
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ಕಂಪನಿಯು ತನ್ನ ಹಿಡಿತದಲ್ಲಿ ಇದ್ದ ಆರ್ಸಿಬಿ (RCB) ಒಡೆತನವನ್ನು ಸಂಪೂರ್ಣವಾಗಿ ಮಾರಾಟ ಮಾಡಿದೆ. ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ಆರ್ಸಿಬಿ ಫ್ರ್ಯಾಂಚೈಸಿಯನ್ನು ಖರೀದಿಸಿದೆ. ಈ ಮೂಲಕ ಹೊಸ ಕ್ಷೇತ್ರಕ್ಕೆ ಆದಿತ್ಯ ಬಿರ್ಲಾ ಕಾಲಿಟ್ಟಿದೆ. ಆದಿತ್ಯ ಬಿರ್ಲಾ ಜೊತೆ ಅಮೆರಿಕದ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ಒಡೆತನದ ಬೋಲ್ಟ್ ವೆಂಚರ್ಸ್, ಬ್ಲ್ಯಾಕ್ಸ್ಟೋನ್ ಇಕ್ವಿಟಿ ಫರ್ಮ್, ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ಸಮೂಹ ಕೂಡ ಇದೆ. ಈ ಮಾರಾಟದ ಬೆನ್ನಲ್ಲೇ ಮಲ್ಯ ಟ್ವೀಟ್ ಮಾಡಿದ್ದಾರೆ.
ಬಿಸಿ ಬಿಸಿ ಐಪಿಎಲ್ ಆರಂಭಿಸೋ ಸಂಧರ್ಭದಲ್ಲಿ ಫ್ರಾಂಚೈಸಿಗಳನ್ನು ಮಾಡಿ, ಮಾರಲು ಮುಂದಾಯಿತು. ಆಗ ಮಲ್ಯ ಎರಡು ಫ್ರಾಂಚೈಸಿ ನೀಡುವಂತೆ ಬೇಡಿಕೆ ಇಟ್ಟರು. ಆದರೆ, ಒಬ್ಬರಿಗೆ ಒಂದು ತಂಡ ಮಾತ್ರ ಖರೀದಿಸುವ ಅವಕಾಶ ನೀಡಲಾಯಿತು. ಅದರಂತೆ ಮಲ್ಯ 450 ಕೋಟಿ ರೂಪಾಯಿ ನೀಡಿ ಒಂದು ತಂಡ ಖರೀದಿಸಿದರು. ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರ ಮಾಡೋದು ಇವರ ಉದ್ದೇಶ. ಈ ಕಾರಣದಿಂದ ರಾಯಲ್ ಚಾಲೆಂಜರ್ಸ್ ಅಂತ ಇಟ್ಟರು. ಮಲ್ಯಗೆ ಬೆಂಗಳೂರು ಹಿನ್ನೆಲೆ ಬೆಂಗಳೂರು ಎಂದು ಸೇರಿಸಲಾಯಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ತಂಡಕ್ಕೆ ಹೆಸರು ಇಟ್ಟರು. ವಿರಾಟ್ ಕೊಹ್ಲಿ ಖರೀದಿಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಈಗ ತಂಡ ಮಾರಾಟ ಆಗಿದ್ದಕ್ಕೆ ಅವರು ಟ್ವೀಟ್ ಮಾಡಿದ್ದಾರೆ.
‘ಆರ್ಸಿಬಿಯ ಹೊಸ ಯೋಜನೆಗೆ ನನ್ನ ಹೃತ್ಪೂರ್ವಕವಾಗಿ ಅಭಿನಂದನೆಗಳು. ಐಪಿಎಲ್ನಲ್ಲಿ ಅತ್ಯಂತ ಅಮೂಲ್ಯವಾದ ಫ್ರಾಂಚೈಸಿಯನ್ನು ಖರೀದಿಸಿದ ನಿಮಗೆ ಶುಭ ಹಾರೈಸುತ್ತೇನೆ. ನಾನು 2008ರಲ್ಲಿ ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗೆ ಖರೀದಿಸಿದೆ. ಆಗಿದ್ದರೆ ನನ್ನನ್ನು ನೋಡಿ ನಕ್ಕರು. ನನ್ನ ಹೂಡಿಕೆ ವ್ಯರ್ಥ ಎಂದು ಟೀಕಿಸಿದರು’ ಎಂದು ಅವರು ಹೇಳಿದರು.
RCB ಯ ಹೊಸ ಮಾಲೀಕರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಅವರಿಗೆ ಅತ್ಯಮೂಲ್ಯವಾದ ಐಪಿಎಲ್ ಫ್ರಾಂಚೈಸ್ನೊಂದಿಗೆ ಉತ್ತಮ ಮತ್ತು ಗಾಡ್ಸ್ಪೀಡ್ ಅನ್ನು ನಾನು ಬಯಸುತ್ತೇನೆ. ನಾನು 2008 ರಲ್ಲಿ INR 450 ಕೋಟಿಗೆ ಫ್ರಾಂಚೈಸಿಯನ್ನು ಖರೀದಿಸಿದಾಗ, ಹೆಚ್ಚಿನ ಜನರು ನನ್ನನ್ನು ನೋಡಿ ನಕ್ಕರು ಮತ್ತು ನನ್ನ ಹೂಡಿಕೆಯನ್ನು ವ್ಯಾನಿಟಿ ಯೋಜನೆ ಎಂದು ಟೀಕಿಸಿದರು. ನನ್ನ ಹಿಂದೆ…
– ವಿಜಯ್ ಮಲ್ಯ (@TheVijayMallya) ಮಾರ್ಚ್ 26, 2026
‘ರಾಯಲ್ ಚಾಲೆಂಜ್ ಬ್ರ್ಯಾಂಡ್ ಅನ್ನು ನಿರ್ಮಿಸಬೇಕು ಎಂದು ನನಗೆ ಬಹುವಾಗಿ ಇತ್ತು. ಈ ಕಾರಣದಿಂದ ನಾನು ತಂಡಕ್ಕೆ ಆರ್ಸಿಬಿ ಎಂದು ಹೆಸರಿಸಿದೆ. ನನ್ನ 450 ಕೋಟಿ ರೂಪಾಯಿ ಹೂಡಿಕೆ ಈಗ 16,500 ಕೋಟಿ ರೂಪಾಯಿಗಳಿಗೆ ಬೆಳೆದಿರುವುದನ್ನು ನೋಡಲು ಅಪಾರ ಸಂತೋಷವಾಗಿದೆ. ಆರ್ಸಿಬಿ ಯಾವಾಗಲೂ ನನ್ನ ಡಿಎನ್ಎಯ ಭಾಗವಾಗಿ ಉಳಿಯುತ್ತದೆ’ ಎಂದು ಮಲ್ಯ ಹೇಳಿದರು.
ಇದನ್ನೂ ಓದಿ: ಪ್ರೆಸ್ಕಾನ್ಫರೆನ್ಸ್ ನಡೆಯುವಾಗಲೇ ಹೂಸುಬಿಟ್ಟ ರಿಜ್ವಾನ್; ಸಿಟ್ಟಾದ ವಾರ್ನರ್ ಹೇಳಿದ್ದೇನು?
‘ಆರ್ಸಿಬಿ ತಂಡದ ಆಟಗಾರರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಎಲ್ಲಾ ಆರ್ಸಿಬಿ ಅಭಿಮಾನಿಗಳಿಗೆ, ಕೃತಜ್ಞಪೂರ್ವಕ ಧನ್ಯವಾದಗಳು. ದಯವಿಟ್ಟು ಬೆಂಗಳೂರಿನ ಸಿಂಹ ಆರ್ಸಿಬಿಯನ್ನು ಬೆಂಬಲಿಸುವುದನ್ನು ಮುಂದುವರಿಸಿ, ನಮಸ್ಕಾರ’ ಎಂದು ಅವರು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.