Cancer Causing Oils: ತಜ್ಞರ ಪ್ರಕಾರ, ಎಣ್ಣೆಯಲ್ಲಿರುವ ಈ ರಾಸಾಯನಿಕಗಳು ಹಾರ್ಮೋನುಗಳ ಅಸಮತೋಲನ, ಜೀರ್ಣಕಾರಿ ಅಸ್ವಸ್ಥತೆ, ಉಸಿರಾಟದ ತೊಂದರೆ ಮತ್ತು ಕ್ಯಾನ್ಸರ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು.

ನಾವು ಸಸ್ಯಾಹಾರ ತಯಾರಿಸಲಿ ಅಥವಾ ಮಾಂಸಾಹಾರ ತಯಾರಿಸಲಿ ಪ್ರತಿ ಅಡುಗೆಗೂ ಎಣ್ಣೆಯಂತೂ ಬಳಸುತ್ತೇವೆ. ಇದು ಅಡುಗೆಯ ರುಚಿ ಹೆಚ್ಚಿಸುವುದಲ್ಲದೆ, ಪರಿಮಳವನ್ನೂ ನೀಡುತ್ತದೆ. ಆದರೆ ಇದೇ ಎಣ್ಣೆಯಿಂದ ನಮ್ಮ ಆಹಾರ ವಿಷಪೂರಿತವಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ?

ಹೌದು, ನ್ಯೂಟ್ರಿಷನಿಸ್ಟ್ ಡಾ. ಶಿಲ್ಪಾ ಅರೋರಾ ಈ ಕುರಿತು ವಿವರಿಸಿದ್ದು, ಅವರು ಹೇಳುವ ಪ್ರಕಾರ "ನಾವು ಪ್ರತಿದಿನ ವಿಷಪೂರಿತ ಆಹಾರ ಸೇವಿಸುತ್ತಿದ್ದೇವೆ. ಅದು ಎಣ್ಣೆ ಮುಖಾಂತರ. ನಾವು ಫ್ರೈ ಮಾಡಲು, ಸಾಂಬಾರ್‌ಗೆ, ಮಸಾಲೆಗೆ ಪ್ರತಿಯೊಂದಕ್ಕೂ ಎಣ್ಣೆ ಬಳಸುತ್ತೇವೆ. ಆದರೆ ಇದು ನಮ್ಮ ಅಡುಗೆಮನೆಯಲ್ಲೇ ಅತ್ಯಂತ ಅಪಾಯಕಾರಿ ಪದಾರ್ಥ ಎಂದು ತಿಳಿಸಿದ್ದಾರೆ.

ಡಾ. ಶಿಲ್ಪಾ ಅರೋರಾ ಅವರ ಪ್ರಕಾರ, ಸೋಯಾಬೀನ್ ಎಣ್ಣೆ, ಕ್ಯಾನೋಲಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯಂತಹ ಸಂಸ್ಕರಿಸಿದ ಎಣ್ಣೆಗಳು ಅತ್ಯಂತ ವಿಷಕಾರಿ. ಈ ಎಣ್ಣೆಗಳನ್ನು ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಹೊರತೆಗೆಯಲಾಗುತ್ತದೆ .

ತಜ್ಞರ ಪ್ರಕಾರ, ಕೆಲವು ರಾಸಾಯನಿಕಗಳನ್ನು ಎಣ್ಣೆಗಳನ್ನು ಸಂಸ್ಕರಿಸಲು, ಅವುಗಳ ಬಣ್ಣ ಮತ್ತು ವಾಸನೆಯನ್ನು ತೆಗೆದುಹಾಕಲು ಬಳಸಲಾಗುತ್ತದೆ. ಈ ರಾಸಾಯನಿಕಗಳು ಹೆಕ್ಸೇನ್‌ನಂತಹ ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ. ಆದ್ದರಿಂದ ನೀವು ಈ ಸಂಸ್ಕರಿಸಿದ ಎಣ್ಣೆಗಳನ್ನು ಬಳಸುತ್ತಿದ್ದರೆ ತಕ್ಷಣ ಅವುಗಳನ್ನು ಬಳಸುವುದನ್ನು ನಿಲ್ಲಿಸಿ.

ತಜ್ಞರ ಪ್ರಕಾರ, ಎಣ್ಣೆಯಲ್ಲಿರುವ ಈ ರಾಸಾಯನಿಕಗಳು ಹಾರ್ಮೋನುಗಳ ಅಸಮತೋಲನ, ಜೀರ್ಣಕಾರಿ ಅಸ್ವಸ್ಥತೆ, ಉಸಿರಾಟದ ತೊಂದರೆ ಮತ್ತು ಕ್ಯಾನ್ಸರ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು.

ಬದಲಿಗೆ ನೀವು ಇತರ ಎಣ್ಣೆಗಳನ್ನು ಬಳಸಬಹುದು. ನೀವು ತರಕಾರಿ ಬಳಸಿ ಸಾಂಬಾರ್ ಮತ್ತು ಫ್ರೈ ಮಾಡುತ್ತಿದ್ದರೆ ಸಾಸಿವೆ ಎಣ್ಣೆ ಅಥವಾ ತುಪ್ಪವನ್ನು ಬಳಸಿ. ಇವುಗಳನ್ನು ಹಿತಮಿತವಾಗಿ ಬಳಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ತಿಳಿಸಿದ್ದಾರೆ.

Source link