ಬೆಂಗಳೂರು, ಫೆ.14: ಇಂದು ಪ್ರೇಮಿಗಳ ದಿನವನ್ನು (ವ್ಯಾಲೆಂಟೈನ್ಸ್ ಡೇ) ಆಚರಣೆ ಮಾಡಲಾಗುತ್ತಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಪ್ರತಿ ವರ್ಷ ಈ ಬಾರಿಯೂ ಕತ್ತೆಗಳಿಗೆ ಮದುವೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ. ನಗರದ ಸೆಂಟ್ರಲ್ ನಿಲ್ದಾಣದ ಬಳಿ ಕತ್ತೆಗಳ ಮೆರವಣಿಗೆ ನಡೆಸಲಾಗಿದೆ. ಎರಡು ಕತ್ತೆಗಳಿಗೆ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಹೂವಿನ ಹಾರ ಹಾಕಿ ತಾಳಿ ಕಟ್ಟಿದ್ದಾರೆ. ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದಾಗಲೇ ‘ಗಂಡು ಕತ್ತೆ’ ಹಠಾತ್ತನೆ ಅಲ್ಲಿಂದ ಓಡಿಹೋಗಿದೆ. ಇದನ್ನು ಕಂಡು ನೆರೆದಿದ್ದ ಸಾರ್ವಜನಿಕರು ನಗೆಗಡಲಲ್ಲಿ ತೇಲಲಿದ್ದಾರೆ. ನಂತರ ಕತ್ತೆಯನ್ನು ಹಿಡಿದು ಮದುವೆ ಪ್ರಕ್ರಿಯೆ ಪೂರ್ಣಗೊಳಿಸಿ. ಪ್ರೇಮ ವಿವಾಹವಾಗುವವರಿಗೆ ಸರ್ಕಾರ 3 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲು ಮತ್ತು ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ” ಎಂದು ಒತ್ತಾಯಿಸಿದರು.
ವರದಿ: ಅರುಣ್ ಕುಮಾರ್, ಮೆಟ್ರೋ
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ