ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!


ವಡೋದರಾ, ಡಿಸೆಂಬರ್ 22: ವಡೋದರಾದಲ್ಲೊಂದು ಪವಾಡದಂತಹ ಘಟನೆ ನಡೆದಿದೆ. 20 ವರ್ಷದ ಸಿದ್ಧರಾಜ್ ಸಿಂಗ್ ಮಹೀದ ಅವರು ನಾಂದೇಸರಿ ಸೇತುವೆಯ ಮೇಲೆ ಹೋಗುತ್ತಿದ್ದಾಗ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಆದರೆ, ಅದೃಷ್ಟವಶಾತ್ ಈ ಭೀಕರ ಅಪಘಾತದಿಂದ (ಅಪಘಾತ) ಅವರು ಬದುಕಿದ್ದಾರೆ. ಅವರು ಸೇತುವೆಯಿಂದ ಕೆಳಗೆ ಬೀಳುವಾಗ ಅವರ ಶರ್ಟ್ ಲೈಟ್ ಕಂಬಕ್ಕೆ ಸಿಕ್ಕಿಹಾಕಿಕೊಂಡಿತ್ತು. ಅವರು 20 ಅಡಿ ಎತ್ತರದಲ್ಲಿ ನೇತಾಡುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ತಕ್ಷಣ ಅವರನ್ನು ಮೇಲಕ್ಕೆ ಎಳೆದುಕೊಂಡು ಕಾಪಾಡಿದ್ದಾರೆ. ಬೈಕ್ ಸೇತುವೆಯಿಂದ ನೀರಿಗೆ ಬಿದ್ದರೂ ಆ ಯುವಕನ ಆಯುಷ್ಯ ಗಟ್ಟಿ ಇದ್ದುದರಿಂದ ಯಾವುದೇ ಗಾಯಗಳೂ ಆಗದೆ ಅವರು ಬದುಕುಳಿದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *