ವಿಜಯ ಹಝಾರೆಯ ದ್ವಿತೀಯ ಸುತ್ತಿನ ಪಂದ್ಯಗಳು ಮುಗಿದಿವೆ. 32 ತಂಡಗಳ ನಡುವಣ ಕದನದಲ್ಲಿ ತೃತೀಯ ಸುತ್ತಿಗೆ ಅರ್ಹತೆ ಪಡೆದಿರುವುದು 4 ತಂಡಗಳು. ಈ ನಾಲ್ಕು ತಂಡಗಳ ನಡುವೆ ಸೆಮಿ ಫೈನಲ್ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳ ಕೆಳಗಿನಂತಿವೆ…
ಜನವರಿ 15 ರಂದು ನಡೆಯಲಿರುವ ಮೊದಲ ಸೆಮಿ ಫೈನಲ್ ಕರ್ನಾಟಕ ಹಾಗೂ ವಿದರ್ಭ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಬೆಂಗಳೂರಿನ ಬಿಸಿ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಂತರ. ಇನ್ನು ಈ ಮ್ಯಾಚ್ ಶುರುವಾಗುವುದು ಬೆಳಿಗ್ಗೆ 9 ಗಂಟೆಯಿಂದ.
ಜನವರಿ 16 ರಂದು ನಡೆಯಲಿರುವ ದ್ವಿತೀಯ ಸೆಮಿ ಫೈನಲ್ ಮ್ಯಾಚ್ನಲ್ಲಿ ಪಂಜಾಬ್ ಮತ್ತು ಸೌರಾಷ್ಟ್ರ ತಂಡಗಳು ಕಣಕ್ಕಿಳಿಯಲಿವೆ. ಬೆಂಗಳೂರಿನ ಬಿಸಿಸಿ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭವಾಗಲಿದೆ.
ಈ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಜನವರಿ 18 ರಂದು ನಡೆಯಲಿರುವ ಫೈನಲ್ ಪಂದ್ಯ ಮುಖಿಯಾಗಲಿವೆ. ಈ ಪಂದ್ಯಕ್ಕೂ ಬೆಂಗಳೂರಿನಲ್ಲಿರುವ ಬಿಸಿ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನ ಆತಿಥ್ಯವಹಿಸಲಿದೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್ (ಉಪನಾಯಕ), ದೇವದತ್ ಪಡಿಕ್ಕಲ್, ಸ್ಮರಣ್ ರವಿಚಂದ್ರನ್, ಕೆ.ಎಲ್.ಶ್ರೀಜಿತ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವೈಶಾಕ್ ವಿಜಯಕುಮಾರ್, ಮನ್ವಂತ್ ಕುಮಾರ್, ಶ್ರೀಶ ಆಚಾರ್, ಅಭಿಲಾಷ್ ಶೆಟ್ಟಿ, ಬಿ.ಆರ್.ಶರತ್, ಹರ್ಷಿಲ್ ಧರ್ಮಣಿ.




