ಪಾಕ್‌ಗೆ ಕರೆಂಟ್ ಶಾಕ್ ಕೊಟ್ಟ ವೈಭವ್ ಸೂರ್ಯವಂಶಿ, ಗಿಲ್, ಉನ್ಮುಕ್ತ್ ಚಾಂದ್ ದಾಖಲೆ ಉಡೀಸ್

ಪಾಕ್‌ಗೆ ಕರೆಂಟ್ ಶಾಕ್ ಕೊಟ್ಟ ವೈಭವ್ ಸೂರ್ಯವಂಶಿ, ಗಿಲ್, ಉನ್ಮುಕ್ತ್ ಚಾಂದ್ ದಾಖಲೆ ಉಡೀಸ್

ಪಾಕ್‌ಗೆ ಕರೆಂಟ್ ಶಾಕ್ ಕೊಟ್ಟ ವೈಭವ್ ಸೂರ್ಯವಂಶಿ, ಗಿಲ್, ಉನ್ಮುಕ್ತ್ ಚಾಂದ್ ದಾಖಲೆ ಉಡೀಸ್

ಪಾಕ್‌ಗೆ ಕರೆಂಟ್ ಶಾಕ್ ಕೊಟ್ಟ ವೈಭವ್ ಸೂರ್ಯವಂಶಿ, ಯೂತ್ ಏಕದಿನ ಪಂದ್ಯದಲ್ಲಿ ಸೂರ್ಯವಂಶಿ ಹೊಡೆತಕ್ಕೆ ಪಾಕಿಸ್ತಾನ ತಲೆ ತಿರುಗಿದ್ದು ಮಾತ್ರವಲ್ಲ, ಶುಭಮನ್ ಗಿಲ್, ಉನ್ಮುಕ್ತ್ ಚಾಂದ್ ದಾಖಲೆ ಪುಡಿ ಪುಡಿಯಾಗಿದೆ.

ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಯೂತ್ ಏಕದಿನ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಹಲವು ದಾಖಲೆಗಳು ಪುಡಿ ಪುಡಿಯಾಗಿದೆ. 14ರ ಹರೆಯದ ವೈಭವ್ ಸೂರ್ಯವಂಶಿ, ಪಾಕ್ ವಿರುದ್ಧ ಮಿಂಚಿನ ಆಟವಾಡಿ ಶುಬಮನ್ ಗಿಲ್ ಮತ್ತು ಉನ್ಮುಕ್ತ್ ಚಾಂದ್ ಅವರ ದಾಖಲೆಗಳನ್ನು ಮುರಿದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಪಾಕ್ ವಿರುದ್ಧ ವೈಭವ್ 22 ಎಸೆತಗಳಲ್ಲಿ 30 ರನ್ ಗಳಿಸಿದರು. ಈ ಮೂಲಕ ಯೂತ್ ಏಕದಿನದಲ್ಲಿ 1149 ರನ್ ಗಳಿಸಿದ್ದ ಗಿಲ್ ಮತ್ತು ಉನ್ಮುಕ್ತ್ ಚಂದ್ ಅವರನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದಿದ್ದಾರೆ. ಈಗಾಗಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿರುವ ವೈಭವ್ ಸೂರ್ಯವಂಶಿ ಪಾಕಿಸ್ತಾನ ವಿರುದ್ದದ ಅಬ್ಬರದ ಆಟ ಭಾರತೀಯ ಅಭಿಮಾನಿಗಳನ್ನು ಮತ್ತಷ್ಟು ಖುಷಿಪಡಿಸಿದೆ.

ವೈಭವ್ 23 ಯೂತ್ ಏಕದಿನಗಳಲ್ಲಿ 1169 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ, 6 ಅರ್ಧಶತಕ ಸೇರಿವೆ. ಯೂತ್ ಏಕದಿನದಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ದಿಗ್ಗಜರ ಸಾಲಿನಲ್ಲಿ ವೈಭವ್ ಸೂರ್ಯವಂಶಿ ಗುರುತಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲೂ ವೈಭವ್ ಮಿಂಚಿದ್ದಾರೆ. ಗುಜರಾತ್ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿ, ವೇಗದ ಶತಕ ಬಾರಿಸಿದ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ಇವರನ್ನು 1.10 ಕೋಟಿಗೆ ಖರೀದಿಸಿತ್ತು.

ಬಿಹಾರದವರಾದ ವೈಭವ್ 2011ರಲ್ಲಿ ಜನಿಸಿದರು. ಇವರ ತಂದೆಯೂ ಮಾಜಿ ಕ್ರಿಕೆಟಿಗ. 12ನೇ ವಯಸ್ಸಿಗೆ ರಣಜಿಗೆ ಪಾದಾರ್ಪಣೆ ಮಾಡಿ ಇತಿಹಾಸ ನಿರ್ಮಿಸಿದ್ದರು. ಬ್ರಿಯಾನ್ ಲಾರಾ ಇವರ ರೋಲ್ ಮಾಡೆಲ್.

ವೈಭವ್ ಪ್ರದರ್ಶನ ನೋಡಿದರೆ, ಅವರು ಶೀಘ್ರದಲ್ಲೇ ಟೀಂ ಇಂಡಿಯಾ ಸೀನಿಯರ್ ತಂಡಕ್ಕೆ ಪಾದಾರ್ಪಣೆ ಮಾಡುವ ದಿನಗಳು ದೂರವಿಲ್ಲ. ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಬೌಲಿಂಗ್ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

Source link

Leave a Reply

Your email address will not be published. Required fields are marked *