ಉತ್ತರ ಪ್ರದೇಶ, ನವೆಂಬರ್ 05: ಹೆಂಗಳೆಯರು ಆಭರಣ (ಆಭರಣಗಳು) ಪ್ರಿಯರು. ತಮ್ಮ ಬಳಿ ಎಷ್ಟು ಚಿನ್ನವಿದ್ದರೂ, ಒಡವೆ ಮೇಲಿನ ವ್ಯಾಮೋಹವಂತೂ ಕಡಿಮೆಯಾಗಲ್ಲ. ಹೀಗಾಗಿ ಬರ್ತ್‌ಡೇಗೆ, ಮದ್ವೆ ಆನಿವರ್ಸರಿಗೆ ಚಿನ್ನ ಉಡುಗೊರೆಯಾಗಿ ನೀಡುವ ಬೇಡಿಕೆ ಇಟ್ಟೆ ಇಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ತಾನು ಕಷ್ಟ ಪಟ್ಟು ದುಡಿದು ಪೈಸೆ ಪೈಸೆ ಕೂಡಿಟ್ಟ ದುಡ್ಡಲ್ಲಿ ಮಡದಿಗೆ ಚಿನ್ನದ ಸರ ಕೊಡಿಸಿದ್ದಾನೆ. ನಾಣ್ಯಗಳ ಎರಡು ಚೀಲವನ್ನು ಚಿನ್ನದ ಅಂಗಡಿಗೆ ತೆಗೆದುಕೊಂಡು ಬಂದು ಹೆಂಡ್ತಿ ಆಸೆಯನ್ನು ಪೂರೈಸಿದ್ದಾನೆ. ಈ ಘಟನೆಯು ಉತ್ತರ ಪ್ರದೇಶದ ಕಾನ್ಪುರದಲ್ಲಿ (ಉತ್ತರ ಪ್ರದೇಶದ ಕಾನ್ಪುರ) ನಡೆದಿದೆ. ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿನ್ನದ ಕೊಡಿಸಿ ಹೆಂಡ್ತಿಗೆ ಸರ್ಪ್ರೈಸ್ ನೀಡಿದ ವ್ಯಕ್ತಿ
ಕಾನ್ಪುರದ ರಮಾದೇವಿ ಪ್ರದೇಶದ ಹೆಚ್‌ಎಎಲ್ ಕಾಲೋನಿ ಬಳಿಯಲ್ಲಿ ಪಾನ್ ಅಂಗಡಿ ಜೀವನ ನಡೆಸುತ್ತಿರುವವರೇ ಈ ಅಭಿಷೇಕ್ ಯಾದವ್. ತನ್ನ ಪಾನ್ ಅಂಗಡಿಗೆ ಬರುವ ಗ್ರಾಹಕರು ನೀಡುವ ನಾಣ್ಯಗಳನ್ನು ಕಳೆದ ಒಂದು ವರ್ಷದಿಂದ ಕೂಡಿಟ್ಟಿದ್ದಾರೆ. ಕೂಡಿಟ್ಟ ನಾಣ್ಯಗಳಲ್ಲಿ ತನ್ನ ಪತ್ನಿಗೆ ಚಿನ್ನದ ಸರ ಕೊಡಬೇಕೆಂಬ ಆಸೆ ಇತ್ತಂತೆ. ಪತ್ನಿ ತವರು ಮನೆಗೆ ಹೋದದ್ದೇ ಸರಿಯಾದ ಸಂದರ್ಭ ಅಂದುಕೊಂಡು ಆಕೆಯೂ ಮನೆಗೆ ವಾಪಾಸ್ಸು ಬರುವಾಗ ಚಿನ್ನದ ಸರ ನೀಡಿ ಖುಷಿ ಪಡಿಸಲು ಮುಂದಾಗಿದ್ದಾನೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
ಹೀಗಾಗಿ ನಾಣ್ಯಗಳನ್ನು ಸಂಗ್ರಹಿಸಿದ್ದ ಎರಡು ಚೀಲಗಳ ಸಮೇತ ಚಿನ್ನದ ಅಂಗಡಿಗೆ ತೆರಳಿದ್ದಾನೆ. ಅಭಿಷೇಕ ಬಳಿ ಇದ್ದ ಹಣ 1.05 ಲಕ್ಷ ರೂ. ಆದರೆ ತಾನು ಖರೀದಿಸಿದ್ದ ಚಿನ್ನದ ಸರದ ಬೆಲೆ 1.25 ಲಕ್ಷ ರೂ ಅಂತೆ. ಹೀಗಾಗಿ ಉಳಿದ ಹಣವನ್ನು ಪಡೆಯುತ್ತೇನೆ ಎಂದು ಅಂಗಡಿಗೆ ತಿಳಿಸಲಾಗಿದೆ.
ಆಭರಣ ಮಳಿಗೆಗೆ ಎರಡು ಚೀಲಗಳನ್ನು ಹೊತ್ತುಕೊಂಡು ಅಭಿಷೇಕ್ ಅವರನ್ನು ಕಂಡು ಶಾಕ್ ಆಗಿತ್ತಂತೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವ ಮಾಲಿಕಾ ಮಹೇಶ್ ವರ್ಮಾ ಇಲ್ಲಿ ಏನು ಆಗುತ್ತಿದೆ ಎಂದು ಅರ್ಥವಾಗಲೇ ಇಲ್ಲ. ಆದರೆ ಈ ಚೀಲದಲ್ಲಿ 1 ಲಕ್ಷ ರೂ. ಹೆಚ್ಚು ಮೌಲ್ಯದ ನಾಣ್ಯಗಳಿವೆ ಎಂದು ವ್ಯಕ್ತಿಯೂ ಹೇಳಿದ್ದು, ನಾವು ಎಣಿಸಿದಾಗ.ಚೀಲದಲ್ಲಿ 20 ರೂಪಾಯಿ ನಾಣ್ಯಗಳೇ ಸುಮಾರು 5290 ಇದ್ದು, ಒಟ್ಟು 1.05 ಲಕ್ಷ ರೂ. ಎರಡು ಚೀಲದ ಈ ನಾಣ್ಯಗಳನ್ನು ಎಣಿಸಲು ಗಂಟೆಗೂ ಹೆಚ್ಚು ಸಮಯ ಎರಡು ಎಂದು ಹೇಳಿದರು.
ಇದನ್ನೂ ಓದಿ:ಒಂದಲ್ಲ ಎರಡಲ್ಲ ಹತ್ತು ವಿಚಿತ್ರ ಬೇಡಿಕೆಯಿಟ್ಟ ವರ; ಈ ಪಟ್ಟಿ ನೋಡಿ ಹೆಣ್ಮಕ್ಕಳು ಶಾಕ್
ಈ ಪೋಸ್ಟ್ ವೈರಲ್ ಆಗಿರುವ ಬಳಕೆದಾರರು, ಒಬ್ಬ ಬಳಕೆದಾರ ಹೆಂಡ್ತಿ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ. ಇನ್ನೊಬ್ಬರು ಇಂತಹ ಗಂಡನನ್ನು ಪಡೆದ ಆಕೆಯೇ ನಿಜವಾಗಿಯೂ ಅದೃಷ್ಟವಂತರು ಎಂದು ಹೇಳಿದ್ದಾರೆ. ಮತ್ತೊಬ್ಬರು ನಿನ್ನ ಹೆಂಡ್ತಿಗೆ ಕೊಡಿಸು ಅದಕ್ಕೇ ಪ್ರಚಾರ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 1:27 pm, ಬುಧವಾರ, 5 ನವೆಂಬರ್ 25