Headlines

Digital Payment ಯುಪಿಐ ಪರ್ವ; ಭಾರತದಲ್ಲಿ ನಗದು ಪಾವತಿಯನ್ನು ಮೀರಿಸಿದ ಡಿಜಿಟಲ್ ವ್ಯವಸ್ಥೆ

Digital Payment ಯುಪಿಐ ಪರ್ವ; ಭಾರತದಲ್ಲಿ ನಗದು ಪಾವತಿಯನ್ನು ಮೀರಿಸಿದ ಡಿಜಿಟಲ್ ವ್ಯವಸ್ಥೆ

Digital Payment ಯುಪಿಐ ಪರ್ವ; ಭಾರತದಲ್ಲಿ ನಗದು ಪಾವತಿಯನ್ನು ಮೀರಿಸಿದ ಡಿಜಿಟಲ್ ವ್ಯವಸ್ಥೆ

ಯುಪಿಐ ಪಾವತಿ ವ್ಯವಸ್ಥೆಯು ನಗದು ಪಾವತಿಯನ್ನು ಮೀರಿಸಿದ್ದು, ಪ್ರಸ್ತುತ ದೇಶದ ಶೇ.57ರಷ್ಟು ವಹಿವಾಟುಗಳು ಯುಪಿಐ ಮೂಲಕವೇ ನಡೆಯುತ್ತಿವೆ. ಕೇಂದ್ರ ಹಣಕಾಸು ಇಲಾಖೆಯ ವರದಿಯು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರುಪೇ ಡೆಬಿಟ್ ಕಾರ್ಡ್ ಬಳಕೆಯನ್ನು ಉತ್ತೇಜಿಸಲು ಶಿಫಾರಸು ಮಾಡಿದೆ.

2006ರಲ್ಲಿ ಜಾರಿಗೊಳಿಸಲಾಗಿದ್ದ ಯುಪಿಎ (ಯುನೈಟೆಡ್‌ ಪೇಮೆಂಟ್‌ ಯೂಸರ್‌ಫೇಸ್‌) ಪಾವತಿ ವ್ಯವಸ್ಥೆಯು, ಇದೀಗ ಭಾರತದಲ್ಲಿ ನಗದು ಪಾವತಿ ಪ್ರಮಾಣವನ್ನೂ ಮೀರಿ ನಿಂತಿದೆ. ದೇಶದಲ್ಲಿ ಯುಪಿಐ ಬಳಕೆ ಪ್ರಮಾಣ ಏರಿಕೆಯಾಗಿದೆ.

ಪ್ರಸಕ್ತ ದೇಶದಲ್ಲಿ ಶೇ.57ರಷ್ಟು ಹಣ ಪಾವತಿ ಯುಪಿಐ ಮೂಲಕವೇ ನಡೆಯುತ್ತಿದೆ. ಯುಪಿಐ, ಹಣ ಪಾವತಿಗೆ ಅತ್ಯಂತ ಆಪ್ತ ವ್ಯವಸ್ಥೆಯಾಗಿ ಹೊರಹೊಮ್ಮಿದೆ ಎಂದು ಸರ್ಕಾರದ ವರದಿಯೊಂದು ಹೇಳಿದೆ. ಡಿಜಿಟಲ್ ಪಾವತಿ ವ್ಯವಸ್ಥೆ ದೇಶದ ಪ್ರತಿಯೊಂದು ಮೂಲೆಯನ್ನು ತಲುಪಿದೆ.

ಕೇಂದ್ರ ಹಣಕಾಸು ಇಲಾಖೆ ವ್ಯಾಪ್ತಿಯ, ಹಣಕಾಸು ಸೇವಾ ಇಲಾಖೆಯು ದೇಶದ 15 ರಾಜ್ಯಗಳಲ್ಲಿ ಜನಸಾಮಾನ್ಯರು, ವ್ಯಾಪಾರಿಗಳು ಮತ್ತು ಸೇವಾದಾರರನ್ನು ಸಮೀಕ್ಷೆಗೆ ಒಳಪಡಿಸಿ ಸಿದ್ಧಪಡಿಸಿದ ವರದಿಯೊಂದನ್ನು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಲಾಗಿದೆ.

ವರದಿ ಅನ್ವಯ, ದೇಶದಲ್ಲಿ ಯುಪಿಐ ಪಾವತಿ ವ್ಯವಸ್ಥೆಯ ಸ್ವೀಕಾರ ಮತ್ತು ಬಳಕೆ ನಿರಂತರವಾಗಿ ಏರುಮುಖದಲ್ಲೇ ಇದೆ. ಪ್ರಸಕ್ತ ದೇಶದಲ್ಲಿ ನಗದು ಪಾವತಿ ಶೇ.38ರಷ್ಟು ಪಾಲು ಹೊಂದಿದ್ದರೆ, ಯುಪಿಐ ಪಾಲು ಶೇ.57ಕ್ಕೆ ಏರಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ರುಪೇ ಡೆಬಿಟ್‌ ಕಾರ್ಡ್‌ ಬಳಕೆ ಉತ್ತೇಜನಕ್ಕೆ ಒತ್ತು ನೀಡಬೇಕಿದೆ ಎಂದು ಹೇಳಲಾಗಿದೆ.

Source link

Leave a Reply

Your email address will not be published. Required fields are marked *