
ಜನವರಿ, ಮಾರ್ಚ್ 9: ಯುದ್ಧದ ತೀವ್ರತೆ ಹೆಚ್ಚುತ್ತಿರುವಂತೆಯೇ ಇರಾನ್ ಅನ್ನು ಕಟ್ಟಿಹಾಕಲು ಅಮೆರಿಕ ವಿವಿಧ ಮಾರ್ಗೋಪಾಯಗಳನ್ನು ಅವಲೋಕಿಸುತ್ತಿದೆ. ಇರಾನ್ ಹಲವು ಮಿಲಿಟರಿ ಮತ್ತು ಪರಮಾಣು ಸೌಕರ್ಯಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳಿಂದ ಸಾಕಷ್ಟು ದಾಳಿ. ಈ ಮಧ್ಯೆ ಅಮೆರಿಕ ಹೊಸ ತಂತ್ರ ಹಾಕಿದೆ. ಇರಾನ್‌ನ ಆರ್ಥಿಕತೆಯ ಬೆನ್ನೆಲುಬಾಗಿರುವ ಒಂದು ದ್ವೀಪದ ಮೇಲೆ ಟ್ರಂಪ್ ಕಣ್ಣಾಕಿದ್ದಾರೆ. ಅದು ಖರ್ಗ್ ಐಲ್ಯಾಂಡ್ (ಖರ್ಗ್ ದ್ವೀಪ).
ಖರ್ಗ್ ದ್ವೀಪವು ಇರಾನ್‌ನ ಪ್ರಮುಖ ರಫ್ತು ಅಡ್ಡೆ ಎನಿಸಿದೆ. ಈ ದ್ವೀಪವನ್ನು ವಶಕ್ಕೆ ತೆಗೆದುಕೊಳ್ಳಲು ಅಥವಾ ಹಾನಿ ಮಾಡಲು ಅಮೆರಿಕ ಯೋಜಿಸಿದೆ. ಖರ್ಗ್ ದ್ವೀಪವು ಪರ್ಷಿಯನ್ ಕೊಲ್ಲಿಯಲ್ಲಿರುವ ಒಂದು ಪುಟ್ಟ ದ್ವೀಪ. ಇರಾನ್‌ನ ಕರಾವಳಿಯಿಂದ ಸುಮಾರು 30 ಕಿಮೀ ದೂರದಲ್ಲಿದೆ. ಇದು ಇರಾನ್‌ನ ಪ್ರಮುಖ ಕಚ್ಚಾ ತೈಲ ರಫ್ತಿನ ಟರ್ಮಿನಲ್ ಅಥವಾ ಹಡಗುದಾಣ ಎನಿಸಿದೆ. ಇರಾನ್ ಶೇ. 90ರಷ್ಟು ತೈಲ ರಫ್ತು ಈ ಟರ್ಮಿನಲ್ ನಿಂದಲೇ ಆಗುವುದು. ದಿನಕ್ಕೆ 70 ಲಕ್ಷ ಬ್ಯಾರಲ್ ತೈಲವನ್ನು ಇಲ್ಲಿ ಲೋಡ್ ಮಾಡಿ ಕಳುಹಿಸಬಹುದು.
ಇದನ್ನೂ ಓದಿ: ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್ ಮಹತ್ವದ ಎಚ್ಚರಿಕೆ
ಖರ್ಗ್ ದ್ವೀಪಕ್ಕೆ ಅಥವಾ ಅದರಲ್ಲಿರುವ ಆಯಿಲ್ ಎಕ್ಸ್‌ಪೋರ್ಟ್ ಟರ್ಮಿನಲ್‌ಗೆ ಧಕ್ಕೆಯಾದರೆ ಇರಾನ್‌ನ ಆರ್ಥಿಕ ಬೆನ್ನೆಲುಬು ಮುರಿದಂತಾಗಬಹುದು. ಆದರೂ ಕೂಡ ಸಂಗ್ರಹಿಸಿದ್ದು ಗಲ್ಫ್‌ನಲ್ಲಿ ಯಾವ ಸಂಘರ್ಷ ಏರ್ಪಟ್ಟರೂ ಇರಾನ್‌ನಲ್ಲಿರುವ ಖರ್ಗ್ ಐಲ್ಯಾಂಡ್ ಮೇಲೆ ಇದೂವರೆಗೂ ಯಾರೂ ಕೂಡ ದಾಳಿ ಮಾಡಿಲ್ಲ. ಅದಕ್ಕೆ ಕೆಲ ಸಕಾರಣಗಳಿವೆ.
ಖರ್ಗ್ ಐಲ್ಯಾಂಡ್ನಿಂದ ಜಗತ್ತಿಗೆ ಸಾಕಷ್ಟು ತೈಲ ಸರಬರಾಜಾಗುತ್ತದೆ. ಇದಕ್ಕೆ ಧಕ್ಕೆಯಾದರೆ ತೈಲಕ್ಕೆ ಹಾಹಾಕಾರ ಶುರುವಾಗುತ್ತದೆ. ಶೇ. 40ರಷ್ಟು ತೈಲ ಸಾಗಣೆ ಆಗುವ ಹಾರ್ಮುಜ್ ಜಲಸಂಧಿಗೆ ಬಹಳ ಸಮೀಪದಲ್ಲೇ ಖರ್ಗ್ ಇದೆ. ಇಲ್ಲಿ ಹಾನಿಯಾದರೆ ಹಾರ್ಮುಜ್ ಮಾರ್ಗಕ್ಕೂ ಧಕ್ಕೆಯಾಗಬಹುದು. ಇದರಿಂದ ಜಾಗತಿಕವಾಗಿ ಪರಿಣಾಮಗಳಾಗಬಹುದು. ಈ ಕಾರಣಕ್ಕೆ ಇದುವರೆಗೂ ಯಾರೂ ಕೂಡ ಖರ್ಗ್ ದ್ವೀಪವನ್ನು ಮುಟ್ಟಿಲ್ಲ. ಈಗ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಖರ್ಗ್ ಮೇಲೆ ಕಣ್ಣಾಕಿವೆ.
ಇದನ್ನೂ ಓದಿ: ಬಹರೇನ್ ಅಮೆರಿಕನ್ ಫಿಫ್ತ್ ಫ್ಲೀಟ್ ಮೇಲೆ ಇರಾನ್ ದಾಳಿ; 21 ಸೈನಿಕರ ಹತ್ಯೆ
ಇರಾನ್ ಅನ್ನು ಹೇಗಾದರೂ ಸೋಲಿಸಲೇಬೇಕು ಅಥವಾ ನಿಯಂತ್ರಿಸಬೇಕು ಎಂದು ಪಣತೊಟ್ಟಿರುವ ಇಸ್ರೇಲ್ ಮತ್ತು ಅಮೆರಿಕ ದೇಶಗಳಿಗೆ ಈಗ ಖರ್ಗ್ ಐಲ್ಯಾಂಡ್ ಒಂದು ಆಯಕಟ್ಟಿನ ಜಾಗವನ್ನು ಹೊಂದಿದೆ. ಈ ಜಾಗವೇನಾದರೂ ತಮ್ಮ ವಶಕ್ಕೆ ಹೋದರೆ ಇರಾನ್‌ನ ತಳಹದಿಯೇ ಅಲುಗಾಡುತ್ತದೆ. ಹೀಗಾಗಿ, ಖರ್ಗ್ ಮೇಲೆ ಎರಗಿ ಹೋಗುತ್ತಿದೆ.
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ