ಟೀಂ ಇಂಡಿಯಾ ಸೇರಲು ವೈಭವ್ ಸೂರ್ಯವಂಶಿ ರೆಡಿ; ಉಡೀಸ್ ಆಗಲಿದೆ ಸಚಿನ್ ದಾಖಲೆ

ಟೀಂ ಇಂಡಿಯಾ ಸೇರಲು ವೈಭವ್ ಸೂರ್ಯವಂಶಿ ರೆಡಿ; ಉಡೀಸ್ ಆಗಲಿದೆ ಸಚಿನ್ ದಾಖಲೆ


ವೈಭವ್ ಸೂರ್ಯವಂಶಿ (ವೈಭವ್ ಸೂರ್ಯವಂಶಿ) ಅವರು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾರೆ, ಅದ್ಭುತ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಕೇವಲ 15ನೇ ವಯಸ್ಸಿಗೆ ಅವರು ಹಲವು ದಾಖಲೆಗಳನ್ನು ಬರೆಯುತ್ತಿದ್ದಾರೆ. ಅವರು ಆಡಿದ ಐದು ಪಂದ್ಯಗಳಿಂದ 200 ರನ್ ಪೇರಿಸಿದ್ದು, 263 ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಹಾಗೂ ಜೋಶ್ ಹೆಜಲ್ವುಡ್ಗೆ ಸಿಕ್ಸ್ ಬಾರಿಸಿ ಗಮನ ಸೆಳೆದಿದ್ದಾರೆ. ಈಗ ಅವರು ಟೀಂ ಇಂಡಿಯಾ ಪರ ಪ್ರದರ್ಶನ ರೆಡಿ ಆಗಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ 37 ವರ್ಷಗಳ ಹಿಂದೆ ಬರೆದ ದಾಖಲೆ ಅಳಿಸಿ ಹಾಕಲಿದ್ದಾರೆ.

ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ ವೈಭವ್ ಸೂರ್ಯವಂಶಿ ಅವರು ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಈ ಮೂಲಕ ಅವರು ಟೀಂ ಇಂಡಿಯಾ ಪರ ಆಡಲಿದ್ದಾರೆ. ಜೂನ್ 26 ಮತ್ತು 28 ರಂದು ಐರ್ಲೆಂಡ್ ಅಲ್ಲಿ ಟಿ20 ಪಂದ್ಯಗಳು ನಡೆಯಲಿವೆ. ಇದಕ್ಕೆ ವೈಭವ್ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಈ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಬಿಸಿಗೆ ಇದೆ.

ಜುಲೈ 23-26ರವರೆಗೆ ಜಿಂಬ್ವಾಬ್ವೆಯಲ್ಲಿ ನಡೆಯುವ ಟಿ20 ಸರಣಿಗೂ ವೈಭವ್ ಹೆಸರನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿಯು ತಿಳಿಸಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಪರ್ಫಾರ್ಮೆನ್ಸ್ ನೋಡಿ ಮುಂದಿನ ನಿರ್ಧಾರಕ್ಕೆ ಬರುವ ಆಲೋಚನೆಯಲ್ಲಿ ತಂಡ ಇದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಕ್ಕೆ ವಿಶೇಷ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ

ಸಚಿನ್ ತೆಂಡೂಲ್ಕರ್ ಅವರು ಟೀಂ ಇಂಡಿಯಾಗೆ ಆಡಿದಾಗ ಅವರ ವಯಸ್ಸು 16 ವರ್ಷ 2005 ದಿನ. ಜೂನ್ 26 ರಂದು ಅಂತಾರಾಷ್ಟ್ರೀಯ ಪಂದ್ಯ ಆಡಿದರೆ ವೈಭವ್ ಅವರು ಕೇವಲ 15 ವರ್ಷ 91 ದಿನಕ್ಕೆ ಟೀಂ ಇಂಡಿಯಾ ಪರ ಆಡಿದಂತೆ ಆಗಲಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯಲಿದ್ದಾರೆ. ಶಫಾಲಿ ವರ್ಮ ಅವರು 15 ವರ್ಷ 240ಕ್ಕೆ ದಿನಕ್ಕೆ ಟೀಂ ಇಂಡಿಯಾ ಪರ ಆಡಿದ್ದರು. ಈಗ ಈ ದಾಖಲೆಯನ್ನು ಕೂಡ ವೈಭವ್ ಮುರಿಯಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 10:41 am, ಮಂಗಳವಾರ, 14 ಏಪ್ರಿಲ್ 26



Source link

Leave a Reply

Your email address will not be published. Required fields are marked *