
ಪವನ್ ಕಲ್ಯಾಣ್ ನಟನೆಯ ‘ಉಸ್ತಾದ ಭಗತ್ ಸಿಂಗ್’ ಸಿನಿಮಾದ ಗಳಿಕೆ ಹೀನಾಯ ಮಟ್ಟ ತಲುಪಿದೆ. ನಾಲ್ಕು ದಿನಕ್ಕೆ ಚಿತ್ರ ಅಂದುಕೊಂಡಷ್ಟು ಗಳಿಗೆ ಮಾಡಿಲ್ಲ. ನಾಲ್ಕು 60 ಕೋಟಿ ರೂಪಾಯಿ ಗಳಿಕೆ ದಾಟಲು ಕೂಡ ಚಿತ್ರದ ಬಳಿಗೆ ಸಾಧ್ಯವಾಗಿಲ್ಲ. ಇನ್ನು, ಎರಡನೇ ದಿನದಿಂದ ಸಿಂಗಲ್ ಡಿಜಿಟಲ್ ನಲ್ಲೇ ಸಿನಿಮಾ ಕುಂಟುತ್ತಾ ಸಾಗುತ್ತಿದೆ. ಈ ಮೊದಲು ರಿಲೀಸ್ ಆಗಿ ಸೋತ ‘ಹರಿ ಹರ ವೀರ ಮಲ್ಲು’ ಚಿತ್ರಕ್ಕಿಂತ ಈ ಸಿನಿಮಾದ ಸ್ಥಿತಿ ಹೀನವಾಗಿದೆ.
‘ಧುರಂಧರ 2’ ಸಿನಿಮಾ ಸೂಪರ್ ಹಿಟ್ ಆಗಿದೆ. ಉತ್ತರ ಭಾರತ ಇದೆ, ದಕ್ಷಿಣ ಭಾರತದಲ್ಲೂ ಸಿನಿಮಾ ಅಬ್ಬರಿಸುತ್ತಿದೆ. ಈ ಸಿನಿಮಾ ರಿಲೀಸ್ ಆದ ದಿನವೇ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ತೆರೆಗೆ ಬಂತು.’ಧುರಂಧರ 2′ ಪ್ರಭಾವ ‘ಉಸ್ತಾದ್ ಭಗತ್ ಸಿಂಗ್’ ಮೇಲೆ ಆಗುತ್ತಿದೆ. ಪವನ್ ಚಿತ್ರ ಮೊದಲ ದಿನ 34 ಕೋಟಿ ರೂಪಾಯಿ ಗಳಿಸಿತು. ಆದರೆ, ದಿನ ಕಳೆದಂತೆ ಸಿನಿಮಾದ ಅಬ್ಬರ ಕಡಿಮೆ ಆಗಿದೆ. ಭಾನುವಾರವೂ ಚಿತ್ರ ಡಬಲ್ ಡಿಜಿಟ್ ಗಳಿಸಲು ಸಾಧ್ಯವಾಗುತ್ತಿಲ್ಲ.
ಭಾರತದಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ 60 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನ ಈ ಚಿತ್ರ 34 ಕೋಟಿ ರೂಪಾಯಿ ಗಳಿಸಿದ್ದಷ್ಟೇ ಬಂತು. ಶುಕ್ರವಾರ ಸಿನಿಮಾ 9 ಕೋಟಿ ರೂಪಾಯಿ ಗಳಿಸಿತು. ಶನಿವಾರ ಕೂಡ 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಚಿತ್ರ ಎಂದರೆ, ಭಾನುವಾರ ಕೂಡ ಚಿತ್ರಕ್ಕೆ 8 ಕೋಟಿ ರೂಪಾಯಿ ಗಳಿಕೆ ಆಗಿದೆ.
ಸಿನಿಮಾಗೆ ಮೊದಲ ದಿನ 4,607 ಶೋ ನೀಡಿದ್ದಾರೆ. ಎರಡನೇ ದಿನ 3,447, ಮೂರನೇ ದಿನ 3,340 ಹಾಗೂ ಭಾನುವಾರ 3200 ಶೋಗಳನ್ನು ಮಾತ್ರ ನೀಡಲಾಗುತ್ತದೆ. ದಿನಕಳೆದಂತೆ ಸಿನಿಮಾಗೆ ಶೋಗಳ ಸಂಖ್ಯೆ ಕಡಿಮೆಯಾಗಿದೆ. ಇದನ್ನು ‘ಧುರಂಧರ್ 2’ ಚಿತ್ರಕ್ಕೆ ಒದಗಿಸಲಾಗಿದೆ.
ಇದನ್ನೂ ಓದಿ: ಸದ್ದಿಲ್ಲದೆ ಒಟಿಟಿಗೆ ಬಂತು ‘ಹರಿ ಹರ ವೀರ ಮಲ್ಲು’: ಎಲ್ಲಿ ನೋಡಬಹುದು?
ಇತ್ತೀಚೆಗೆ ರಿಲೀಸ್ ಆದ ‘ಹರಿ ಹರ ವೀರ ಮಲ್ಲು’ ಚಿತ್ರ ಹೀನವಾಗಿ ಸೋತಿತ್ತು. ಈ ಸಿನಿಮಾ ಕೂಡ ಮೊದಲ ದಿನ 34 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಭಾನುವಾರ ರೀ ಚಿತ್ರದ ಗಳಿಕೆ ಕೊಂಚವಾದರೂ ಏರಿತ್ತು. ಆದರೆ, ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಹಾಗಾಗುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.