Headlines

ಡಿನ್ನರ್ ಬಳಿಕ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಪತಿ ಪತ್ನಿ, ಲೈಟ್ ಆನ್ ಆದಾಗ ಹೆಂಡತಿ ಶವವಾಗಿ ಪತ್ತೆ

ಡಿನ್ನರ್ ಬಳಿಕ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಪತಿ ಪತ್ನಿ, ಲೈಟ್ ಆನ್ ಆದಾಗ ಹೆಂಡತಿ ಶವವಾಗಿ ಪತ್ತೆ

ಡಿನ್ನರ್ ಬಳಿಕ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಪತಿ ಪತ್ನಿ, ಲೈಟ್ ಆನ್ ಆದಾಗ ಹೆಂಡತಿ ಶವವಾಗಿ ಪತ್ತೆ

ಡಿನ್ನರ್ ಬಳಿಕ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಪತಿ ಪತ್ನಿ, ಪ್ರೇಮಿಗಳ ದಿನ ಪತಿ ಹಾಗೂ ಪತ್ನಿ ಇಬ್ಬರು ಖುಷಿ ಖುಷಿಯಿಂದ ಡಿನ್ನರ್ ಸವಿದಿದ್ದಾರೆ. ಇತ್ತ ಪೊಲೀಸರಿಗೆ ಕರೆ ಮಾಡಿ ಪತ್ನಿ ಶವ ಪತ್ತೆಯಾಗಿದ್ದು ಎಂದು ಮಾಹಿತಿ ನೀಡಿದ್ದು ಪತಿ. ಹಾಗಾದರೆ ಕೊಂದಿದ್ದು ಯಾರು?

ಪತಿ ಚಾರ್ಟೆಡ್ ಅಕೌಂಟ್, ಪತ್ನಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉದ್ಯೋಗಿ. ಇಬ್ಬರಿಗೂ ಉತ್ತಮ ವೇತನ. ಜೊತೆಗೆ ಸಂಸಾರದಲ್ಲಿ ಹೆಚ್ಚಿನ ತಾಪತ್ರಯ, ಸಮಸ್ಯೆಗಳು ಇರಲಿಲ್ಲ. ಪತಿ ಹಾಗೂ ಪತ್ನಿ ನಡುವೆ ಪ್ರೀತಿಗೂ ಕೊರತೆ ಇರಲಿಲ್ಲ. ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯನ್ನು ಈ ಪತಿ ಪತ್ನಿ ಆಚರಿಸಿದ್ದಾರೆ. ಇಬ್ಬರು ರೆಸ್ಟೋರೆಂಟ್‌ಗೆ ತೆರಳಿ ಡಿನ್ನರ್ ಸವಿದಿದ್ದಾರೆ. ಬಳಿಕ ದುರಂತವೇ ನಡೆದು ಹೋಗಿದೆ. ಈ ಘಟನೆ ಹರ್ಯಾಣದಲ್ಲಿ ನಡೆದಿದೆ.

ಪ್ರೇಮಿಗಳ ದಿನಾಚರಣೆ ದಿನ ರಾತ್ರಿ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಸವಿದು ಅಂಶುಲ್ ಹಾಗೂ ಮಹಕ್ ಖುಷಿ ಖುಷಿಯಾಗಿ ಮನೆಗೆ ಮರಳಿದ್ದಾರೆ. ಮೊದಲೇ ಪ್ರೇಮಿಗಳ ದಿನ, ಕೊಂಚ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ್ದಾರೆ, ಲೈಟ್ ಆಫ್ ಆಗಿದೆ, ಪಿಸು ಮಾತು ಮೆಲ್ಲನೆ ಕೇಳಿಸತೊಡಗಿದೆ. ಕೆಲ ಹೊತ್ತಲ್ಲೇ ಪೊಲೀಸ್ ಠಾಣೆಗೆ ಕರೆಯೊಂದು ಹೋಗಿದೆ. ಮನೆಗೆ ದರೋಡೆಕೋರರು ದಾಳಿ ಮಾಡಿದ್ದಾರೆ. ಪತ್ನಿಯ ಕತ್ತು ಸೀಳಿಲಿದ್ದಾರೆ. ಹಣ ದೋಚಿದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ.

ಪತಿ ಆತಂಕಗೊಂಡಿದ್ದರೆ, ಪತ್ನಿ ಶವವಾಗಿದ್ದಳು. ಪೊಲೀಸರು ಮಹಜರು ಮಾಡಿದ್ದಾರೆ. ಮಹಿಳೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತಡ ರಾತ್ರಿಯಾಗಿದ್ದ ಕಾರಣ ಮರು ದಿನ ಬೆಳಗ್ಗೆ ದರೋಡೆಕೋರರ ಕುರಿತು ಮಾಹಿತಿ ಪಡೆಯಲು ಅಂಶುಲ್ ಮನೆಗೆ ಬಂದಿದ್ದಾರೆ. ಅಂಶುಲ್ ತನ್ನ ಸಂಬಂಧಿಕರ ಜೊತೆ ರೋಧಿಸುತ್ತಿದ್ದರೆ, ಪೊಲೀಸರಿಗೂ ಅಯ್ಯೋ ಪಾಪ ಎನಿಸಿತ್ತು.

ದರೋಡೆಕೋರರು ಹೇಗಿದ್ದರು, ಮುಖ ಮುಚ್ಚಿದ್ದರೆ, ಅವರಲ್ಲಿ ಯಾವ ಆಯುಧವಿತ್ತು. ಏನು ಬೇಡಿಕೆ ಇಟ್ಟಿದ್ದರು. ಮಾತನಾಡಿದ್ದರೇ ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಪೊಲೀಸರು ಅಂಶುಲ್ ಬಳಿ ಕೇಳಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ತಾಳ್ಮೆಯಿಂದಲೇ ಉತ್ತರಿಸಿದ್ದಾನೆ. ವಿಚಾರಣೆ ಮುಂದುವರಿಯುತ್ತಿದ್ದಂತೆ ಪೊಲೀಸರು ಕೆಲ ಪ್ರಶ್ನೆಗಳನ್ನು ಉಲ್ಟಾ ಕೇಳಿದ್ದಾರೆ. ಈ ವೇಳೆ ಅಂಶುಲ್ ಉತ್ತರಗಳು ತಾಳೆಯಾಗುತ್ತಿರಲಿಲ್ಲ.

ಬೆಳಗ್ಗೆ ವಿಚಾರಣೆ ನಡೆಸಿದ ಕೆಲ ಹೊತ್ತಲ್ಲೇ ಪೊಲೀಸರ ಅನುಮಾನ ಸ್ಪಷ್ಟವಾಗಿದೆ. ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಮಹಕ್ ಪತಿ ಅಂಶುಲ್. ಮಹೆಕ್ ಬ್ಯಾಂಕ್ ಉದ್ಯೋಗಿ, ಆಕೆ ನಡವಳಿಕೆ ಮೇಲೆ ಪತಿಗೆ ಅನುಮಾನ ಹೆಚ್ಚಾಗತೊಡಗಿದೆ. ಎಲ್ಲರೊಂದಿಗೆ ಉತ್ತಮವಾಗಿ ಮಾತನಾಡುತ್ತಿದ್ದ ಮಹೆಕ್ ಮೇಲೆ ಅಂಶುಲ್ ಅನುಮಾನ ಹೆಚ್ಚಾಗಿದೆ. ಇದೇ ಕಾರಣದಿಂದ ಪತ್ನಿಯನ್ನು ಹತ್ಯೆ ಮಾಡಿ ನಾಟಕ ಮಾಡಿದ್ದ. ಗ್ಲೌವ್ಸ್ ಧರಿಸಿ ಪತ್ನಿಯನ್ನು ಹತ್ಯೆ ಮಾಡಿದ್ದ, ಬಳಿಕ ಗ್ಲೌವ್ಸ್ ಸೇರಿದಂತೆ ಇತರ ವಸ್ತುಗಳನ್ನು ಸುಟ್ಟು ಬೂದಿ ಮಾಡಿದ್ದ. ಈ ಮೂಲಕ ಯಾವುದೇ ಸಾಕ್ಷಿ ಸಿಗದಂತೆ ಮಾಡುವ ಪ್ರಯತ್ನ ಮಾಡಿದ್ದ. ಆದರೆ ಮಗಳು ಕೊಲೆಯಾದ ಮರುಕ್ಷಣದಲ್ಲೇ ಇದು ಅಳಿಯ ಅಂಶುಲ್ ಕೃತ್ಯ ಎಂದು ಮೆಹಕ್ ತಂದೆ ಕೃಷ್ಣ ಕತೂರಿಯಾ ಗಂಭೀರ ಆರೋಪ ಮಾಡಿದ್ದರು.

Source link

Leave a Reply

Your email address will not be published. Required fields are marked *