
ವಿಜಯ್ ಹಂಚಿಕೊಂಡ ಆ ಒಂದು ಸುಂದರ ಕ್ಷಣ:
ಪ್ರವಾಸಕ್ಕೆ ಹೊರಡುವ ಮುನ್ನ ವಿಜಯ್ ದೇವರಕೊಂಡ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಏರ್ಪೋರ್ಟ್ ಲೌಂಜ್ನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿರುವ ಫೋಟೋ ಇದಾಗಿದ್ದು, ಅಲ್ಲಿ ಒಂದು ಪೋಲರಾಯ್ಡ್ (Polaroid) ಫೋಟೋವನ್ನು ಯಾರೋ ಹಿಡಿದಿರುವಂತೆ ಕಾಣುತ್ತದೆ. ಅಭಿಮಾನಿಗಳ ಪ್ರಕಾರ, ಆ ಫೋಟೋ ಹಿಡಿದಿರುವುದು ರಶ್ಮಿಕಾ ಮಂದಣ್ಣ ಅವರೇ! ಈ ಫೋಟೋಗೆ ವಿಜಯ್, “ಕಳೆದ ಕೆಲವು ತಿಂಗಳುಗಳ ಸತತ ಕೆಲಸದ ನಂತರ.. ಈಗ ರಜೆಯ ಸಮಯ,” ಎಂಬ ಕ್ಯಾಪ್ಶನ್ ನೀಡಿದ್ದಾರೆ. ಇದು ಈ ಜೋಡಿ ಒಟ್ಟಿಗೆ ರಜೆ ಕಳೆಯಲು ವಿದೇಶಕ್ಕೆ ಹಾರಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ.