Headlines

ಫ್ರಿಜ್ ಮೇಲ್ಭಾಗ ಖಾಲಿ ಇದೆ ಅಂತ ಕಂಡ್ಕಂಡಿದ್ದು ಇಡ್ಬೇಡಿ, ಅನಾರೋಗ್ಯಕ್ಕೆ ಇದೇ ಕಾರಣ

ಫ್ರಿಜ್ ಮೇಲ್ಭಾಗ ಖಾಲಿ ಇದೆ ಅಂತ ಕಂಡ್ಕಂಡಿದ್ದು ಇಡ್ಬೇಡಿ, ಅನಾರೋಗ್ಯಕ್ಕೆ ಇದೇ ಕಾರಣ

ಫ್ರಿಜ್ ಮೇಲ್ಭಾಗ ಖಾಲಿ ಇದೆ ಅಂತ ಕಂಡ್ಕಂಡಿದ್ದು ಇಡ್ಬೇಡಿ, ಅನಾರೋಗ್ಯಕ್ಕೆ ಇದೇ ಕಾರಣ

ವಾಸ್ತು ದೋಷದಿಂದ ನಾನಾ ಸಮಸ್ಯೆ ಎದುರಾಗುತ್ತದೆ. ನಾವು ಮನೆಯಲ್ಲಿಟ್ಟ ವಸ್ತುಗಳೇ ವಾಸ್ತು ದೋಷಕ್ಕೆ ಕಾರಣವಾಗುತ್ತೆ. ಎಲ್ಲ ಖುಷಿಯಾಗಿರ್ಬೇಕು ಅಂದ್ರೆ ಫ್ರಿಜ್ ಮೇಲೆ ಈ ವಸ್ತುಗಳನ್ನು ಎಂದೂ ಇಡಬೇಡಿ.

ನಿತ್ಯ ಜೀವನದಲ್ಲಿ ಫ್ರಿಜ್ ಅತ್ಯಗತ್ಯ ವಸ್ತುವಾಗಿದೆ. ಬಹುತೇಕ ಎಲ್ಲ ಅಡುಗೆ ಮನೆಯನ್ನು ಫ್ರಿಜ್ ಆವರಿಸಿದೆ. ಫ್ರಿಜ್ ನಲ್ಲಿ ತಿಂದುಳಿದ ಎಲ್ಲ ಆಹಾರವನ್ನು ಇಡ್ತೇವೆ. ನಿನ್ನೆ, ಮೊನ್ನೆ, ವಾರದ ಹಿಂದೆ ಮಾಡಿದ ಆಹಾರ ಕೂಡ ಫ್ರಿಜ್ ನಲ್ಲಿ ಜಾಗ ಪಡೆದಿರುತ್ತೆ. ಫ್ರಿಜ್ ನಲ್ಲಿರುವ ಕೆಲ ಪ್ಯಾಕೆಟ್ ದಿನಾಂಕ ಮುಗಿದು ತಿಂಗಳಾದ್ರೂ ಅದನ್ನು ಕ್ಲೀನ್ ಮಾಡುವ ಕೆಲ್ಸಕ್ಕೆ ಹೋಗೋದಿಲ್ಲ. ಇನ್ನು ಬರೀ ಫ್ರಿಜ್ ಒಳಗೆ ಮಾತ್ರವಲ್ಲ ಫ್ರಿಜ್ ಮೇಲೂ ಒಂದಿಷ್ಟು ವಸ್ತುಗಳು ಜಾಗ ಪಡೆದಿರುತ್ವೆ. ಫ್ರಿಜ್ ಮೇಲಿರುವ ವಸ್ತು ವಾಸ್ತು ದೋಷಕ್ಕೆ ಕಾರಣವಾಗುತ್ತೆ.

ಫ್ರಿಜ್ ಮೇಲ್ಭಾಗ ಔಷಧಿಗಳನ್ನಿಡುವ ಜಾಗವಾಗಿದೆ. ಅನೇಕರ ಮನೆಯ ಫ್ರಿಜ್ ಮೇಲೆ ಔಷಧಿ ಬಾಟಲ್, ಮಾತ್ರೆಗಳಿರುತ್ವೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಒಳ್ಳೆಯದಲ್ಲ. ವಾಸ್ತು ಪ್ರಕಾರ, ಈ ಅಭ್ಯಾಸವನ್ನು ತಪ್ಪಿಸಬೇಕು. ಫ್ರಿಜ್ ಮೇಲೆ ಔಷಧಿಗಳಿದ್ರೆ ಮನೆಯಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ಒಬ್ಬರಲ್ಲ ಒಬ್ಬರಿಗೆ ಅನಾರೋಗ್ಯಕ್ಕೆ ಒಳಗಾಗ್ತಾರೆ. ಔಷಧಿಯನ್ನು ಕಪಾಟಿನಲ್ಲಿಡುವುದು ಉತ್ತಮ.

ಜಾಗ ಇಲ್ಲ ಎಂದಾಗ ನಮ್ಮ ಕಣ್ಣು ಹೋಗೋದು ಫ್ರಿಜ್ ಮೇಲೆ. ಸ್ಥಳಾವಕಾಶದ ಕೊರತೆಯಿಂದ ಅನೇಕ ಮನೆಗಳಲ್ಲಿ ಫ್ರಿಜ್ ಮೇಲೆ ಮೈಕ್ರೋವೇವ್, ಮಿಕ್ಸರ್ ಅಥವಾ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡ್ತಾರೆ. ವಾಸ್ತು ಪ್ರಕಾರ ಇದು ಸೂಕ್ತವಲ್ಲ. ಫ್ರಿಜ್ ಬೆಂಕಿ ಶಕ್ತಿಯೊಂದಿಗೆ ಸಂಬಂಧ ಹೊಂದಿವೆ. ಎಲೆಕ್ಟ್ರಾನಿಕ್ಸ್ ಸಹ ಬೆಂಕಿ ಅಂಶದೊಂದಿಗೆ ಸಂಬಂಧ ಹೊಂದಿವೆ. ಆದ್ದರಿಂದ, ಎರಡನ್ನೂ ಹತ್ತಿರದಲ್ಲಿ ಇಡುವುದು ಸೂಕ್ತವಲ್ಲ. ಫ್ರಿಜ್ ಮೇಲೆ ವಾಚ್, ಫೋನ್ ಕೂಡ ಇಡಬೇಡಿ.

ಅಕ್ವೇರಿಯಂ ವಾಸ್ತು ಜೊತೆ ಆಳವಾದ ಸಂಬಂಧ ಹೊಂದಿದೆ. ಅಕ್ವೇರಿಯಂ ಮನೆಯ ಸೌಂದರ್ಯ ಹೆಚ್ಚಿಸುವ ಜೊತೆ ಮನೆಯ ಎಳ್ಗೆಗೆ ಕಾರಣವಾಗುತ್ತದೆ. ಮನೆಯಲ್ಲಿ ಅಕ್ವೇರಿಯಂ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಅದನ್ನು ಇಡಲು ಸರಿಯಾದ ನಿಯಮ ಮತ್ತು ಷರತ್ತುಗಳನ್ನು ಪಾಲಿಸ್ಬೇಕು. ನೀವು ಮನೆಯ ಫ್ರಿಜ್ ಮೇಲೆ ಅಕ್ವೇರಿಯಂ ಇಟ್ಟಿದ್ದರೆ ಇಂದೇ ಅದನ್ನು ತೆಗೆಯಿರಿ. ವಾಸ್ತು ಪ್ರಕಾರ ಈ ಅಭ್ಯಾಸ ಉತ್ತಮವಲ್ಲ. ರೆಫ್ರಿಜರೇಟರ್ ಮೇಲೆ ಅಕ್ವೇರಿಯಂ ಇಡುವುದರಿಂದ ಶಕ್ತಿಯ ಸಮತೋಲನಕ್ಕೆ ಅಡ್ಡಿಯಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ರೆಫ್ರಿಜರೇಟರ್ ಮೇಲೆ ಅಕ್ವೇರಿಯಂ ಇಡುವುದರಿಂದ ಒತ್ತಡ ಹೆಚ್ಚಾಗುತ್ತದೆ. ಕೆಲಸಕ್ಕೆ ಅಡ್ಡಿಯಾಗುತ್ತದೆ. ಅಕ್ವೇರಿಯಂ ಅನ್ನು ಉತ್ತಮ ಗಾಳಿ ಮತ್ತು ಬೆಳಕು ಇರುವ ತೆರೆದ ಪ್ರದೇಶದಲ್ಲಿ ಇಡುವುದು ಉತ್ತಮ.

Source link

Leave a Reply

Your email address will not be published. Required fields are marked *