Headlines

ಉತ್ತರಪ್ರದೇಶ ಗಣಿ ದುರಂತ: ಮೃತರ ಸಂಖ್ಯೆ 3ಕ್ಕೆ ಏರಿಕೆ; ಗಣಿಯೊಳಗೆ ಸಿಲುಕಿರುವವರು ಇನ್ನೂ ಹಲವರು

ಉತ್ತರಪ್ರದೇಶ ಗಣಿ ದುರಂತ: ಮೃತರ ಸಂಖ್ಯೆ 3ಕ್ಕೆ ಏರಿಕೆ; ಗಣಿಯೊಳಗೆ ಸಿಲುಕಿರುವವರು ಇನ್ನೂ ಹಲವರು


ಕಲ್ಲಿನ ಕ್ವಾರಿಯಲ್ಲಿ ರಕ್ಷಣಾ ಕಾರ್ಯಾಚರಣೆ

ಲಕ್ನೋ, ನವೆಂಬರ್ 16: ಉತ್ತರಪ್ರದೇಶದ ಸೋನ್‌ಭದ್ರ ಜಿಲ್ಲೆಯ ಬಿಲ್ಲಿ ಮರಕುಂಡಿ (ಬಿಲ್ಲಿ ಮಾರ್ಕುಂಡಿ) ಎಂಬಲ್ಲಿನ ಕಲ್ಲಿನ ಕ್ವಾರಿಯೊಂದು ಕುಸಿದ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿದೆ. ನಿನ್ನೆ ಶನಿವಾರ (ನ. 15) ಸಂಭವಿಸಿದ ಈ ದುರಂತದಲ್ಲಿ (ಗಣಿಗಾರಿಕೆ ಕುಸಿತ) ನಿನ್ನೆಯೇ ಒಬ್ಬರು ಮೃತಪಟ್ಟಿರುವುದು ಖಚಿತಪಟ್ಟಿತ್ತು. ಇವತ್ತು ನಡೆದ ಶೋಧದಲ್ಲಿ ಇನ್ನೂ ಇಬ್ಬರ ಶವ ಸಿಕ್ಕಿದೆ.

ಈ ಕಲ್ಲಿನ ಕ್ವಾರಿಯಲ್ಲಿ ಕಲ್ಲಿನ ಅವಶೇಷಗಳಡಿಯಲ್ಲಿ ಒಂಬತ್ತು ಮಂದಿ ಸಿಲುಕಿದ್ದಾರೆ. ಆದರೆ, ದುರಂತ ಸಂಭವಿಸಿದಾಗ ಎಷ್ಟು ಮಂದಿ ಕೆಲಸಗಾರರು ಅಲ್ಲಿ ಇದ್ದಾರೆ ಎಂಬುದು ಗೊತ್ತಾಗಿಲ್ಲ. 12 ಮಂದಿ ಇದ್ದಿರಬಹುದು ಎಂದು ಹೇಳಲಾಗುತ್ತಿದೆ. ಉತ್ತರಪ್ರದೇಶ ಸಚಿವ ಸಂಜೀವ್ ಗೋಂಡ್ ಅವರು ನೀಡಿರುವ ಮಾಹಿತಿ ಪ್ರಕಾರ ಸುಮಾರು 12 ಮಂದಿ ಕೆಲಸಗಾರರು ದುರಂತ ಸ್ಥಳದಲ್ಲಿ ಇದ್ದರು.

ಇದನ್ನೂ ಓದಿ: ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಸಾವು; ಹಲವು ಕಾರ್ಮಿಕರು ಕಣ್ಮರೆ

ಅವಶೇಷಗಳಡಿ ಸಿಲುಕಿರುವ ಇತರ ಕಾರ್ಮಿಕರನ್ನು ರಕ್ಷಿಸಲು ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ) ಮತ್ತು ಎಸ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಗುಡ್ಡದ ಮೇಲಿಂದ ಬಿದ್ದ ಕಲ್ಲುಗಳು ದೊಡ್ಡ ಗಾತ್ರದ್ದಾಗಿರುವುದರಿಂದ ಅವರಿಗೆ ಕೆಲಸ ಕಷ್ಟವಾಗಿದೆ. ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸಲಕರಣೆಗಳು ಮತ್ತು ಉಪಕರಣಗಳು ಲಭ್ಯವಿದ್ದು, ತ್ವರಿತವಾಗಿ ರಕ್ಷಣಾ ಕಾರ್ಯ ನಡೆಸಲು ಯತ್ನಿಸಲಾಗುತ್ತಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಬದ್ರಿನಾಥ್ ಸಿಂಗ್ ಅವರು ಘಟನೆಗೆ ಕಾರಣವೇನೆಂದು ಪತ್ತೆ ಮಾಡಲು ತನಿಖೆಗೆ ಆದೇಶಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ವಾಗೀಶ್ ಸಿಂಗ್ ಅವರಿಗೆ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಅವರು ಸಲ್ಲಿಸುವ ವರದಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *