Headlines

ಫಸ್ಟ್‌ನೈಟ್‌ ಕೋಣೆಯಿಂದ ಹೊರ ಬಂದ ವರ ಮಿಸ್ಸಿಂಗ್; ವಧು ಆಸೆ ನೆರವೇರಿಸಲು ಹೋದವ ಬರಲೇ ಇಲ್ಲ! | Uttar Pradesh Meerut Groom Missing First Night For Fulfill Bride S Demand Mrq

ಫಸ್ಟ್‌ನೈಟ್‌ ಕೋಣೆಯಿಂದ ಹೊರ ಬಂದ ವರ ಮಿಸ್ಸಿಂಗ್; ವಧು ಆಸೆ ನೆರವೇರಿಸಲು ಹೋದವ ಬರಲೇ ಇಲ್ಲ! | Uttar Pradesh Meerut Groom Missing First Night For Fulfill Bride S Demand Mrq


15

ಮೊದಲ ರಾತ್ರಿಯೇ ಮಿಸ್ಸಿಂಗ್

Image Credit : Social Media

ಮೊದಲ ರಾತ್ರಿಯೇ ಮಿಸ್ಸಿಂಗ್

ಮೊದಲ ರಾತ್ರಿ ಸುಮಾರು 12 ಗಂಟೆಗೆ ಹೊರ ಬಂದ ವರ ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್‌ ನಲ್ಲಿ ನಡೆದಿದೆ. ಮೊಹಸಿನ್ ನಾಪತ್ತೆಯಾಗಿದ್ದು. ಪೊಲೀಸರು ವರನಿಗಾಗಿ ಗಂಗಾ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

25

ಕೋಣೆಯಿಂದ ಹೊರ ಬಂದ ವರ

Image Credit : our own

ಕೋಣೆಯಿಂದ ಹೊರ ಬಂದ ವರ

ಬುಧವಾರ ಮುಜಫರ್ ನಗರ ಖತೌಲಿಯ ಯುವತಿ ಜೊತೆ ಮೊಹಸಿನ್ ಅಲಿಯಾಸ್ ಮೋನು ಮದುವೆಯಾಗಿತ್ತು. ಅದೇ ದಿನ ರಾತ್ರಿ ವಧು ಜೊತೆ ಮೋನು ತನ್ನೂರಿಗೆ ಆಗಮಿಸಿದ್ದನು. ಅದೇ ರಾತ್ರಿ ಫಸ್ಟ್‌ನೈಟ್‌ಗೂ ಸಿದ್ಧತೆ ಮಾಡಲಾಗಿತ್ತು. ಅಂದು ರಾತ್ರಿ 12 ಗಂಟೆಗೆ ಮನೆಯಿಂದ ಹೊರ ಹೋಗಿದ್ದ ಮೋನು ಮತ್ತೆ ಹಿಂದಿರುಗಿ ಬಾರದ ಕಾರಣ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

35

ಕೋಣೆಯಿಂದ ಹೊರ ಬಂದಿದ್ಯಾಕೆ?

Image Credit : iSTOCK

ಕೋಣೆಯಿಂದ ಹೊರ ಬಂದಿದ್ಯಾಕೆ?

ಯಾವುದೇ ಅಡೆತಡೆಗಳಿಲ್ಲದೇ ಕುಟುಂಬಸ್ಥರ ಸಮ್ಮುಖದಲ್ಲಿ ಮೋನು ಮದುವೆ ನಡೆದಿತ್ತು. ಕೋಣೆಯಲ್ಲಿ ಹಣ್ಣು-ಹಾಲು ಇರಿಸಲಾಗಿತ್ತು. ಮೋನು ಸಹ ಕೋಣೆಯೊಳಗೆ ಹೋಗಿದ್ದನು. ಕೋಣೆಯಲ್ಲಿನ ಲೈಟ್ಸ್ ತುಂಬಾ ಪ್ರಕಾಶಮಾನವವಾಗಿದ್ದು, ಚಿಕ್ಕದಾದ ಲೈಟ್ ತರುವಂತೆ ವಧು ಕೇಳಿಕೊಂಡಿದ್ದಾಳೆ. ಚಿಕ್ಕ ಪ್ರಕಾಶಮಾನ ಲೈಟ್ ತರೋದಾಗಿ ಹೇಳಿ ಮೋನು ಕೋಣೆಯಿಂದ ಹೊರ ಬಂದಿದ್ದನು ಎಂದು ವರದಿಯಾಗಿದೆ

45

ಮೋನುಗಾಗಿ ಹುಡುಕಾಟ

Image Credit : pinterest

ಮೋನುಗಾಗಿ ಹುಡುಕಾಟ

ಗುರುವಾರ ಬೆಳಗ್ಗೆ ಮೋನು ಸೋದರಿಯರ ಮದುವೆ ನಡೆಯಬೇಕಿತ್ತು. ಆದ್ರೆ ಮೋನು ನಾಪತ್ತೆಯಾದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಕುಟುಂಬಸ್ಥರು, ಸಂಬಂಧಿಕರು, ಗೆಳೆಯರು ಸೇರಿದಂತೆ ಆಪ್ತರು ಮೋನುಗಾಗಿ ಹುಡುಕಾಟ ನಡೆಸಿದ್ದಾರೆ. ಮೋನು ಸುಳಿವು ಸಿಗದಿದ್ದಾಗ ಪೊಲೀಸರ ಗಮನಕ್ಕೆ ವಿಷಯವನ್ನು ತಂದಿದ್ದಾರೆ. ಮದುವೆಯಲ್ಲಿ ಅತ್ಯಂತ ಖುಷಿಯಾಗಿದ್ದನು. ಎರಡು ಕುಟುಂಬಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ದಿಡೀರ್ ವರ ನಾಪತ್ತೆಯಾಗಿದ್ದಕ್ಕೆ ಕುಟುಂಬಸ್ಥರು ಆತಂತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಸ್ವಂತ ಕ್ಯೂ ಆರ್ ಕೋಡ್ ಇಟ್ಕೊಂಡು ವಸೂಲಿಗಿಳಿದ ಟ್ರಾಫಿಕ್ ಪೊಲೀಸ್: ಸಿಕ್ಕಿಬಿದ್ದಿದ್ದು ಹೇಗೆ?

55

ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ

Image Credit : pinterest

ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ

ಮೊಹಸಿನ್ ಅಲಿಯಾಸ್ ಮೋನು ಎಂಬ ಯುವಕನ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದಾಗ ಮೋನು ಕೊನೆಯ ಬಾರಿ ಗಂಗಾನದಿ ದಡದಲ್ಲಿ ಕಾಣಿಸಿಕೊಂಡಿದ್ದಾನೆ. ಹಾಗಾಗಿ ಗಂಗಾ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತದೆ. ಹಾಗೆಯೇ ಮೋನು ಬೇರೆ ಎಲ್ಲಾದ್ರೂ ಹೋಗಿರಬಹುದಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಶುತೋಷ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೇರೆ ಜಾತಿ ಎಂದು ಪ್ರೇಮಿಯ ಹೊಡೆದು ಕೊಂದ ಮನೆಯವರು: ಆತನ ಶವವನ್ನೇ ವರಿಸಿದ ಯುವತಿ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ



Source link

Leave a Reply

Your email address will not be published. Required fields are marked *