Headlines

ಇದ್ರೆ ನೆಮ್ಮದಿಯಾಗಿರ್ಬೇಕು ಎಂದ Vaishnavi Gowda: ನೆಟ್ಟಿಗರ ಕಣ್ಣು ಹೊಟ್ಟೆ ಮೇಲೆ- ಗುಡ್‌ ನ್ಯೂಸಾ?

ಇದ್ರೆ ನೆಮ್ಮದಿಯಾಗಿರ್ಬೇಕು ಎಂದ Vaishnavi Gowda: ನೆಟ್ಟಿಗರ ಕಣ್ಣು ಹೊಟ್ಟೆ ಮೇಲೆ- ಗುಡ್‌ ನ್ಯೂಸಾ?

ಇದ್ರೆ ನೆಮ್ಮದಿಯಾಗಿರ್ಬೇಕು ಎಂದ Vaishnavi Gowda: ನೆಟ್ಟಿಗರ ಕಣ್ಣು ಹೊಟ್ಟೆ ಮೇಲೆ- ಗುಡ್‌ ನ್ಯೂಸಾ?

ಸದಾ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಿಸುತ್ತಿದ್ದ ನಟಿ ವೈಷ್ಣವಿ ಗೌಡ ಮದುವೆ  ಆಗಿದೆ. ಆದರೆ ಇದೀಗ ತಮ್ಮ ಹೊಸ ರೀಲ್ಸ್ ಒಂದರಲ್ಲಿ ಸ್ವಲ್ಪ ದಪ್ಪ ಕಾಣಿಸಿಕೊಂಡಿದ್ದು, ನೆಟ್ಟಿಗರು ಗುಡ್ ನ್ಯೂಸ್ ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.

ಹೋದಲ್ಲಿ ಬಂದಲ್ಲಿ ನಟಿ ಸೀತಾರಾಮ ಸೀತಾ ಉರ್ಫ್ ನಟಿ Vaishnavi Gowda ಅವರಿಗೆ ಎದುರಾಗುತ್ತಿದ್ದ ಪ್ರಶ್ನೆ ಒಂದೇ. ಮದ್ವೆ ಯಾವಾಗ ಮೇಡಂ ಎಂದು. ಗೂಗಲ್‌ ದಾಖಲೆ ಪ್ರಕಾರ ನಟಿಗೆ ಈಗ 33 ವರ್ಷ ವಯಸ್ಸು. ಆದ್ದರಿಂದ ಅವರಿಗಿಂತಲೂ ಹೆಚ್ಚಾಗಿ ಅವರ ಮದುವೆಯ ಬಗ್ಗೆ ಅಭಿಮಾನಿಗಳು ಸಕತ್‌ ತಲೆ ಕೆಡಿಸಿಕೊಂಡಿದ್ದರು. ಬೇಗ ಮದ್ವೆಯಾಗಿ ಮೇಡಂ ಎಂದೆಲ್ಲಾ ಸಜೆಷನ್‌ ಕೊಡುತ್ತಿದ್ದರು. ಅಂತೂ ಅವರ ಬಾಯಿ ಮುಚ್ಚಿಸಿದ್ದಾರೆ ನಟಿ ವೈಷ್ಣವಿ ಗೌಡ.

ಆದರೆ, ಹಾಗೆಂದು ಜನ ಸುಮ್ಮನೇ ಇರ್ತಾರಾ? ನಟಿ ಮದುವೆಯಾದ ಮೇಲೆ ಸೋಷಿಯಲ್‌ ಮೀಡಿಯಾದಲ್ಲಿ ಮೊದಲಿನಂತೆಯೇ ಆಕ್ಟೀವ್‌ ಇದ್ದಾರೆ. ಹೊಸ ಹೊಸ ರೀಲ್ಸ್‌ ಹಾಕುತ್ತಲೇ ಇರುತ್ತಾರೆ. ಪತಿಯನ್ನೂ ತಮ್ಮ ಜೊತೆಗೆ ಕುಣಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ಕ್ಯೂಟ್‌ ಜೋಡಿ ರೀಲ್ಸ್‌ ಮಾಡಿದಾಗಲೆಲ್ಲಾ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಾರೆ.

ಆದರೆ, ಅದ್ಯಾಕೋ ಏನು ಇಲ್ಲಿಯವರೆಗೆ ಮದುವೆ ಮದುವೆ ಅಂತಿದ್ದ ನೆಟ್ಟಿಗರಿಗೆ ಈಗ ಮಗುವಿನ ಚಿಂತೆ ಶುರುವಾಗಿದೆ. ಇದ್ರೆ ನೆಮ್ಮದಿಯಾಗಿ ಇರಬೇಕು (idre nemdiyag irbeku) ಹಾಡಿಗೆ ವೈಷ್ಣವಿ ಅವರು ಸಕತ್‌ ರೀಲ್ಸ್‌ ಮಾಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ನಟಿ ಸ್ವಲ್ಪ ದಪ್ಪಗಾಗಿ ಕಾಣ್ತಿದ್ದಾರೆ ಎನ್ನೋದು ನೆಟ್ಟಿಗರ ಅಭಿಮತ. ಇದೇ ಕಾರಣಕ್ಕೆ ಗುಡ್‌ನ್ಯೂಸಾ, ಕಂಗ್ರಾಟ್ಸ್‌ ಎನ್ನುತ್ತಿದ್ದಾರೆ ಕೆಲವರು.

ಮತ್ತೆ ಕೆಲವರು ದಪ್ಪ ಆಗಿಬಿಟ್ರಿ ಮೇಡಂ ಎಂದಿದ್ದರೆ, ಮತ್ತೆ ಕೆಲವರು ಇನ್ನೂ ಮದುವೆಯಾಗಿ ಮೂರು ತಿಂಗಳು, ಈಗಲೇ ನಟಿಯ ತಲೆ ಕೆಡಿಸಬೇಡ್ರಪ್ಪಾ ಎನ್ನುತ್ತಿದ್ದಾರೆ. ಹೀಗೆ ಥಹರೇವಾರಿ ಕಮೆಂಟ್ಸ್‌ ಸುರಿಮಳೆಯಾಗುತ್ತಿದೆ.

ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.

ಜೀ ಕನ್ನಡದ `ದೇವಿ’ ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ’ದಲ್ಲಿ ನಟಿಸಿ `ಅಗ್ನಿಸಾಕ್ಷಿ’ ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `

ಗಿರಿಗಿಟ್ಲೆ’ ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ’ ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ’ ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ. ಕಳೆದ ಜೂನ್‌ ತಿಂಗಳಿನಲ್ಲಿ Anukool Mishra ಜೊತೆ ಮದುವೆಯಾಗಿದ್ದಾರೆ.
View this post on Instagram
A post shared by Vaisshnavi (@iamvaishnavioffl)

Source link

Leave a Reply

Your email address will not be published. Required fields are marked *