Headlines

ಕುಂಭ ರಾಶಿಯಲ್ಲಿ ಶುಕ್ರ–ರಾಹು ಸಂಯೋಗ.. ಯಾರಿಗೆಲ್ಲ ಏನೆಲ್ಲ ಲಾಭ?

ಕುಂಭ ರಾಶಿಯಲ್ಲಿ ಶುಕ್ರ–ರಾಹು ಸಂಯೋಗ.. ಯಾರಿಗೆಲ್ಲ ಏನೆಲ್ಲ ಲಾಭ?


ಕುಂಭ ರಾಶಿಯಲ್ಲಿ ಶುಕ್ರ ಮತ್ತು ರಾಹುಗಳ ಸಂಯೋಗವು ಜ್ಯೋತಿಷ್ಯದಲ್ಲಿ ಬಹಳ ವಿಶಿಷ್ಟವಾದ ಯೋಗ. ಈ ಯೋಗ ಫೆಬ್ರವರಿ 6 ರಿಂದ ಮಾರ್ಚ್ 02 ರವರೆಗೆ ಇರಲಿದೆ. ಕುಂಭವು ಶನಿಯ ರಾಶಿಯಾಗಿ ವಾಯು ತತ್ತ್ವವನ್ನು ಸೂಚಿಸುವ ಸಮಾಜ, ಸಮೂಹ ಚಿಂತನೆ, ವಿಜ್ಞಾನ, ಹೊಸ ಆಲೋಚನೆಗಳು ಮತ್ತು ಭವಿಷ್ಯದ ದಿಕ್ಕನ್ನು ತೋರಿಸುತ್ತದೆ.

ಶುಕ್ರನು ಭೋಗ, ಪ್ರೀತಿ, ಸೌಂದರ್ಯ, ಹಣಕಾಸು ಮತ್ತು ಸಂಬಂಧಗಳ ಕಾರಕ. ರಾಹು ಆಸೆ, ಮೋಹ, ಮಿತಿಲಂಘನೆ, ವಿದೇಶಿ ಸಂಸ್ಕೃತಿ ಮತ್ತು ಅಸಾಧಾರಣತೆಯನ್ನು ಪ್ರತಿನಿಧಿಸುತ್ತಾನೆ. ಈ ಇಬ್ಬರೂ ಕುಂಭದಲ್ಲಿ ಸೇರಿದಾಗ ಮಾನವನ ಆಸೆ ಮತ್ತು ಬುದ್ಧಿ ಹೊಸ ದಿಕ್ಕಿನಲ್ಲಿ ಸಾಗುವ ಪ್ರವೃತ್ತಿ ಹೆಚ್ಚುತ್ತಿದೆ.

ಈ ಯೋಗದ ಪ್ರಮುಖ ಲಕ್ಷಣವೆಂದರೆ ಸಾಂಪ್ರದಾಯಿಕ ಮೌಲ್ಯಗಳನ್ನು ಮೀರಿ ಆಧುನಿಕ, ವಿಭಿನ್ನ ಹಾಗೂ ಪ್ರಯೋಗಾತ್ಮಕ ಬದುಕಿನತ್ತ ಒಲವು. ಪ್ರೀತಿ ಮತ್ತು ಹಣ ಎರಡೂ ಕ್ಷೇತ್ರಗಳಲ್ಲಿ ಅತಿಯಾದ ಆಕರ್ಷಣೆ, ನಿರೀಕ್ಷೆ ಹಾಗೂ ಅಸಮಾಧಾನ ಕಾಣಿಸಿಕೊಳ್ಳಬಹುದು.

ಕುಂಭ ರಾಶಿ:

ಈ ಸಂಯೋಗವು ಸ್ವರಾಶಿಯಲ್ಲಿ ನಡೆಯುವುದರಿಂದ ಪರಿಣಾಮ ಅತ್ಯಂತ ತೀವ್ರ. ವ್ಯಕ್ತಿತ್ವದಲ್ಲಿ ಗುರುತು. ಸಮಾಜದಲ್ಲಿ ಗುರುತಿಸಿಕೊಳ್ಳುವ ಅವಕಾಶ, ಹೊಸ ಸ್ನೇಹ ವಲಯ, ವಿಭಿನ್ನ ಪ್ರೇಮ ಅನುಭವಗಳು ಸಾಧ್ಯ. ಆದರೆ ರಾಹುವಿನ ಪ್ರಭಾವದಿಂದ ಸಂಬಂಧಗಳಲ್ಲಿ ನೈತಿಕ ಮಿತಿ ತಪ್ಪಿದರೆ ಅಪವಾದ, ಗೊಂದಲ ಹಾಗೂ ಮನಸ್ಸಿನ ಅಶಾಂತಿ ಎದುರಾಗಬಹುದು. ಹಣದ ಹರಿವು ಹೆಚ್ಚಾದರೂ ಅತಿಯಾದ ಭೋಗಾಸಕ್ತಿ ತೊಂದರೆ ಕೊಡಬಹುದು.

ಮಿಥುನ ಮತ್ತು ತುಲಾ ರಾಶಿ

ಶುಕ್ರನಿಗೆ ಸ್ವಾಭಾವಿಕವಾಗಿ ಅನುಕೂಲಕರವಾದ ರಾಶಿಗಳು ಈ ಯೋಗವು ಕ್ರಿಯೆಟಿವಿಟಿ, ಕಲೆ, ಮಾಧ್ಯಮ, ಬರವಣಿಗೆ, ವ್ಯಾಪಾರ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರಗಳಲ್ಲಿ ಲಾಭವನ್ನು ನೀಡುತ್ತದೆ. ಪ್ರೇಮ ಜೀವನದಲ್ಲಿ ಆಕರ್ಷಣೆ. ಆದರೆ ಸಂಬಂಧಗಳು ಉಳಿದುಕೊಳ್ಳಲು ಪರಸ್ಪರ ನಂಬಿಕೆ ಅಗತ್ಯ. ವಿದೇಶಿ ಸಂಪರ್ಕಗಳು, ಹೊಸ ಯೋಜನೆಗಳು ಫಲಕೊಡಬಹುದು.

ಮೇಷ ಮತ್ತು ಸಿಂಹ ರಾಶಿ

ಸ್ನೇಹ ವಲಯ ವಿಸ್ತಾರವಾಗುತ್ತದೆ. ಹೊಸ ಜನರ ಪರಿಚಯದಿಂದ ಅವಕಾಶಗಳು ಬರುತ್ತವೆ. ಆದರೆ ದಾಂಪತ್ಯ ಅಥವಾ ಪ್ರೇಮದಲ್ಲಿ ಅನುಮಾನ, ಅಹಂಕಾರ ಹಾಗೂ ಅತಿಯಾದ ನಿರೀಕ್ಷೆ ಸಮಸ್ಯೆ ತರಬಹುದು. ಮಾತು ಮತ್ತು ವರ್ತನೆಯಲ್ಲಿ ಸಂಯಮ ಇರಬೇಕು.

ವೃಷಭ ಮತ್ತು ಮಕರ ರಾಶಿ

ಹಣಕಾಸು ಮತ್ತು ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಏಳುಪೇರು. ಹೊಸ ಆದಾಯದ ಮೂಲಗಳು ಕಾಣಿಸಿಕೊಳ್ಳುತ್ತವೆ. ಆದರೆ ಅತಿಯಾದ ಖರ್ಚು, ಲಕ್ಷುರಿ ಜೀವನದತ್ತ ಒಲವು ಸಾಲ ಅಥವಾ ಒತ್ತಡಕ್ಕೆ ಕಾರಣ. ಹಿರಿಯರೊಂದಿಗೆ ಅಥವಾ ಅಧಿಕಾರಿಗಳೊಂದಿಗೆ ವಿವಾದ ಸಂಭವಿಸುವ ಸಾಧ್ಯತೆಯಿದೆ.

ಕರ್ಕಾಟಕ, ಕನ್ಯಾ, ವೃಶ್ಚಿಕ ಮತ್ತು ಮೀನ ರಾಶಿ

ಈ ರಾಶಿಗಳಿಗೆ ಈ ಯೋಗ ಸ್ವಲ್ಪ ಎಚ್ಚರಿಕೆ ಸೂಚಿಸುವುದು. ಮನಸ್ಸಿನ ಅಸ್ಥಿರತೆ, ಗುಪ್ತ ಚಿಂತೆ, ಸಂಬಂಧಗಳಲ್ಲಿ ಗೊಂದಲ, ತಪ್ಪು ನಿರ್ಧಾರಗಳು ಸಂಭವಿಸಬಹುದು. ಕೆಲವರಿಗೆ ಮೋಸ, ತಪ್ಪು ಆಕರ್ಷಣೆ ಅಥವಾ ಗುಪ್ತ ಶತ್ರುಗಳಿಂದ ತೊಂದರೆ ಎದುರಾಗಬಹುದು. ಆರೋಗ್ಯದ ಕಡೆಗೂ ಗಮನ ಅಗತ್ಯ.

ಧನು ರಾಶಿ

ಹೊಸ ಕಲಿಕೆ, ತಂತ್ರಜ್ಞಾನ, ದೂರ ಪ್ರಯಾಣ, ವಿದೇಶಿ ಅವಕಾಶಗಳಿಂದ ಲಾಭ ಸಾಧ್ಯ. ಆದರೆ ಗುರುತತ್ವ ದುರ್ಬಲವಾದರೆ ದಾರಿತಪ್ಪುವ ನಿರ್ಧಾರಗಳ ಸಾಧ್ಯತೆಯೂ ಇದೆ. ಮಾರ್ಗದರ್ಶನ ಮತ್ತು ಶಿಸ್ತು ಇದ್ದರೆ ಈ ಯೋಗ ಶುಭಕಾರಕವಾಗುವುದಿಲ್ಲ.

ಕುಂಭದಲ್ಲಿನ ಶುಕ್ರ-ರಾಹು ಸಂಯೋಗವು ಸಂಪೂರ್ಣವಾಗಿ ಶುಭ ಅಥವಾ ಸಂಪೂರ್ಣ ಅಶುಭ ಎಂದು ನಿರ್ಧರಿಸಲಾಗುವುದಿಲ್ಲ. ಇದು ಆಸೆಗಳನ್ನು ಹೆಚ್ಚಿಸುವ ಯೋಗ. ವಿವೇಕ, ನೈತಿಕತೆ ಮತ್ತು ಶಿಸ್ತಿನೊಂದಿಗೆ ಬಳಸಿಕೊಂಡರೆ ಈ ಯೋಗ ಸಮಾಜದಲ್ಲಿ ಹೆಸರು, ಹಣ ಮತ್ತು ಗೌರವವನ್ನು ನೀಡಲಾಗುತ್ತದೆ. ಅತಿರೇಕಕ್ಕೆ ಹೋದರೆ ಅದೇ ಯೋಗ ಗೊಂದಲ, ಅಪವಾದ ಮತ್ತು ಮನಶ್ಶಾಂತಿಯ ಕೊರತೆಗೆ ಕಾರಣ.

– ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *