ಕಾರವಾರ, ಜನವರಿ 23: ಸಾಮಾಜಿಕ,ವೈದ್ಯಕೀಯ ರಂಗದಲ್ಲಿ ಹೆಸರು ಮಾಡಿದ ಕುಟುಂಬಕ್ಕೆ ಸೇರಿದ ವ್ಯಕ್ತಿಯೋರ್ವ ಡಬಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿಕೊಂಡು ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದಿದೆ. ಪಿಕಳೆ ಕುಟುಂಬದ ಹಿರಿಯ ರಾಜೀವ್ ಪಿಕಳೆ ಮೃತ ದುರ್ದೈವಿ, ಸೋಶಿಯಲ್ ಮೀಡಿಯಾದಲ್ಲಿನ ತೇಜೋವಧೆಯೇ ಅವರ ಆತ್ಮಹತ್ಯೆಗೆ ಕಾರಣ.
ಕಾರವಾರದಲ್ಲಿ ಆಸ್ಪತ್ರೆಯನ್ನು ನಡೆಸುತ್ತಿರುವ ಪಿಕಳೆ ಕುಟುಂಬ ಎರಡು ತಲೆಮಾರಿನಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿದೆ. ಈ ಆಸ್ಪತ್ರೆಯಲ್ಲಿ ರಾಜೀವ್ ಪಿಕಳೆ ಚಿಕಿತ್ಸೆಯನ್ನು ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಕೆಲವು ದಿನದ ಹಿಂದೆ ಅವರು ಅವಧಿ ಮುಗಿದಿದೆ ಎಂದು ಯೂಟ್ಯೂಬರ್ ಒಬ್ಬ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎರಡು ತಲೆಮಾರಿನಿಂದ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಪಿಕಳೆ ಕುಟುಂಬಕ್ಕೆ ಘಾಸಿ ಉಂಟುಮಾಡಿದೆ. ಇದರಿಂದ ಮನನೊಂದಿದ್ದ ರಾಜೀವ್ ಪಿಕಳೆ ಸಾಕಷ್ಟು ನೋವುಂಡಿದ್ದರು. ಇಲ್ಲದೇ ಅವಧಿ ಮುಗಿದ ಔಷಧ ನೀಡಿದ್ದಕ್ಕೆ ಕ್ಷಮೆ ಯಾಚಿಸಿದ್ದರು. ಆದರೆ ವಿಡಿಯೋ ಹೆಚ್ಚು ವೈರಲ್ ಆಗಿದ್ದು ಮಾನಸಿಕವಾಗಿ ಅವರು ಕುಗ್ಗಿದ್ದರು. ಇದೇ ಕಾರಣಕ್ಕೆ ಮನೆಯಲ್ಲಿ ಡಬಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ನಿಂತಿದ್ದ ಪಿಕಾಪ್ ಟ್ರಕ್ಗೆ ಶಾಲಾ ಮಕ್ಕಳಿದ್ದ ಓಮಿನಿ ಡಿಕ್ಕಿ; ನಡು ರಸ್ತೆಯಲ್ಲಿ ಒಡ್ಡಾದ ಮಕ್ಕಳು
ರಾಜಕೀಯ, ಸಾಮಾಜಿಕ, ವೈದ್ಯಕೀಯ ಕ್ಷೇತ್ರದಲ್ಲಿ ಎರಡು ತಲೆಮಾರಿನಿಂದ ಸೇವೆ ನೀಡುತ್ತಾ ಬಂದಿರುವ ಇವರದ್ದು ಕಾರವಾರದಲ್ಲಿ ಪ್ರತಿಷ್ಠಿತ ಕುಟುಂಬ. ಈ ಕುಟುಂಬದ ಸೇವೆ ಮೆಚ್ಚಿ ಕಾರವಾರದ ರಸ್ತೆಯ ಪಿಕಳೆ ರಸ್ತೆ ಎಂದು ನಗರಸಭೆಗೆ ನಾಮಕರಣ ಮಾಡಲಾಗಿದೆ. ಇನ್ನು ರಾಜೀವ್ ಮಕ್ಕಳು ಸಹ ವೈದ್ಯರಾಗಿದ್ದರೆ, ಇವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಆದರೆ ರಾಜೀವ್ ಮಾತ್ರ ಅಂಕೋಲಾದ ಹಟ್ಟಿಕೇರಿಯಲ್ಲಿ ಏಕಾಂಗಿಯಾಗಿ ವಾಸವಿದ್ದರು. ತನ್ನ ವೈರಲ್ ಆಗಿರುವ ಮಾನಸಿಕವಾಗಿ ಕುಗ್ಗಿದ್ದ ಈ ವಿಡಿಯೋ ಇನ್ನು ಸ್ಥಳಕ್ಕೆ ಆಗಮಿಸಿದ ಪರೀಕ್ಷೆ ನಡೆಸಿದಾಗ ಡೆತ್ ನೋಟ್ ಆಗಿದ್ದು ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿರೋದು ಪತ್ತೆಯಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.