
ಕೆಂಪು ಗುಲಾಬಿ ಕಂಡರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಇತರ ಪ್ರೇಮಿಗಳ ದಿನಾಚರಣೆ ಬೇರೆ. ಪ್ರೀತಿಯ ಹುಡುಗಿಯನ್ನು ಒಲೈಸಲು, ಒಲಿಯದ ಹುಡುಗನನ್ನು ತಬ್ಬಿಕೊಳ್ಳಲು ರೆಡ್ ರೋಸ್ ಬೇಕು. ಹೀಗಾಗಿ ರೆಡ್ ರೋಸ್ ಗೆ ಭಾರೀ ಡಿಮ್ಯಾಂಡ್ ಬಂದಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಫೆಬ್ರವರಿ 14 ಬಂದರೆ ಸಾಕು ಪ್ರೇಮಿಗಳಿಗೆ ಎಲ್ಲಿಲ್ಲದ ರೋಮಾಂಚನ. ಮತ್ತೊಂದೆಡೆ ಇದೇ ಪ್ರೇಮಿಗಳ ದಿನದಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಲಾಬಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ದೊಡ್ಡದೊಡ್ಡ ವರ್ತಕರು ತಲಾ ಒಂದು ರೆಡ್ ರೋಸ್‌ಗೆ 20 ರೂ ಹಣ ಕೊಟ್ಟು ವಿದೇಶಗಳಿಗೆ ಖರೀದಿಸುತ್ತಿದ್ದಾರೆ.

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಹೊಸಕೋಟೆ ನಿವಾಸಿ ಕೃಷ್ಣರೆಡ್ಡಿ ಎಂಬವರು 4 ಹಾಲಿನ ಪಾಲಿ ಹೌಸ್ ನಲ್ಲಿ, ವಿವಿಧ ಬಣ್ಣಗಳ ಕಲರ್ ಪುಲ್ ಗುಲಾಬಿ ಬೆಳೆದಿದ್ದು, ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ.

16 ಕಲರ್ಗಳ ಗುಲಾಬಿ ಬೆಳೆಯಲಾಗಿದೆ. ಸದ್ಯ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ರೆಡ್ ರೋಸ್ ಗೆ ಭಾರೀ ಡಿಮ್ಯಾಂಡ್ ಬಂದಿದೆ. ಅದರಲ್ಲೂ ಗುಲಾಬಿಯ ನೀಳಕಾಂಡ, ಹೊಳಪು ವೈಯ್ಯಾರ, ಮುಳ್ಳುಗಳಲ್ಲಿ ಕೆಂಪು ಬಣ್ಣದ ಕೆಂಗುಲಾಬಿಗೆ ಇನ್ನೂ ಡಿಮ್ಯಾಂಡ್ ಹೆಚ್ಚಾಗಿರುತ್ತದೆ.

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವ ಗುಲಾಬಿ ದೇಶ, ವಿದೇಶಗಳಲ್ಲಿ ಭಾರೀ ಡಿಮ್ಯಾಂಡ್ ಇದೆ.

ಫೆಬ್ರವರಿ 14 ರ ಪ್ರೇಮಿಗಳ ದಿನಾಚರಣೆಗೆ ಪ್ರೇಮ ನಿವೇದನೆಗೆ ಈ ರೆಡ್ ರೋಸ್ ಬೇಕು. ಹೀಗಾಗಿ ಇದೀಗ ಗುಲಾಬಿ ಬೆಳೆದ ರೈತರಿಗೆ ಮಾತ್ರ ಹಣದ ಹೊಳೆ ಹರಿಯಲಿದೆ.
ರಂದು ಪ್ರಕಟಿಸಲಾಗಿದೆ – 4:27 pm, ಗುರುವಾರ, 12 ಫೆಬ್ರವರಿ 26