ಅಮೆರಿಕದಲ್ಲಿ ಸತತ ಎರಡನೇ ಬಾರಿ ಬಡ್ಡಿದರ ಕಡಿತ; ಭಾರತದ ಮೇಲೇನು ಪರಿಣಾಮಗಳು?

ಅಮೆರಿಕದಲ್ಲಿ ಸತತ ಎರಡನೇ ಬಾರಿ ಬಡ್ಡಿದರ ಕಡಿತ; ಭಾರತದ ಮೇಲೇನು ಪರಿಣಾಮಗಳು?


ಆಂತರಿಕ ರಿಸರ್ವ್ ಛೇರ್ಮನ್ ಜಿರೋಮ್ ಪೋವೆಲ್

ಜುಲೈ, ಅಕ್ಟೋಬರ್ 30: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ (US ಫೆಡರಲ್ ರಿಸರ್ವ್) ತನ್ನ ಬಡ್ಡಿದರವನ್ನು ಸತತ ಎರಡನೇ ಬಾರಿ ಇಳಿಸಿದೆ. ಬಡ್ಡಿದರ 25 ಮೂಲಾಂಕ ಬಂದಿದೆ. ಈಗ ಅಲ್ಲಿ ಬೆಂಚ್‌ಮಾರ್ಕ್ ಇಂಟರೆಸ್ಟ್ 3.75%-4.00% ಇದೆ. ಅಮೆರಿಕದ ಆರ್ಥಿಕತೆಯ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಬಡ್ಡಿ ದರವನ್ನು ಮತ್ತಷ್ಟು ಇಳಿಸಬೇಕೋ ಬೇಡವೋ ಎಂದು ನಿರ್ಧರಿಸಲಾಗಿದೆ ಎಂದು ಫೆಡರಲ್ ರಿಸರ್ವ್ ಛೇರ್ಮನ್ ಆದ ಪೋವೆಲ್ ಹೇಳಿದ್ದಾರೆ.

ಬಡ್ಡಿದರವನ್ನು ಈ ವರ್ಷ ಇಳಿಸಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದ ಬಂಡಲ್ ರಿಸರ್ವ್ ಈಗ ಸತತ ಎರಡು ಬಾರಿ ದರ ಕಡಿಮೆಗೊಳಿಸಿರುವುದು ಗಮನಾರ್ಹವಾಗಿದೆ. ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧಿಕಾರಕ್ಕೆ ಬಂದಾಗಿನಿಂದ ಬಡ್ಡಿ ದರ ಇಳಿಸುವ ವಿಚಾರದಲ್ಲಿ ಫೆಡರಲ್ ರಿಸರ್ವ್ ಜೊತೆ ನಿರಂತರ ತಿಕ್ಕಾಟ ನಡೆಸಿದ್ದರು. ಇದೀಗ ಟ್ರಂಪ್ ಒತ್ತಡಕ್ಕೆ ಪೊವೆಲ್ ಮಣಿದಂತೆ ಮೇಲ್ನೋಟಕ್ಕೆ ತೋರುತ್ತಿದೆ.

ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿ ಹುಬ್ಬೇರಿಸಿದ ಡೊನಾಲ್ಡ್ ಟ್ರಂಪ್; ಚೀನಾ ಜೊತೆ ಅಮೆರಿಕ ಸೂಪರ್ ಡೀಲ್

ಅಮೆರಿಕದ ಬಡ್ಡಿದರ ಇಳಿಕೆಯಿಂದ ಭಾರತದ ಮೇಲೇನು ಪರಿಣಾಮ?

ಫೆಡರಲ್ ರಿಸರ್ವ್ನಿಂದ ಸತತ ಎರಡನೇ ಬಾರಿ ಬಡ್ಡಿದರ ಇಳಿಸುವ ನಿರ್ಧಾರದಿಂದ ಜಾಗತಿಕ ಮಾರುಕಟ್ಟೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಅಮೆರಿಕದ ಷೇರುಗಳು ಇಂದು ಮಿಶ್ರ ಪ್ರತಿಕ್ರಿಯೆಯನ್ನು ಹೊಂದಿವೆ. ಏಷ್ಯಾದ ಮಾರುಕಟ್ಟೆಯೂ ತುಸು ಕಳೆಗುಂದಿದೆ.

ಅಮೆರಿಕದಲ್ಲಿ ಬಡ್ಡಿದರವನ್ನು ಇಳಿಸಬಹುದು ಎಂದು ಮೊದಲೇ ಸುಳಿವು ಇತ್ತು. ಕಾಕತಾಳೀಯವೋ ಅಥವಾ ಇದೇ ಕಾರಣಕೋ ವಿದೇಶೀ ಹೂಡಿಕೆದಾರರು (ಎಫ್‌ಐಐ) ಭಾರತದ ಇತ್ತೀಚೆಗೆ ಹೂಡಿಕೆ ಹೆಚ್ಚಿಸಿದ್ದಾರೆ. ಷೇರು ಒಂದಷ್ಟು ಚೇತರಿಸಿಕೊಳ್ಳಲು ಇದು ಒಂದು ಕಾರಣವಾಗಿತ್ತು.

ಇದನ್ನೂ ಓದಿ: ಚೀನಾ ಅಧ್ಯಕ್ಷ ಷಿ ಭೇಟಿಗೂ ಮುನ್ನ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಸೂಚಿಸಿದ್ದ ಟ್ರಂಪ್

ಇವತ್ತು ನಿಫ್ಟಿ ಸೂಚ್ಯಂಕ ಬೆಳಗಿನ ಅವಧಿಯಲ್ಲಿ ಕೆಂಪು ಬಣ್ಣಕ್ಕೆ ತಿರುಗಿತ್ತು. ಅಮೆರಿಕದ ಬಡ್ಡಿದರ ಇಳಿಕೆಗೆ ಅನುಗುಣವಾಗಿದೆ, ಮಾರುಕಟ್ಟೆ ಸಹಜವಾಗಿ ವರ್ತಿಸುತ್ತಿರುವಂತೆ ಕಾಣುತ್ತಿದೆ. ಸದ್ಯ ನಿಫ್ಟಿ50 ಸೂಚ್ಯಂಕವು 25,900 ಅಂಕಗಳ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದೆ. ಅಮೆರಿಕದ ಬಡ್ಡಿದರ ಇಳಿಕೆಯಿಂದ ಮತ್ತಷ್ಟು ಎಫ್‌ಐಐಗಳು ಆಗಮಿಸಿ ನಿಫ್ಟಿಯನ್ನು 26,100 ಅಂಕಗಳ ಮಟ್ಟಕ್ಕಿಂತ ಹೆಚ್ಚು ಒಯ್ಯಲಿ ಎಂಬ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದಾರೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *