ವಿಶ್ವದ ಅತ್ಯಂತ ಶ್ರೀಮಂತ ದೇಶದಲ್ಲಿ ಜನರ ಸರಾಸರಿ ವಾರ್ಷಿಕ ಆದಾಯ 2 ಕೋಟಿ ರೂ; ಇಲ್ಲಿದೆ ಟಾಪ್-10 ಪಟ್ಟಿ

ವಿಶ್ವದ ಅತ್ಯಂತ ಶ್ರೀಮಂತ ದೇಶದಲ್ಲಿ ಜನರ ಸರಾಸರಿ ವಾರ್ಷಿಕ ಆದಾಯ 2 ಕೋಟಿ ರೂ; ಇಲ್ಲಿದೆ ಟಾಪ್-10 ಪಟ್ಟಿ


ಜುಲೈ, ಡಿಸೆಂಬರ್ 30: ಭಾರತ ಐದನೇ ಅತಿದೊಡ್ಡ ಆರ್ಥಿಕತೆಯ ದೇಶ. ಆದರೆ, ಅತೀ ಶ್ರೀಮಂತ ದೇಶಗಳನ್ನು ಒಂದು ಸಾಲಿಗೆ ಜೋಡಿಸಿದರೆ ಭಾರತವು ಶ್ರೀಲಂಕಾದಿಂದ ಹಿಂದಕ್ಕೆ ಹೋಗುತ್ತದೆ. ಒಂದು ದೇಶ ಎಷ್ಟು ಶ್ರೀಮಂತವಾಗಿದೆ ಅದರ ಆರ್ಥಿಕ ಗಾತ್ರದಲ್ಲಿದೆ, ಜನರ ತಲಾದಾಯವನ್ನೂ ಬಳಸುತ್ತದೆ. ಈ ಜಿಡಿಪಿ ತಲಾದಾಯದಲ್ಲಿ ಚೀನಾ ದೇಶವೇ 74ನೇ ಸ್ಥಾನದಲ್ಲಿರುವುದು ಅಚ್ಚರಿ ಎನಿಸಬಹುದು. ಮಾಲ್ಡೀವ್ಸ್ನಂತಹ ದೇಶವೇ ಚೀನಾಕ್ಕಿಂತ ಮೇಲಿದೆ ಎಂದರೆ ಅಚ್ಚರಿ ಎನಿಸಬಹುದು.

ಜಿಡಿಪಿ ಪಿಪಿಪಿ ತಲಾದಾಯದಲ್ಲಿ ಟಾಪ್-10 ದೇಶಗಳ ಪಟ್ಟಿ

  1. ಲೀಕ್ಟನ್ಸ್ಟನ್: 2,01,112 ಡಾಲರ್
  2. ಸಿಂಗಾಪುರ: 1,56,969 ಡಾಲರ್
  3. ಲುಕ್ಸಂಬರ್ಗ್: 1,52,394 ಡಾಲರ್
  4. ಐರ್ಲೆಂಡ್: 1,47,878 ಡಾಲರ್
  5. ಕತಾರ್: 1,22,283 ಡಾಲರ್
  6. ನಾರ್ವೇ: 1,06,694 ಡಾಲರ್
  7. ಸ್ವಿಟ್ಜರ್ಲ್ಯಾಂಡ್: 97,659 ಡಾಲರ್
  8. ಬ್ರೂನೇ ದಾರುಸ್ಸಲಂ: 94,472 ಡಾಲರ್
  9. ಗಯಾನ: 94,189 ಡಾಲರ್
  10. ಅಮೆರಿಕ: 89,598 ಡಾಲರ್

ಇದನ್ನೂ ಓದಿ: ಜನವರಿಯಲ್ಲಿ ಹೊಸ ವರ್ಷಾಚರಣೆಯಿಂದ ಗಣರಾಜ್ಯೋತ್ಸವದವರೆಗೂ 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

ಅಮೆರಿಕ ವಿಶ್ವದ ಅತಿದೊಡ್ಡ ಆರ್ಥಿಕ ಹೊಂದಿದ್ದರೂ, ಲೀಕ್ಟನ್‌ಸ್ಟೇನ್ ದೇಶದ ಜಿಡಿಪಿಗಿಂತ 500 ಹೆಚ್ಚು ಜಿಡಿಪಿ ಹೊಂದಿದ್ದರೂ ಶ್ರೀಮಂತ ದೇಶಗಳಲ್ಲಿ 10ನೇ ಸ್ಥಾನದಲ್ಲಿದೆ. ಸುಮಾರು 10 ಬಿಲಿಯನ್ ಡಾಲರ್ ನಷ್ಟೇ ಗಾತ್ರದ ಜಿಡಿಪಿ ಹೊಂದಿರುವ ಲೀಕ್ಟನ್ ಸ್ಟೇನ್ ಶ್ರೀಮಂತಿಕೆಯಲ್ಲಿ ನಂಬರ್ ಒನ್ ಎನಿಸಿದೆ.

ಬಹಳ ಪುಟ್ಟದಾಗಿರುವ, ಮತ್ತು ಸ್ವಿಟ್ಜರ್ಲ್ಯಾಂಡ್ ಮತ್ತು ಆಸ್ಟ್ರಿಯಾ ನಡುವೆ ಲ್ಯಾಂಡ್ ಲಾಕ್ ಆದಂತಿರುವ ಲೀಕ್ಟನ್ ಸ್ಟೀನ್ ದೇಶದ ಶ್ರೇಷ್ಠ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಂ ಇದೆ. ಹೈ ಕ್ರಿಶನ್ ಮ್ಯಾನುಫ್ಯಾಕ್ಚರಿಂಗ್‌ಗೆ ಇದು ಹೆಸರುವಾಸಿ. ಹೈವ್ಯಾಲ್ಯೂ ಉತ್ಪನ್ನವನ್ನು ತಯಾರಿಸುವುದರಿಂದ ಇದಕ್ಕೆ ಶ್ರೀಮಂತಿಕೆಯೂ ಹೆಚ್ಚು. ಹಣಕಾಸು ವಿಭಾಗ ಕೂಡ ಈ ಪುಟ್ಟ ದೇಶದಲ್ಲಿ ಬಹಳ ಪ್ರಬಲವಾಗಿದೆ.

ಇದನ್ನೂ ಓದಿ: ಆಸ್ತಿ ಮಾರಿ ಬಂದ 94 ಲಕ್ಷ ರೂನಲ್ಲಿ 38 ಲಕ್ಷ ರೂ. ಅಘೋಷಿತ ಆದಾಯವೆಂದು ಟ್ಯಾಕ್ಸ್ ನೋಟೀಸ್; ಕೇಸ್ ಗೆದ್ದ ಮಹಿಳೆ

ಅಂದಹಾಗೆ, 4 ಟ್ರಿಲಿಯನ್ ಡಾಲರ್ ಜಿಡಿಪಿ ದಾಟಿರುವ ಭಾರತದ ತಲಾದಾಯ 10-12,000 ಡಾಲರ್ ಮಾತ್ರ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *