
ವಾಷಿಂಗ್ಟನ್/ಟೆಹ್ರಾನ್, ಏಪ್ರಿಲ್ 8: ಇರಾನ್ (ಇರಾನ್) ಮೇಲೆ ವಿನಾಶಕಾರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಡೊನಾಲ್ಡ್ ಟ್ರಂಪ್) ನೀಡಿದ್ದ ಗಡುವು ಮುಗಿಯಲು ಕೇವಲ ಎರಡು ಗಂಟೆಗಳಿರುವಾಗ ಬಹು ದೊಡ್ಡ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ಮನವಿಯ ಅಧ್ಯಕ್ಷ ಟ್ರಂಪ್ ತಮ್ಮ ಬಾಂಬ್ ದಾಳಿಯ ನಿರ್ಧಾರವನ್ನು ಸ್ಥಗಿತಗೊಳಿಸಿದರು, ಎರಡು ವಾರಗಳ ಕದನ ವಿರಾಮಕ್ಕೆ (ಯುಎಸ್ ಇರಾನ್ ಕದನ ವಿರಾಮ) ಸಮ್ಮತಿಸಿದ್ದಾರೆ.
ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಸಮ್ಮತಿ
ಕಳೆದ ಐದು ವಾರಗಳಿಂದ ನಡೆಯುತ್ತಿದ್ದ ಯುದ್ಧವು ಜಗತ್ತಿನ ತೈಲ ಪೂರೈಕೆಯ ನಾಡಿಮಿಡಿತವಾದ ‘ಹಾರ್ಮುಜ್ ಜಲಸಂಧಿ’ಯನ್ನು ಬಂದ್ ಮಾಡಿತ್ತು. ಈಗ ಇರಾನ್ ಈ ಜಲಸಂಧಿಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಳ್ಳಲಾಗಿದೆ. ಟ್ರಂಪ್ ಈ ಹಿಂದೆ ಇರಾನ್ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದಾರೆ, ಇದು ಯುದ್ಧಾಪರಾಧ ಎಂದು ವಿಶ್ವಸಂಸ್ಥೆ ಮತ್ತು ಪಾಪ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಇರಾನ್ ನೀಡಿರುವ 10 ಅಂಶಗಳ ಪ್ರಸ್ತಾವನೆಯ ಆಧಾರದ ಮೇಲೆ ಶಾಂತಿ ಮಾತುಕತೆ ನಡೆಸಲು ಅಮೆರಿಕ ಮುಂದಾಗಿದೆ. ಇಸ್ರೇಲ್ ಕೂಡ ಈ ಕದನ ವಿರಾಮಕ್ಕೆ ಬೆಂಬಲ ಸೂಚಿಸಿದೆ ಎಂದು ವರದಿಯಾಗಿದೆ.
ಇರಾನ್ 10 ಅಂಶಗಳ ಪ್ರಸ್ತಾವನೆ ಏನು?
- ಆಕ್ರಮಣಶೀಲತೆ ಮಾಡದಿರುವಿಕೆಗೆ ಬದ್ಧತೆ
- ಹಾರ್ಮುಝ್ ಮೇಲೆ ಇರಾನ್ ನಿಯಂತ್ರಣ ಮುಂದುವರಿಕೆ
- ಯುರೇನಿಯಂ ಪುಷ್ಟೀಕರಣದ ಸ್ವೀಕಾರ
- ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ನಿರ್ಬಂಧ ತೆರವು
- UN ಭದ್ರತಾ ಮಂಡಳಿ ಮತ್ತು IEAE ಆಡಳಿತ ಮಂಡಳಿಯ ನಿರ್ಣಯ ರದ್ದು
- ಜಲಸಂಧಿ ಆದಾಯ ಮೂಲಸೌಕರ್ಯಕ್ಕೆ ಪುನರ್ನಿರ್ಮಾಣಕ್ಕೆ ಬಳಕೆ
- ಇರಾನ್‌ಗೆ ಪರಿಹಾರ ಪಾವತಿಗಳು
- ಅಮೇರಿಕಾ ಯುದ್ಧ ಪಡೆಗಳನ್ನು ಹಿಮ್ ತೆಗೆದುಕೊಳ್ಳುವುದು
- ಎಲ್ಲಾ ರಂಗಗಳಲ್ಲಿ ಯುದ್ಧವನ್ನು ನಿಲ್ಲಿಸುವುದು
- ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಿಲ್ಲಿಸಬೇಕು
ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಹೇಳಿಕೆ ಇಲ್ಲಿದೆ
‘ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗೆ ನಡೆಸಿದ ಮಾತುಕತೆಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇಂದು ರಾತ್ರಿ ಇರಾನ್ ಮೇಲೆ ನಡೆಸಬೇಕಿದ್ದ ವಿನಾಶಕಾರಿ ದಾಳಿಯನ್ನು ತಡೆಹಿಡಿಯುವಂತೆ ಅವರು ವಿನಂತಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತು ಇಸ್ಲಾಮಿಕ್ ರಿಪಲಿಕ್ ಆಫ್ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ, ತ್ವರಿತವಾಗಿ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಳ್ಳಲು ಪ್ರತಿಯಾಗಿ, ನಾನು ಇರಾನ್ ಮೇಲಿನ ಬಾಂಬ್ ದಾಳಿ ಮತ್ತು ದಾಳಿಯನ್ನು ಎರಡು ವಾರಗಳ ಅವಧಿಗೆ ಅಮಾನತುಗೊಳಿಸಲು ಒಪ್ಪುತ್ತೇನೆ’ ಎಂದು ಟ್ರಂಪ್ ಪ್ರಕಟಿಸಿದರು.
ಇದನ್ನೂ ಓದಿ: ಇಂದು ರಾತ್ರಿ ಇಡೀ ದೇಶವೇ ನಾಶವಾಗುತ್ತದೆ; ಗಡುವು ಸಮೀಪಿಸುತ್ತಿರುವ ಇರಾನ್‌ಗೆ ಟ್ರಂಪ್ ಬೆದರಿಕೆ
ಇದು ಉಭಯಪಕ್ಷೀಯ ಕದನ ವಿರಾಮಕ್ಕಾಗಿ! ನಾವು ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಪೂರೈಸಿದ್ದೇವೆ ಮತ್ತು ಇರಾನ್‌ನೊಂದಿಗೆ ದೀರ್ಘಕಾಲೀನ ಶಾಂತಿ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿರ್ಣಾಯಕ ಒಪ್ಪಂದಕ್ಕೆ ಬಹಳ ಹತ್ತಿರದಲ್ಲಿದೆ. ನಾವು ಇರಾನ್‌ನಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ ಮತ್ತು ಇದು ಮಾತುಕತೆಗೆ ಪೂರಕವಾಗಿದೆ ಎಂದು ನಂಬುತ್ತೇವೆ. ಎರಡು ವಾರಗಳ ಕಾಲಾವಧಿಯು ಒಪ್ಪಂದವನ್ನು ಅಂತಿಮಗೊಳಿಸಲು ಮತ್ತು ಪೂರ್ಣಗೊಳಿಸಲು ಆವೃತ್ತಿ. ಅಮೆರಿಕದ ಪರವಾಗಿ ಅಧ್ಯಕ್ಷನಾಗಿ ಮತ್ತು ಮಧ್ಯಪ್ರಾಚ್ಯದ ದೇಶಗಳನ್ನು ಪ್ರತಿನಿಧಿಸುತ್ತಾ, ಈ ದೀರ್ಘಕಾಲದ ಸಮಸ್ಯೆಯು ಪರಿಹಾರದ ಹತ್ತಿರಕ್ಕೆ ಬಂದ ಗೌರವದ ವಿಷಯವಾಗಿದೆ. ಧನ್ಯವಾದಗಳು ಎಂದು ಟ್ರಂಪ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ