ಮುಂಡಗೋಡ, ನ.29: ಉತ್ತರ ಕನ್ನಡ ಜಿಲ್ಲೆ (ಉತ್ತರ ಕನ್ನಡ) ಶಾಲೆಯಲ್ಲಿ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆ ಸೇರಿದ್ದಾರೆ. ಶಾಲೆಗೆ ಕಳುಹಿಸಿದ ಆಹಾರ ಪದಾರ್ಥಗಳಲ್ಲಿ ಕಸ ,ಕಡ್ಡಿಗಳಿದ್ದು, ತಿನ್ನಲು ಯೋಗ್ಯವಲ್ಲ ಆಹಾರ ಧಾನ್ಯಗಳನ್ನು ಇಲಾಖೆ ತಿಳಿಸಿದೆ. ಜಿಲ್ಲೆಯ ಕಾರವಾರದ ಮುಂಡಗೋಡಿನ ಸರ್ಕಾರಿ ಮಾದರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಕ್ಷರ ದಾಸೋಹ ಯೋಜನೆಡಿಯಲ್ಲಿ ತಾಲೂಕು ಪಂಚಾಯತ್ ನೀಡುವ ಆಹಾರ ಧಾನ್ಯಗಳು ಕಳಪೆ ಮಟ್ಟದ್ದು ಎಂದು ಹೇಳಲಾಗಿದೆ. 22 ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಸೇವನೆ ಮಾಡಿ ಅಸ್ವಸ್ತಗೊಂಡಿದ್ದಾರೆ. ಈ ಬಗ್ಗೆ ಶಿಕ್ಷಕರನ್ನು ಕೇಳಿದಾಗ ಸರಿಯಾದ ಉತ್ತರ ನೀಡದೆ. ಸಮರ್ಥಿಸಿಕೊಂಡಿದ್ದಾರೆ.
ಆಹಾರದಲ್ಲಿ ಇಳಿ ಹಿಕ್ಕೆ ಪತ್ತೆ:
ಇನ್ನು ವಿದ್ಯಾರ್ಥಿಗಳು ಸೇವನೆ ಮಾಡಿದ ಆಹಾರದಲ್ಲಿ ಇಳಿ ಹಿಕ್ಕೆ ಇದೆ. ಮುಂಡಗೋಡಿನ ಶಾಲೆಯಲ್ಲಿ 400 ವಿದ್ಯಾರ್ಥಿಗಳು, ಅದರಲ್ಲಿ 22 ಜನ ಅಸ್ವಸ್ತಗೊಂಡಿದ್ದಾರೆ. ಇದರಲ್ಲಿ 12 ಮಕ್ಕಳ ತೀವ್ರ ನಿಗಾದಲ್ಲಿ ಇಡಲಾಗಿದೆ. ಉಳಿದವರು ಚೇತರಿಸಿಕೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಊಟ ನೀಡುತ್ತಿದ್ದ ವೇಳೆ ಇಳಿ ಹಿಕ್ಕೆಗಳು ಕಂಡು ಬಂದಿದೆ. ವಿದ್ಯಾರ್ಥಿಗಳ ಕ್ಲಾಸ್ ರೂಮ್ ನಲ್ಲಿ ಹೊಟ್ಟೆನೋವಿನಿಂದ ಒದ್ದಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು ವಾಂತಿ ಮಾಡಿದ್ದಾರೆ.
ಇನ್ನು ಮಕ್ಕಳ ಶಾಲೆಯ ಶಾಲೆಯ ವ್ಯವಸ್ಥೆ ಬಗ್ಗೆ ದೂರಿದ್ದಾರೆ. ಮುಂಡಗೋಡಿನ ಶಾಲೆಯ ಬಿಸಿಯೂಟದ ಸ್ಥಿತಿ ಹೀಗಾದರೇ ,ಹಳಿಯಾಳ ಪಟ್ಟಣದ ದೇಶಪಾಂಡೆ ಆಶ್ರಯ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ,ಗುಡ್ನಾಪುರ ಕಾಲೋನಿ , ದೇಶಪಾಂಡೆ ನಗರದ ಸರ್ಕಾರಿ ಶಾಲೆ ಹಾಗೂ ಉರ್ದು ಶಾಲೆಗಳಲ್ಲಿ ಹಾಳಾದ ಧಾನ್ಯ ಹಾಗೂ ಕ್ರಿಮಿ ,ಕೀಟ,ಇಳಿ ಹಿಕ್ಕೆ ಧಾನ್ಯ ಪೂರೈಕೆಯಾಗಿದೆ. ಬಿಸಿಯೂಟದ ಕೋಣೆ ತುಂಬಾ ಕೆಟ್ಟದಾಗಿದೆ. ಇದರಲ್ಲಿ ಗುಜರಿ ವಸ್ತುಗಳ ಸಂಗ್ರಹಣೆ ಮಾಡಿ ಇಡಲಾಗಿತ್ತು, ಅತ್ಯಂತ ಕೆಟ್ಟ ಮಟ್ಟದ ಸ್ಥಿತಿಯಲ್ಲಿದೆ ಎಂದು ಹೇಳಿದರು. ಇನ್ನು ಸಂಬಂಧಪಟ್ಟ ಇಲಾಖೆ ಹಾಗೂ ಹಳಿಯಾಳದ ಬಿ.ಐ.ಓ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮ್ಮನ್ನು ಬಿಟ್ಟು ಹೋಗ್ಬೇಡಿ ಸರ್: ಶಿಕ್ಷಕರಿಗೆ ವಿದ್ಯಾರ್ಥಿಗಳ ಕಣ್ಣೀರಿನ ಬೀಳ್ಕೊಡುಗೆ
ಆಹಾರ ಇಲಾಖೆ ಮೂಲಕ ಜಿಲ್ಲೆಯ ಪ್ರತಿ ತಾಲೂಕಿನ ಶಾಲೆಗಳಿಗೆ ಅಕ್ಷರ ದಾಸೋಹದಡಿ ಆಹಾರ ಪದಾರ್ಥಗಳನ್ನು ಒದಗಿಸಲಾಗಿದೆ. ಇದರ ಗುಣಮಟ್ಟ ಪರೀಕ್ಷೆಗೆ ಆಹಾರ ಸಮಿತಿ ಇದೆ. ಒಂದು ವೇಳೆ ಪೂರೈಕೆಯಾದ ಆಹಾರ ಪದಾರ್ಥ ಕಳಪೆ ಮಟ್ಟದ್ದಾಗಿದ್ದರೆ ಅದನ್ನು ತಿರಸ್ಕರಿಸುವ ಹಕ್ಕು ಶಾಲೆಯ ಮುಖ್ಯ ಶಿಕ್ಷಕರಿಗೆ ಇದೆ.ಆದರೆ ಗುಣಮಟ್ಟವಿಲ್ಲದ ಆಹಾರ ಪದಾರ್ಥಗಳು,ಶುಚಿತ್ವವಿಲ್ಲದ ಬಿಸಿಯೂಟ ಕೊಠಡಿಗಳಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ