ಬೆಂಗಳೂರಲ್ಲಿ ಫಿಲ್ಟರ್ ಕಾಫಿ, ಮಸಾಲ ದೋಸೆ ಸವಿದ ಅಮೇರಿಕನ್ ರಾಯಭಾರಿ!
ಬೆಂಗಳೂರು, ಫೆಬ್ರವರಿ 17: ಇತ್ತೀಚೆಗೆ ಅಮೆರಿಕದ ರಾಯಭಾರಿಯಾಗಿರುವ ಸರ್ಜಿಯೋ ಗೋರ್ (ಸೆರ್ಗಿಯೋ ಗೋರ್) ಭಾರತಕ್ಕೆ ಆಗಮಿಸಿದ್ದು, ಬೆಂಗಳೂರಿಗೂ ಭೇಟಿ ನೀಡಿ ನಗರವು ಚೈತನ್ಯಮಯವಾಗಿದೆ ಎಂದು ಶ್ಲಾಘಿಸಿದ್ದಾರೆ. ಈ ವೇಳೆ ಅವರ ಜೊತೆ ಒಡನಾಡಿದ ಸಂಸದ ತೇಜಸ್ವಿ ಸೂರ್ಯ (ತೇಜಸ್ವಿ ಸೂರ್ಯ)ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಮುಂದುವರಿದ ರಾಯಭಾರಿಯ ಎಕ್ಸ್ ಪೋಸ್ಟ್
ಬೆಂಗಳೂರಿನ ಭೇಟಿ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅಮೇರಿಕದ ರಾಯಭಾರಿ ಸರ್ಜಿಯೋ, ಸ್ಟಾರ್ಟ್‌ಆಪ್‌ಗಳಿಂದ ಹಿಡಿದು ಬೀದಿಬದಿಯ ತಿಂಡಿ ತಿನಿಸುಗಳವರೆಗೆ ಬೆಂಗಳೂರಿಗೆ ಸರಿಸಾಟಿಯೇ ಇಲ್ಲ ಎಂದು ಅವರು ಬರೆದಿದ್ದಾರೆ. ಜೊತೆಗೆ ತೇಜಸ್ವಿ ಸೂರ್ಯರೊಂದಿಗೆ ಸ್ಥಳೀಯ ಆಹಾರ ಸವಿಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ಆತಿಥ್ಯಕ್ಕಾಗಿ ಸೂರ್ಯನಿಗೆ ಕೃತಜ್ಞತೆಯನ್ನೂ ಸಹ.
ಈಗಷ್ಟೇ ಬೆಂಗಳೂರಿಗೆ ಬಂದೆ! ಸ್ಟಾರ್ಟ್ಅಪ್ಗಳಿಂದ ಸ್ಟ್ರೀಟ್ ಫುಡ್ವರೆಗೆ ಬೆಂಗಳೂರಿನ ಶಕ್ತಿಗೆ ಸಾಟಿಯಿಲ್ಲ! ನನ್ನ ಮಹಾನ್ ಆತಿಥೇಯರಿಗೆ ಧನ್ಯವಾದಗಳು @ತೇಜಸ್ವಿ_ಸೂರ್ಯ pic.twitter.com/9PsRfvKeGI
– ರಾಯಭಾರಿ ಸರ್ಗಿಯೋ ಗೋರ್ (@USAmbIndia) ಫೆಬ್ರವರಿ 16, 2026
ಎರಡು ರಾಷ್ಟ್ರಗಳ ಬಾಂಧವ್ಯಕ್ಕೆ ಬೆಂಗಳೂರು ಸಾಕ್ಷಿ
ಈ ಬಗ್ಗೆ ತೇಜಸ್ವಿ ಸೂರ್ಯ ಸಹ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇಂದಿರಾನಗರದ ಫಿಲ್ಟರ್ ಕಾಫಿ, ಮಸಾಲ ದೋಸೆ ಜೊತೆಗೆ ಅಮೆರಿಕ ರಾಯಭಾರಿಯೊಂದಿಗೆ–ಅಮೆರಿಕ ಸಂಬಂಧಗಳ ಕುರಿತು ಸಾರ್ಥಕ ಚರ್ಚೆ ನಡೆಸಲಾಗಿದೆ. ಮಧ್ಯಂತರ ವ್ಯಾಪಾರ ಒಪ್ಪಂದದ ಬಳಿಕ ವಾಣಿಜ್ಯ, ತಂತ್ರಜ್ಞಾನ ಹಾಗೂ ನವೀನತಾ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ವೃದ್ಧಿಯಾಗುತ್ತಿರುವ ಸಹಭಾಗಿತ್ವದ ಬಗ್ಗೆ ಮಾತುಕತೆ ನಡೆಸಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇಂದು ಬೆಂಗಳೂರಿಗೆ ಭಾರತದಲ್ಲಿರುವ ಅಮೇರಿಕಾದ ರಾಯಭಾರಿ ಹೆಚ್ ಸೆರ್ಗಿಯೋ ಗೋರ್ ಅವರನ್ನು ಸ್ವಾಗತಿಸಲು ಸಂತೋಷವಾಯಿತು.
ಇಂದಿರಾನಗರದ ಫಿಲ್ಟರ್ ಕಾಫಿಯಲ್ಲಿ ಕೆಲವು ಮಸಾಲೆ ದೋಸೆ ಮತ್ತು ಸ್ಟ್ರಾಂಗ್ ಕಾಫಿಯ ಮೇಲೆ, ನಾವು ಬೆಳೆಯುತ್ತಿರುವ ಭಾರತ ಯುಎಸ್ ಪಾಲುದಾರಿಕೆಯಲ್ಲಿ ವಿಶೇಷವಾಗಿ ವ್ಯಾಪಾರ, ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕುರಿತು ತೊಡಗಿಸಿಕೊಳ್ಳುವ ಸಂಭಾಷಣೆಯನ್ನು ನಡೆಸಿದ್ದೇವೆ… pic.twitter.com/we2jautGId
— ತೇಜಸ್ವಿ ಸೂರ್ಯ (@Tejasvi_Surya) ಫೆಬ್ರವರಿ 16, 2026
ಇದರ ಜೊತೆಗೆ ರಾಯಭಾರಿಗೆ “ನಮ್ಮ ಆಟೋ” ಪರಿಚಯಿಸಿ ಆಟೋದಲ್ಲಿ ಸಂಚರಿಸಿದ ಅನುಭವವೂ ಸ್ಮರಣೀಯವಾಗಿತ್ತು ಎಂದು ಸಂಸದರು ಉಲ್ಲೇಖಿಸಿದ್ದಾರೆ. ಮಸಾಲ ದೋಸೆಯಿಂದ ಮೆಷಿನ್ ಲರ್ನಿಂಗ್‌ವರೆಗೆ ಸಾಗಿದ ಬೆಂಗಳೂರಿನ ಪಯಣ ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ಸುಂದರ ಸಂಯೋಜನೆಯನ್ನು ಹೊಂದಿದೆ. ನಮ್ಮ ನಗರವು ಎರಡು ಪ್ರಜಾಸತ್ತಾತ್ಮಕ ರಾಷ್ಟ್ರಗಳ ನಡುವೆ ಬಾಂಧವ್ಯ ಹಾಗೂ ಆರ್ಥಿಕತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ 700ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ, ಭಾರತದ ಸಾಫ್ಟ್ ರಫ್ತುಗಳಲ್ಲಿ ಶೇ43ರಷ್ಟು ಕೊಡುಗೆ ನೀಡುತ್ತಿದೆ. ಜೊತೆಗೆ ದೇಶದ ಜಿಸಿಸಿಗಳು (ಜಾಗತಿಕ ಸಾಮರ್ಥ್ಯ ಕೇಂದ್ರಗಳು) ಶೇ40ರಷ್ಟು ಕೇಂದ್ರಗಳು ಬೆಂಗಳೂರಿನಲ್ಲಿದ್ದು, ಭಾರತ–ಅಮೆರಿಕಾ ನೂತನ ಸಹಭಾಗಿತ್ವದ ಮುಂದಾಳತ್ವವನ್ನು ನಮ್ಮ ಬೆಂಗಳೂರು ವಹಿಸಿಕೊಂಡಿದೆ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.