ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. 2019ರಲ್ಲಿ ‘ಡಿಯರ್ ಕಾಮ್ರೇಡ್’ ಚಿತ್ರಕ್ಕಾಗಿ ವಿಜಯ್ ಅವರು ರಶ್ಮಿಕಾಗೆ ಚಿನ್ನದ ಪದಕ ತೊಡಿಸಿದ್ದರು, ಇದೀಗ ಅವರೇ ಮಾಂಗಲ್ಯ ಕಟ್ಟಿದ್ದಾರೆ.

ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಉರ್ಫ್ ವಿರೋಶ್ (Vijaya Devarakonda and Rashmika Mandanna- Virosh) ಜೋಡಿ ಮದುವೆಯಾಗಿ ವಾರ ಕಳೆದಿದೆ. ಈಗಲೂ ಈ ಸ್ಟಾರ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಲೇ ಇದ್ದಾರೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಲವ್ನಲ್ಲಿ ಬಿದ್ದು ಹಲವು ವರ್ಷ ಕಳೆದಿದ್ದರೂ, ಹಲವು ದೇಶಗಳಿಗೆ ಸುತ್ತಾಟ ಮಾಡಿ ಬಂದಿದ್ದರೂ ಮದುವೆಯ ಬಗ್ಗೆ ಗುಟ್ಟಾಗಿಯೇ ಇಟ್ಟಿದ್ದರು. ಈ ಬಗ್ಗೆ ಪ್ರಶ್ನೆ ಕೇಳಿದಾಗಲೆಲ್ಲಾ ನುಣುಚಿಕೊಳ್ಳುತ್ತಿದ್ದರು. ಅಂತಿಮ ಹಂತದದವರೆಗೂ ಇವರ ಮದ್ವೆ ನಿಜನಾ, ಸುಳ್ಳಾ ಎನ್ನುವ ಡೌಟೇ ಎಲ್ಲೆಡೆ ಇತ್ತು. ಕೊನೆಗೂ ಜೋಡಿ ಅಧಿಕೃತವಾಗಿ ಸತಿ-ಪತಿಯಾಗಿದ್ದಾರೆ.

ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ, ರಶ್ಮಿಕಾ ಮಂದಣ್ಣ ಅವರಿಗೆ ಜೀವನದ ಮೊದಲ ಗೋಲ್ಡ್ ಮೆಡಲ್ ಅನ್ನು ವಿಜಯ್ ದೇವರಕೊಂಡ ಅವರೇ ಹಾಕಿದ್ದರು.

2019ರಲ್ಲಿ ಬಿಡುಗಡೆಯಾದ ವಿಜಯ್ ಮತ್ತು ರಶ್ಮಿಕಾ ಅಭಿನಯದ ಡಿಯರ್ ಕಾಮ್ರೇಡ್ ಚಿತ್ರಕ್ಕೆ best actress ಅವಾರ್ಡ್ ರಶ್ಮಿಕಾ ಅವರಿಗೆ ಸಿಕ್ಕಿತ್ತು.

ಅದನ್ನು ವೇದಿಕೆ ಮೇಲೆ ಘೋಷಿಸಿದಾಗ ವಿಜಯ್ ಅವರೇ ಬಂದು ರಶ್ಮಿಕಾ ಕೊರಳಿಗೆ ಚಿನ್ನದ ಪದಕ ಹಾಕಿದ್ದರು. ಇದು ನನ್ನ ಸಂಪೂರ್ಣ ಜೀವನದ ಮೊದಲ ಗೋಲ್ಡ್ ಮೆಡಲ್. ತುಂಬಾ ಭಾರವಾಗಿದೆ, ಥ್ಯಾಂಕ್ಯೂ ವಿಜಯ್ ಎಂದು ರಶ್ಮಿಕಾ ಆಗ ಹೇಳಿದ್ದರು.

ಅದೇ ವಿಜಯ್ ದೇವರಕೊಂಡ ಇದೀಗ, ಭಾರವಾಗಿರುವ ಚಿನ್ನದ ಮಂಗಳಸೂತ್ರವನ್ನು ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಕೊರಳಿಗೆ ಹಾಕಿದ್ದಾರೆ. ವಿಧಿಯ ಲೀಲೆ ಎಂದರೆ ಇದೇ ಅಲ್ವಾ ಅಂತಿದ್ದಾರೆ ಅಭಿಮಾನಿಗಳು.

Source link
Virosh ರೋಚಕ ಸ್ಟೋರಿ: ಅಂದು ಜೀವನದ ಮೊದಲ ಗೋಲ್ಡ್ಮೆಡಲ್ ಹಾಕಿದ, ಇಂದು ಚಿನ್ನದ ತಾಳಿ ಕಟ್ಟಿದ!