Headlines

ಕತ್ರಿನಾ ಕೈಫ್ ಜತೆಗಿನ ಸಂಸಾರ ವಿಕ್ಕಿ ಕೌಶಲ್​ಗೆ ಬೋರ್ ಆಯ್ತಾ? ವಿಡಿಯೋ ವೈರಲ್

ಕತ್ರಿನಾ ಕೈಫ್ ಜತೆಗಿನ ಸಂಸಾರ ವಿಕ್ಕಿ ಕೌಶಲ್​ಗೆ ಬೋರ್ ಆಯ್ತಾ? ವಿಡಿಯೋ ವೈರಲ್


ಕತ್ರಿನಾ ಕೈಫ್ ಜತೆಗಿನ ಸಂಸಾರ ವಿಕ್ಕಿ ಕೌಶಲ್ಗೆ ಬೋರ್ ಆಯ್ತಾ? ವಿಡಿಯೋ ವೈರಲ್

ಬಾಲಿವುಡ್‌ನ ಅತ್ಯಂತ ಪ್ರೀತಿಪಾತ್ರ ಜೋಡಿಗಳಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ (ಕತ್ರಿನಾ ಕೈಫ್) ಕೂಡ ಇದ್ದಾರೆ. ಪರಸ್ಪರರ ಮೇಲಿರುವ ಗೌರವ ಮತ್ತು ಪ್ರೀತಿಯಿಂದ ಈ ಜೋಡಿ ಅಭಿಮಾನಿಗಳ ಮನ ಗೆದ್ದಿದೆ. ಆದರೆ, ಇತ್ತೀಚೆಗೆ ವಿಕ್ಕಿ ಕೌಶಲ್ ಅವರ ಮದುವೆ ಸಮಾರಂಭದಲ್ಲಿ ಹಾಸ್ಯವು ವಿವಾದಕ್ಕೆ ಕಾರಣವಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಇಷ್ಟು ದಿನ ಉತ್ತಮ ನಡವಳಿಕೆಗಳ ಕಾರಣದಿಂದ ಮೆಚ್ಚುಗೆ ಪಡೆಯುತ್ತಿದ್ದ ವಿಕ್ಕಿ ಕೌಶಲ್ (ವಿಕ್ಕಿ ಕೌಶಲ್) ಅವರು ಈಗ ವಿವಾದಾತ್ಮಕ ಜೋಕ್ ಮಾಡಿ ಜನರಿಂದ ಟೀಕೆ ಎದುರಿಸಿದ್ದಾರೆ.

ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ವಿಕ್ಕಿ ಕೌಶಲ್ ಅವರು ವರನ ತಂದೆಯ ಬಳಿ ಮಾತನಾಡುತ್ತಾ, ವರನಿಗೆ ‘ಜೋಶ್ ಹೇಗಿದೆ?’ (ಜೋಶ್ ಹೇಗಿದೆ?) ಎಂದು ಕೇಳುವಂತೆ ತಿಳಿಸುತ್ತಾರೆ. ಇದಕ್ಕೆ ನೆರೆದಿದ್ದವರು ‘ಹೈ, ಸರ್’ ಎಂದು ಕೂಗಿದಾಗ, ವಿಕ್ಕಿ ಕೌಶಲ್ ಅವರು ಜೋಕ್ ಮಾಡಿದರು. ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿವೆ.

‘ಮದುವೆ ಆಗದೇ ಇರುವವರಿಗೆ ಯಾವಾಗಲೂ ಹೆಚ್ಚಿನ ಜೋಶ್ ಇರುವುದನ್ನು ನಾನು ಗಮನಿಸುತ್ತಿದ್ದೇನೆ. ಆದರೆ ನಮ್ಮಂತಹ ವಿವಾಹಿತರಲ್ಲಿ, ಆ ಜೋಶ್ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಹೋಗುತ್ತದೆ. ಆದರೆ ಚಿಂತಿಸಬೇಡಿ, ಕೇವಲ ನಾಲ್ಕು ದಿನಗಳಲ್ಲಿ ಜೋಶ್ ಮಾಯವಾಗುವುದಿಲ್ಲ’ ಎಂದು ವಿಕ್ಕಿ ತಮಾಷೆ ಮಾಡಿದರು. ಅವರ ಈ ಮಾತಿಗೆ ವಿರೋಧವಿದೆ.

ವಿಕ್ಕಿ ಹೆಂಡತಿ ಜೋಕ್ ಮಾಡುವ ಹುಡುಗನಾಗಿ ಬದಲಾಗುತ್ತಿದ್ದಾನೆ
ಮೂಲಕ
u/yours_truly_Davina in
ಬೊಲ್ಲಿಬ್ಲೈಂಡ್ಸ್ಎನ್ಗಾಸಿಪ್

ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಹೆಂಡತಿ ಅಥವಾ ಮದುವೆ ಬಗ್ಗೆ ವಿಕ್ಕಿ ಕೌಶಲ್ ಅವರು ಈ ರೀತಿ ಜೋಕ್ ಮಾಡಿದ್ದು ಅನೇಕರಿಗೆ ಸರಿ ಎನಿಸಿಲ್ಲ. ‘2026ರಲ್ಲೂ ನಾವು ಇಂತಹ ಸ್ತ್ರೀದ್ವೇಷದ ಮದುವೆ ಜೋಕ್‌ಗಳನ್ನು ಮಾಡುತ್ತಿದ್ದೀವಾ? ಇವುಗಳನ್ನು 2016ರಲ್ಲೇ ಬಿಡಬೇಕಿತ್ತು’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ವಿಕ್ಕಿ ಕೌಶಲ್ ಜೊತೆ ರುಕ್ಮಿಣಿ ವಸಂತ್ ಬರ್ತ್ಡೇ ಸಂಭ್ರಮ

‘ಪುರುಷರು ಸಾರ್ವಜನಿಕವಾಗಿ ತಮ್ಮ ವೈವಾಹಿಕ ಜೀವನವನ್ನು ಲೇವಡಿ ಮಾಡುವುದು ನನಗೆ ಇಷ್ಟವಿಲ್ಲ. ಇದು ಪರೋಕ್ಷವಾಗಿ ಹೆಂಡತಿಗೆ ಮಾಡುವ ಅವಮಾನ’ ಎಂದು ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ. ‘ಜೋಶ್ ಕಡಿಮೆ ಆಗಿದೆ ಎಂದರೆ ಕತ್ರಿನಾ ಕೈಫ್ ಜೊತೆಗಿನ ಸಂಸಾರ ವಿಕ್ಕಿ ಕೌಶಲ್ ಅವರಿಗೆ ಬೇಸರವಾಗಿದೆಯಾ’ ಎಂದು ಕೂಡ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವಿಕ್ಕಿ ಏನು ಉತ್ತರ ಕೊಡುತ್ತಾರೆ ಎಂದರೆ ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *