ಉಚಿತ ಟ್ರಾನ್ಸಾಕ್ಷನ್ ಮಿತಿಯ ನಂತರ ಮಾಡಲಾಗುವ ವಹಿವಾಟುಗಳಿಗೆ ಎಚ್ಡಿಎಫ್ಸಿ ಬ್ಯಾಂಕ್ ಶುಲ್ಕ ವಿಧಿಸುತ್ತದೆ.
ಇದನ್ನೂ ಓದಿ: ಈ ಫಂಡ್‌ನಲ್ಲಿ 10,000 ರೂ ಎಸ್‌ಐಪಿ; 21 ಕೋಟಿ ಬರೋಬ್ಬರಿ 2 ರೂ ರಿಟರ್ನ್ಸ್
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಗ್ರಾಹಕರು ಪ್ರತೀ ತಿಂಗಳ ಬ್ಯಾಂಕ್‌ನ ಎಟಿಎಂಗಳಲ್ಲಿ ಐದು ಬಾರಿ ಹಣ ವಿಟ್ಡ್ರಾ ಮಾಡಬಹುದು. ಬೇರೆ ಬ್ಯಾಂಕ್ನ ಎಟಿಎಂಗಳಲ್ಲಿ ಮೂರು ಬಾರಿ ಉಚಿತವಾಗಿ ಟ್ರಾನ್ಸಾಕ್ಷನ್ ಮಾಡಬಹುದು.
ಪಂಜಾಬ್ ಬ್ಯಾಂಕ್‌ನ ವಿತ್ತ್ರಾಯಲ್ ಮಿತಿ ಇಳಿಕೆ
ಪಂಜಾಬ್ ಬ್ಯಾಂಕ್ ತನ್ನ ಕೆಲವು ನಿರ್ದಿಷ್ಟ ಡೆಬಿಟ್ ಕಾರ್ಡ್‌ಗಳಿಗೆ ಎಟಿಎಂ ವಿತ್‌ರಾಯಲ್ ಮಿತಿಯನ್ನು ಪರಿಷ್ಕರಿಸಿದೆ. ನಿತ್ಯದ ವಿತ್ತ್ರಾಯಲ್ ಮಿತಿಯನ್ನು ಕಡಿಮೆ ಮಾಡಲಾಗಿದೆ. ಆದರೆ, ಹೊಸ ಮಿತಿ ಎಷ್ಟು ಎಂಬುದು ಗೊತ್ತಾಗಿಲ್ಲ. ಏಪ್ರಿಲ್ 1 ರಿಂದ ಅದು ಜಾರಿಯಾಗಲಿದೆ.
ಇದನ್ನೂ ಓದಿ: ಹೂಡಿಕೆಗೆ ಯಾವ ರೀತಿಯ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು? ಗಮನಿಸಬೇಕಾದ ಅಂಶಗಳಿವು
ಜಿಯೋ ಪೇಮೆಂಟ್ಸ್ ಬ್ಯಾಂಕ್ನಿಂದ ಯುಪಿಐ ಕಾರ್ಡ್ಲೆಸ್ ಕ್ಯಾಶ್ ವಿತ್ತರಾಯಲ್
ಜಿಯೋ ಫೈನಾನ್ಷಿಯಲ್ ಸರ್ವೀಸ್‌ನ ಅಂಗಸಂಸ್ಥೆಯಾದ ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಕಂಪನಿಯು ಯುಪಿಐ ಆಧಾರಿತ ಕ್ಯಾಶ್ ವಿಟ್ರಾಯಲ್ ಫೆಸಿಲಿಟಿ ಆರಂಭಿಸಿದೆ. ಅದರ ಬ್ಯುಸಿನೆಸ್ ಕರೆಸ್ಪಾಂಡೆಂಟ್ ನೆಟ್ವರ್ಕ್ ಮೂಲಕ ಈ ಸೇವೆ ಸಿಗುತ್ತದೆ. ಜಿಯೋದ ಯುಪಿಐ ಶಕ್ತ ಆಯಪ್ ಮೂಲಕ ಯುಪಿಐ ಕ್ಯುಆರ್ ಕೋಡ್ ಸ್ಕ್ಯಾನಿಂಗ್ ಮಾಡಿ ಕ್ಯಾಶ್ ವಿತ್ತ್ರಾ ಮಾಡಬಹುದು. ಎಟಿಎಂಗಳು ಮತ್ತು ಡೆಬಿಟ್ ಕಾರ್ಡ್ ಅಗತ್ಯ ಇರುವುದಿಲ್ಲ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ