Valentine’s 2026 Date: ಫೆಬ್ರವರಿ 14 ರಂದೇ ಪ್ರೇಮಿಗಳ ದಿನ ಆಚರಿಸುವುದು ಏಕೆ? ಇಲ್ಲಿದೆ ಕಾರಣ

Valentine’s 2026 Date: ಫೆಬ್ರವರಿ 14 ರಂದೇ ಪ್ರೇಮಿಗಳ ದಿನ ಆಚರಿಸುವುದು ಏಕೆ? ಇಲ್ಲಿದೆ ಕಾರಣ


ನಾಳೆ ಪ್ರೇಮಿಗಳ ದಿನ (ಪ್ರೇಮಿಗಳ ದಿನ) ಪ್ರೀತಿಸುವ ವ್ಯಕ್ತಿಗಳ ಪಾಲಿಗೆ ಫೆಬ್ರವರಿ 14 ಸಂಭ್ರಮದ ದಿನ. ಇಷ್ಟ ಪಡುವ ಮನಸ್ಸುಗಳನ್ನು ಖುಷಿ ಪಡಿಸಲು ಯುವಕ ಯುವತಿಯರು ಕಾಯುವ ದಿನವಿದು. ತಮ್ಮ ಪ್ರೀತಿಯನ್ನು ಪ್ರೇಮಿಗಳು ಕಾರ್ಡ್‌ಗಳು, ಹೂವುಗಳು ಅಥವಾ ಚಾಕೊಲೇಟ್‌ಗಳನ್ನು ನೀಡುತ್ತಾರೆ. ಹೆಚ್ಚಿನವರು ದುಬಾರಿ ಬೆಲೆಯ ಗಿಫ್ಟ್, ಡಿನ್ನರ್, ಟ್ರಿಪ್ ಎಂದೆಲ್ಲಾ ಪ್ಲಾನ್ ಮಾಡಿಕೊಂಡ ಪ್ರೇಮಿಗಳ ದಿನವನ್ನು ವಿಭಿನ್ನವಾಗಿ ಸೆಲೆಬ್ರೇಟ್ ಮಾಡುತ್ತಾರೆ. ಪ್ರೇಮಿಗಳ ದಿನ ಆಚರಿಸುವ ಮುನ್ನ ಈ ದಿನದ ಇತಿಹಾಸ, ಮಹತ್ವ ತಿಳಿದುಕೊಳ್ಳಿ.

ಪ್ರೇಮಿಗಳ ದಿನದ ಇತಿಹಾಸವೇನು?

ಪ್ರೇಮಿಗಳ ದಿನದ ಇತಿಹಾಸದ ಬಗ್ಗೆ ಹೇಳುವುದಾದರೆ, ಈ ದಿನದ ಒಂದೊಂದು ಕಥೆಗಳು ಅಡಗಿವೆ. ವ್ಯಾಲೆಂಟೈನ್ಸ್ ಡೇ ಲುಪರ್ಕಾಲಿಯಾ ಹಬ್ಬದೊಂದಿಗೆ ಪ್ರಾರಂಭವಾಯಿತು. ಈ ದಿನವು ವಸಂತಕಾಲದ ಬರವನ್ನು ಆಚರಿಸುತ್ತದೆ. ಐದನೇ ಶತಮಾನದಲ್ಲಿ ಪಾಪ್ ಗೆಲಾಸಿಯಸ್ ಈ ಪ್ರೇಮಿಗಳ ದಿನದ ಆಚರಣೆಯನ್ನು ನಿಷೇಧಿಸಲಾಗಿದೆ. ಆ ಬಳಿಕ ಅದನ್ನು ಸೆಂಟ್ ವ್ಯಾಲೆಂಟೈನ್ಸ್ ಡೇಗೆ ಬದಲಾಯಿಸಲಾಯಿತು. ಫೆಬ್ರವರಿ 14 ರಂದು ಪ್ರಣಯದ ದಿನವಾಗಿ ಆಚರಿಸುವ ಸಂಪ್ರದಾಯ ಸುಮಾರು 14 ನೇ ಶತಮಾನದವರೆಗೆ ಪ್ರಾರಂಭವಾಗಲಿಲ್ಲ. ಫೆಬ್ರವರಿ 14 270 AD ರಂದು ಚಕ್ರವರ್ತಿ ಕ್ಲಾಡಿಯಸ್ II ಗೋಥಿಕಸ್ನಿಂದ ಮರಣದಂಡನೆಗೆ ಗುರಿಯಾದ ನಂತರ ಮರಣದಂಡನೆಗೆ ಒಳಗಾದರು. ಈ ಪ್ರಸಿದ್ಧ ಸಂತ ವ್ಯಾಲೆಂಟೈನ್ ನ ಗೌರವಾರ್ಥವಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ.

ಹೌದು, ಸೇಂಟ್ ವ್ಯಾಲೆಂಟೈನ್ ತನ್ನ ಸೈನ್ಯದಲ್ಲಿ ಪುರುಷರನ್ನು ನೇಮಿಸಿಕೊಳ್ಳಲು ಮದುವೆಗಳನ್ನು ನಿಷೇಧಿಸಿದ ರೋಮನ್ ರಾಜನ ನಿಯಮವನ್ನು ಉಲ್ಲಂಘಿಸಿದ ಕಾರಣ ಅವನಿಗೆ ಮರಣದಂಡನೆ ವಿಧಿಸಲಾಯಿತು. ಸೇಂಟ್ ವ್ಯಾಲೆಂಟೈನ್ ಈ ಕ್ರಮವು ಅನ್ಯಾಯವೆಂದು ಭಾವಿಸಿದ್ದರು. ಆದ್ದರಿಂದ ಅವರು ನಿಯಮಗಳನ್ನು ಮುರಿದು ರಹಸ್ಯವಾಗಿ ಮದುವೆಗಳನ್ನು ಏರ್ಪಡಿಸಿದರು. ಸೇಂಟ್ ವ್ಯಾಲೆಂಟೈನ್ ಜೈಲರ್ನ ಮಗಳನ್ನು ಪ್ರೀತಿಸುತ್ತಿದ್ದರು. ಫೆಬ್ರವರಿ 14 ರಂದು ಅವರನ್ನು ಕೊಲ್ಲಲು ಹೋಗುವಾಗ, “ನಿಮ್ಮ ವ್ಯಾಲೆಂಟೈನ್” ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ತನ್ನ ಪ್ರೇಯಸಿಗೆ ಕಳುಹಿಸಿದರು. ಈ ವೇಳೆಯಲ್ಲಿ ಚಕ್ರವರ್ತಿಯ ಆದೇಶವನ್ನು ಧಿಕ್ಕರಿಸಿದಾಗ ಮರಣದಂಡನೆ ನೀಡಲಾಯಿತು. ಅಂದಿನಿಂದ ಈ ದಿನದ ಆಚರಣೆ ಶುರುವಾಯಿತು.

ಇದನ್ನೂ ಓದಿ: ಪ್ರೇಮಿಗಳ ದಿನ 2026: ಪ್ರೇಮಿಗಳ ದಿನದಂದು ಯಾವ ಬಣ್ಣದ ಬಟ್ಟೆ ಧರಿಸಿದರೆ ಸೂಕ್ತ?

ಪ್ರೇಮಿಗಳ ದಿನದ ಮಹತ್ವ ಹಾಗೂ ಆಚರಣೆ ಹೇಗೆ?

ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ದಿನವೇ ಈ ಪ್ರೇಮಿಗಳ ದಿನ. ಹೀಗಾಗಿ ಪ್ರೀತಿಯಲ್ಲಿ ಬಿದ್ದವರು ವಿಭಿನ್ನವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಗ್ರೀಟಿಂಗ್ ಕಾರ್ಡ್‌ಗಳು, ಚಾಕೊಲೇಟ್‌ಗಳ ಬಾಕ್ಸ್, ಗುಲಾಬಿ ಹೂವುಗಳು, ನೈಟ್ ಡಿನ್ನರ್ ಹೀಗೆ ವಿಭಿನ್ನ ರೀತಿಯ ಸೆಲೆಬ್ರೇಟ್ ಮಾಡುತ್ತಾರೆ.

ಇನ್ನಷ್ಟು ಜೀವನ ಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *