ಶುಕ್ರ ಹಾಗೂ ಕುಜರು ಪ್ರೀತಿ, ಪ್ರೇಮ, ದಾಂಪತ್ಯ ವಿಚಾರಕ್ಕೆ ಹೆಚ್ಚು ಸಮೀಪದಲ್ಲಿ ಇರುವವರು. ವಂಶಾಭಿವೃದ್ಧಿ ಮೊದಲಾದವುಗಳಿಗೆ ಈ ಗ್ರಹಗಳ ಪ್ರಭಾವವನ್ನೂ ನೋಡುವುದು. ಈ ಎರಡೂ ಗ್ರಹಗಳು ಧನುವಿನಲ್ಲಿ ಅಂದರೆ ಗುರುವಿನ ರಾಶಿಯಲ್ಲಿ ಗುರುದೃಷ್ಟಿಯಿಂದ ಇರುವವರು. ಒಬ್ಬರಿಗೆ ಶತ್ರುವಿನ ರಾಶಿಯವರಿಗೆ ಮಿತ್ರನ ರಾಶಿ. ಡಿಸೆಂಬರ್ 20 ರಿಂದ ಜನವರಿ 13 ರವರೆಗೆ ಧನುರಾಶಿಯಲ್ಲಿ ಈ ಯೋಗವಿರಲಿದೆ. ಯೋಗ್ಯ ಮಾರ್ಗದರ್ಶನ ಸಿಕ್ಕರೆ ಎಲ್ಲವೂ ಸರಿಯಾಗುವುದು. ಸಿಗುತ್ತದೆ ಕೂಡ. ಅದನ್ನು ಸರಿಯಾಗಿ ಅನುಭವಿಸುವುದು ಅವರಿಗೆ ಬಿಟ್ಟಿದ್ದು. ಎಲ್ಲರಿಗೂ ಶುಭವಾಗಲಿ.
ಮೇಷ ರಾಶಿ:
ಧಾರ್ಮಿಕ ಅಥವಾ ವಿದೇಶಿ ಸಂಗಾತಿ ಯೋಗ, ಪ್ರೀತಿಯಲ್ಲಿ ಆದರ್ಶಭಾವ, ದಾಂಪತ್ಯದಲ್ಲಿ ಮೌಲ್ಯಭೇದ ಸಾಧ್ಯ, ಸಂಯಮ ಇದ್ದರೆ ಸಂಬಂಧ ಸ್ಥಿರ, ವಿಚ್ಛೇದನ ಅಪರೂಪ.
ವೃಷಭ ರಾಶಿ:
ಗುಪ್ತ ಪ್ರೀತಿ, ತೀವ್ರ ಆಕರ್ಷಣೆ, ದಾಂಪತ್ಯದಲ್ಲಿ ಅನುಮಾನ ಮತ್ತು ಭಯ, ದೃಷ್ಟಿ ಅಸಮತೋಲನ ಇದ್ದು ಕಲಹ ಪ್ರದರ್ಶನ. ನಿಯಂತ್ರಣ ಇಲ್ಲದೇ ವಿಚ್ಛೇದನ ಸಂಭವಿಸುತ್ತದೆ.
ಮಿಥುನ ರಾಶಿ:
ಬಲವಾದ ಪ್ರೇಮವಿವಾಹ ಯೋಗ, ಆಕರ್ಷಕ ಸಂಗಾತಿ ಪ್ರಾಪ್ತಿ, ದಾಂಪತ್ಯದಲ್ಲಿ ಉತ್ಸಾಹ, ಆದರೆ ಅಧಿಪತ್ಯಭಾವ ಮತ್ತು ಅಹಂಕಾರ ಹೆಚ್ಚಾದರೆ ವಿಚ್ಛೇದನ ಸಾಧ್ಯ.
ಕರ್ಕಾಟಕ ರಾಶಿ:
ಪ್ರೀತಿಗೆ ಕುಟುಂಬ ಅಥವಾ ಸಮಾಜ ವಿರೋಧ, ದಾಂಪತ್ಯದಲ್ಲಿ ನಿರಂತರ ವಾದ, ಕಾನೂನು ಹಸ್ತಕ್ಷೇಪ ಸಾಧ್ಯ, ಸಹ ಕಡಿಮೆಯಾದರೆ ದೂರಾಗುವ ಯೋಗ.
ಸಿಂಹ ರಾಶಿ:
ಪ್ರೀತಿ, ಪ್ರೇಮವಿವಾಹ ಸಾಧ್ಯತೆ, ಉತ್ಸಾಹಿ ದಾಂಪತ್ಯ, ಅಹಂಕಾರ ಮತ್ತು ಸ್ವಾಭಿಮಾನ ನಿಯಂತ್ರಿಸದಿದ್ದರೆ ಕಲಹ ಬೆಳೆಯುತ್ತದೆ, ವಿಚ್ಛೇದನ ಬೀಜ ಬಿತ್ತಬಹುದು.
ಕನ್ಯಾ ರಾಶಿ:
ಪ್ರೀತಿಯಲ್ಲಿ ಗೊಂದಲ, ದಾಂಪತ್ಯದಲ್ಲಿ ಮನಶಾಂತಿ ಕೊರತೆ, ಕುಟುಂಬ ಒತ್ತಡ, ಭಾವನಾತ್ಮಕ ತಣ್ಣನೆ ಇದ್ದರೆ ಸಂಬಂಧ ದುರ್ಬಲವಾಗಿ ದೂರವಾಗುವ ಸಾಧ್ಯತೆ ಇದೆ.
ತುಲಾ ರಾಶಿ:
ಧೈರ್ಯವಾಗಿ ಪ್ರೀತಿ ವ್ಯಕ್ತ, ಸ್ನೇಹದಿಂದ ಸಂಬಂಧ, ದಾಂಪತ್ಯದಲ್ಲಿ ಮಾತಿನ ಘರ್ಷಣೆ, ಅಹಂ ಮತ್ತು ಆಸೆ ಸಂಘರ್ಷ ಅಧಿಕ. ವಿಚ್ಛೇದನಕ್ಕಿಂತ ಮನಸ್ತಾಪ ಹೆಚ್ಚು.
ವೃಶ್ಚಿಕ ರಾಶಿ:
ಕುಟುಂಬ ವಿರೋಧದ ಪ್ರೀತಿ, ಮಾತಿನ ಕಠೋರತೆ, ದಾಂಪತ್ಯದಲ್ಲಿ ಹಣ ಮತ್ತು ಆಸ್ತಿಯ ವಿಚಾರಕ್ಕೆ ಕಲಹ, ಸಂಯಮ ಇಲ್ಲದಿದ್ದರೆ ಬೇರ್ಪಡುವ ಯೋಗ ಉಂಟಾಗಬಹುದು.
ಧನು ರಾಶಿ:
ತೀವ್ರ ಆಕರ್ಷಣೆ, ಬಹುಸಂಬಂಧ ಪ್ರೇರಣೆ, ಪ್ರೇಮವಿವಾಹ ಯೋಗ, ದಾಂಪತ್ಯದಲ್ಲಿ ಅಧಿಪತ್ಯದ ಭಾವ ಬರಲಿದೆ. ಮಿತಿ ಮೀರಿದರೆ ವಿಚ್ಛೇದನ ಸಂಭವಿಸುವ ಸಾಧ್ಯತೆ.
ಮಕರ ರಾಶಿ:
ಗುಪ್ತ ಅಥವಾ ದೂರದ ಪ್ರೀತಿ, ವಿದೇಶಿ ಸಂಗಾತಿ ಯೋಗ, ದಾಂಪತ್ಯದಲ್ಲಿ ಭಾವನಾತ್ಮಕ ಅಂತರ, ನಿರ್ಲಕ್ಷ್ಯ ಹೆಚ್ಚಾದರೆ ವಿಚ್ಛೇದನ ಸೂಚನೆ ಕಾಣಿಸುತ್ತದೆ.
ಕುಂಭ ರಾಶಿ :
ಸ್ನೇಹದಿಂದ ಪ್ರೀತಿ, ಸಮಾಜದ ಮೂಲಕ ಸಂಗಾತಿ ಪ್ರಾಪ್ತಿ, ದಾಂಪತ್ಯ ಲಾಭದಾಯಕ ಮತ್ತು ಸಹಕಾರ, ಪರಸ್ಪರ ಗೌರವ ಇದ್ದರೆ ವಿಚ್ಛೇದನ ಯೋಗ ಕಡಿಮೆ.
ಮೀನ ರಾಶಿ:
ಉದ್ಯೋಗ ಅಥವಾ ಸಾರ್ವಜನಿಕ ವಲಯದಲ್ಲಿ ಪ್ರೀತಿ, ಪ್ರಭಾವಿ ಸಂಗಾತಿ, ದಾಂಪತ್ಯದಲ್ಲಿ ಒಬ್ಬರದೇ ಕೆಲಸ. ಅಹಂ ಒಂದಿಗೆ ಘರ್ಷಣೆ. ಸಮಯ ಕೊರತೆಯಿಂದ ದೂರವಾಗುವ ಸಾಧ್ಯತೆ ಇದೆ.
– ಲೋಹಿತ ಹೆಬ್ಬಾರ್
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ