Headlines

Nandagokula Serial ಬಗ್ಗೆ ವೀಕ್ಷಕರ ಅಸಮಾಧಾನ… ಟ್ವಿಸ್ಟ್ ಕೊಟ್ಟು ತಪ್ಪು ಮಾಡಿದ್ರ ಡೈರೆಕ್ಟರ್!

Nandagokula Serial ಬಗ್ಗೆ ವೀಕ್ಷಕರ ಅಸಮಾಧಾನ… ಟ್ವಿಸ್ಟ್ ಕೊಟ್ಟು ತಪ್ಪು ಮಾಡಿದ್ರ ಡೈರೆಕ್ಟರ್!

Nandagokula Serial ಬಗ್ಗೆ ವೀಕ್ಷಕರ ಅಸಮಾಧಾನ… ಟ್ವಿಸ್ಟ್ ಕೊಟ್ಟು ತಪ್ಪು ಮಾಡಿದ್ರ ಡೈರೆಕ್ಟರ್!

Nandagokula: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ತುಂಬು ಕುಟುಂಬದ ಸುಂದರವಾದ ಸೀರಿಯಲ್ ‘ನಂದಗೋಕುಲ’ದ ಬಗ್ಗೆ ಇದೀಗ ವೀಕ್ಷಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇಲ್ಲಿವರೆಗೂ ಬೆಸ್ಟ್ ಸೀರಿಯಲ್ ಎನ್ನುತ್ತಿದ್ದವರು ಇದೀಗ ಕಿಡಿ ಕಾರುತ್ತಿದ್ದಾರೆ. ಕಾರಣ ಏನು ಗೊತ್ತಾ?

ನಂದಕುಮಾರ್ ಮತ್ತು ಗಿರಿಜಾರ ಮುದ್ದಿನ ಸಂಸಾರದ ಕಥೆಯನ್ನು ಹೊತ್ತು ಸಾಗಿದ ನಂದಗೋಕುಲ ಧಾರಾವಾಹಿಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ನಂದನ ಮೂವರು ಗಂಡು ಮಕ್ಕಳು ಮತ್ತು ಅವರ ಪ್ರೀತಿಯ ಕಥೆ ಎಲ್ಲವೂ ತುಂಬಾನೆ ಸುಂದರವಾಗಿ ಮೂಡಿ ಬರುತ್ತಿತ್ತು.

ನಂದಕುಮಾರನ ಇಬ್ಬರು ಕಿರಿಯ ಮಕ್ಕಳು ಅಪ್ಪನ ಇಚ್ಚೆಗೆ ವಿರುದ್ಧವಾಗಿ ಲವ್ ಮ್ಯಾರೇಜ್ ಮಾಡಿಕೊಂಡು ಬಂದಿದ್ದರು. ಆದರೆ ಇಬ್ಬರೂ ಕೂಡ ಮುದ್ದಿನ ಸೊಸೆಯರು, ತಮ್ಮ ಮನೆಗೆ, ಮನೆಯವರಿಗೆ ಯಾವುದೇ ರೀತಿಯಲ್ಲಿ ಕೆಟ್ಟದಾಗಲು ಬಿಡದಂತಹ ಸೊಸೆಯರು. ಆದರೆ ಈಗ ಎಲ್ಲಾ ಬದಲಾಗಿದೆ.

ಇದೀಗ ನಂದಕುಮಾರ್ ತಾನೇ ಹುಡುಕಿ ಮಾಡಿದಂತಹ ಹಿರಿಯ ಮಗ ಮಾಧವನ ಮದುವೆ ಮಾಡಿಸಿದ್ದು, ಇದೀಗ ಅದೇ ಸೊಸೆ ಮನೆಗೆ ವಿಲನ್ ಆದಂತಿದೆ. ಯಾಕಂದ್ರೆ ಆಕೆ ತನ್ನ ಹಿಡಿತದಲ್ಲೇ ಮನೆಯ ಎಲ್ಲಾ ಸದಸ್ಯರು ಇರಬೇಕು ಎನ್ನುತ್ತಾ, ಅತ್ತೆ ಮಾವನನ್ನುಇಂಪ್ರೆಸ್ ಮಾಡಲು ಹೊರಟಿದ್ದಾಳೆ ಪ್ರಿಯಾ.

ಇಲ್ಲಿವರೆಗೆ ಮನೆಯ ಒಳಗೆ ಯಾವುದೇ ವಿಲನ್ ಇಲ್ಲದೇ, ಸುಂದರವಾಗಿ ಸಾಗುತ್ತಿದ್ದ ಕತೆಯಲ್ಲಿ ಇದೀಗ ಮನೆಗೆ ಬಂದಿರುವ ಸೊಸೆಯೇ ವಿಲನ್ ಆಗಿರುವುದನ್ನು ನೋಡಿ, ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟೊಳ್ಳೆ ಕಥೆಯನ್ನು ಹಾಳು ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.

ನಂದಗೋಕುಲ ಸಹ ಇದೀಗ ಇತರ ಸೀರಿಯಲ್ ಗಳಂತೆ ವಿಲನ್ ಗಳನ್ನು ಒಳಗೊಂಡಿದ್ದು, ಹೊಸತನ ಏನೂ ಈಲ್ಲ. ತುಂಬಾ ಚೆನ್ನಾಗಿದ್ದ ಧಾರಾವಾಹಿಯನ್ನು ಈ ರೀತಿ ಕೆಡಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಈ ಟ್ವಿಸ್ಟ್ ಕೊಟ್ಟು ತಪ್ಪು ಮಾಡಿದ್ರಾ ನಿರ್ದೇಶಕರು.

ಇನ್ನ ಮುಂದೆ ಇದು ನಂದಗೋಕುಲ ಸೀರಿಯಲ್ ಆಗಲ್ಲ . ಎಲ್ಲ ಸೀರಿಯಲ್ ತರ ಇದು ಡಬ್ಬನೆ

ಚನ್ನಾಗಿ ಬರ್ತಿದ್ದ ಸೀರಿಯಲ್ ನು ಹೇಗೆ ಕೆಡಿಸಬೇಕು ಅಂತ ಡೈರೆಕ್ಟರ್ ನೋಡ್ತಾನೆ

ಮೀನಾ ಇವಳಿಗೆ ಸರಿಯಾಗಿ ತಿರುಗೇಟು ಕೊಡ್ಬೇಕು . ತೀರ ಓವರ್ ಆಯ್ತು ಈ ಪ್ರಿಯದು

ಇವರಿಂದಾಗಿ ಮನೆ ಎಲ್ಲಿ ಒಡೆದ್ದು ಹೋಗುತೋ ಥು ಪ್ರಿಯ ದು ಓವರ್ ಅಯ್ತು

Source link

Leave a Reply

Your email address will not be published. Required fields are marked *