ಹಾಲ್ ಟಿಕೆಟ್ ಕೈಸೇರಿದ್ರೂ 10ನೇ ಕ್ಲಾಸ್ ಎಕ್ಸಾಂ ಬರೆಯಲ್ಲ ವೈಭವ್ ಸೂರ್ಯವಂಶಿ, ಅ19 ವಿಶ್ವಕಪ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವೈಭವ್ ಹಾಲ್ ಟಿಕೆಟ್ ಇದ್ದರೂ, ಪರೀಕ್ಷೆ ಬರೆಯಲು ಅನುಮತಿ ನೀಡಿದರೂ ಬರೆಯದಿರಲು ಕಾರಣವೇನು?

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ವೈಭವ್ ಸೂರ್ಯವಂಶಿ 10ನೇ ತರಗತಿ ಬೋರ್ಡ್ ಎಕ್ಸಾಂ ಬರೆಯಲು ಸಜ್ಜಾಗಿದ್ದಾರೆ ಅನ್ನೋ ಮಾಹಿತಿಗಳು ಹರಿದಾಡಿತ್ತು. 15ರ ವಯಸ್ಸಿನ ವೈಭವ್ ಸೂರ್ಯವಂಶಿ ಬಿಹಾರದ ಮಾಡೆಸ್ಟಿ ಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿದ್ದಾರೆ. ಫೆಬ್ರವರಿ 17ರಿಂದ ಆರಂಭಗೊಳ್ಳುತ್ತಿದೆ. ಆದರೆ ವೈಭವ್ ಸೂರ್ಯವಂಶಿ ಪರೀಕ್ಷೆ ಬರೆಯುತ್ತಿಲ್ಲ,

ವೈಭವ್ ಸೂರ್ಯವಂಶಿಗೆ ಸದ್ಯ ಯಾವುದೇ ಕ್ರಿಕೆಟ್ ಟೂರ್ನಿ ಇಲ್ಲ. ಶಾಲಾ ಹಾಜರಾತಿ ಕಡಿಮೆ ಇದ್ದರೂ ದೇಶಕ್ಕೆ ಅ19 ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟ ವೈಭವ್ ಸೂರ್ಯವಂಶಿಗೆ ಪರೀಕ್ಷೆ ಬರೆಯಲು ಶಾಲಾ ಆಡಳಿತ ಮಂಡಳಿ ಅನುವು ಮಾಡಿಕೊಟ್ಟಿದೆ. ಇತ್ತ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕೂಡ ವೈಭವ್ ಸೂರ್ಯವಂಶಿ ಕೈಸೇರಿದೆ. ಆದರೆ ವೈಬವ್ ಸೂರ್ಯವಂಶಿ ಬೋರ್ಡ್ ಎಕ್ಸಾಂ ಬರೆಯುತ್ತಿಲ್ಲ.

ವೈಭವ್ ಸೂರ್ಯವಂಶಿ ಈ ಬಾರಿ 10ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯುತ್ತಿಲ್ಲ ಎಂದು ತಂದೆ ಸಂಜೀವ್ ಸೂರ್ಯವಂಶಿ ಹೇಳಿದ್ದಾರೆ. ಶಾಲಾ ಆಡಳಿತ ಮಂಡಳಿ ಜೊತೆ ಮಾತನಾಡಿದ ಬಳಿಕ ಸಂಜೀವ್ ಸೂರ್ಯವಂಶಿ ಈ ನಿರ್ಧಾರವನ್ನು ತಿಳಿಸಿದ್ದಾರೆ. ಇಡೀ ವರ್ಷ ವೈಭವ್ ಸೂರ್ಯವಂಶಿ ತರಗತಿಗೆ ಹಾಜರಾಗಿದ್ದು ವಿರಳ. ಪಠ್ಯದ ಕಡೆ ಗಮನ ನೀಡಲು ಸಾಧ್ಯವಾಗಿಲ್ಲ. ಪರೀಕ್ಷೆಗೆ ಯಾವುದೇ ತಯಾರಿ ಮಾಡಿಲ್ಲ. ಹೀಗಾಗಿ ಈ ಬಾರಿ ಪರೀಕ್ಷೆ ಬರೆಯುತ್ತಿಲ್ಲ ಎಂದು ಸಂಜೀವ್ ಸೂರ್ಯವಂಶಿ ಹೇಳಿದ್ದಾರೆ.

ಸತತ ಟೂರ್ನಿಗಳಿಂದಾಗ ವೈಭವ್ ಪಾಠ, ತರಗತಿ ಕಡೆ ಗಮನ ನೀಡಲು ಸಾಧ್ಯವಾಗಿಲ್ಲ. ವೈಭವ್ ಪರೀಕ್ಷೆ ಬರೆಯಲು ಫಾರ್ಮ್ ಭರ್ತಿ ಮಾಡಿದ್ದರು. ಇತ್ತ ವೈಭವ್‌ಗೆ ಪರೀಕ್ಷೆ ಬರೆಯಲು ಪೊದ್ದಾರ್ ಅಂತಾರಾಷ್ಟ್ರೀಯ ಶಾಲಾ ಕೇಂದ್ರವನ್ನು ನಿಗದಿಪಡಿಸಲಾಗಿದೆ. ಶಾಲೆ ಕಡೆಯಿಂದ ಎಲ್ಲಾ ಅನೂಕೂಲತೆಗಳನ್ನು ಮಾಡಲಾಗಿದೆ. ಆದರೆ ವೈಭವ್ ತಂದೆ ಅವರ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಮಾಡೆಸ್ಟಿ ಸ್ಕೂಲ್ ನಿರ್ದೇಶಕ ಆದರ್ಶ್ ಕುಮಾರ್ ಹೇಳಿದ್ದಾರೆ.

ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಪರ ವೈಭವ್ ಪ್ರಮುಖ ಪಾತ್ರ ವಹಿಸಿದ್ದರು. ಟೂರ್ನಿಯ 7 ಪಂದ್ಯಗಳಿಂದ 62.71ರ ಸರಾಸರಿಯಲ್ಲಿ ಅವರು ಬರೋಬ್ಬರಿ 439 ರನ್ ಗಳಿಸಿದ್ದರು. ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ವೈಭವ್ ತಮ್ಮದಾಗಿಸಿಕೊಂಡರು. ಈ ಮೂಲಕ, 2022ರಲ್ಲಿ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಸ್ಥಾಪಿಸಿದ್ದ ದಾಖಲೆಯನ್ನು ಅವರು ಮುರಿದರು.

ಅಂಡರ್-19 ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಕೂಡ ವೈಭವ್ ಅವರದ್ದು. ಅವರು 25 ಇನ್ನಿಂಗ್ಸ್‌ಗಳಿಂದ ನಾಲ್ಕು ಶತಕಗಳ ಸಹಿತ ಒಟ್ಟು 1,412 ರನ್ ಕಲೆಹಾಕಿದ್ದಾರೆ. ಮುಂಬರುವ 2026ರ ಐಪಿಎಲ್ ಸೀಸನ್‌ನಲ್ಲಿ ವೈಭವ್ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ಪರ ಕಣಕ್ಕೆ

Source link
ಹಾಲ್ ಟಿಕೆಟ್ ಕೈಸೇರಿದ್ರೂ 10ನೇ ಕ್ಲಾಸ್ ಎಕ್ಸಾಂ ಬರೆಯಲ್ಲ ವೈಭವ್ ಸೂರ್ಯವಂಶಿ, ಕಾರಣವೇನು?