Headlines

ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಲು ಸಜ್ಜಾದ ವಿಜಯ್, ಹಲವು ಯೋಜನೆ

ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಲು ಸಜ್ಜಾದ ವಿಜಯ್, ಹಲವು ಯೋಜನೆ


ತಮಿಳು ಚಿತ್ರರಂಗದಲ್ಲಿ (ತಮಿಳು ಚಲನಚಿತ್ರ ಇಂಡಸ್ಟ್ರಿ) ಇರುವುದರಿಂದ ರಜನೀಕಾಂತ್ ಅವರು ಟಾಪ್ ಸೂಪರ್ ಸ್ಟಾರ್ ಸ್ಥಾನದಲ್ಲಿದ್ದಾರೆ. ಆದರೆ ದಳಪತಿ ವಿಜಯ್ ಇತ್ತೀಚೆಗೆ ಬಾಕ್ಸ್ ಆಫೀಸ್ ಸಂಖ್ಯೆ, ಅಭಿಮಾನಿಗಳ ಸಂಖ್ಯೆಯಲ್ಲಿ ರಜನೀಕಾಂತ್ ಅವರನ್ನು ಹಿಂದಿಕ್ಕಿದ್ದಾರೆ. ವಿಜಯ್ ಅವರೇ ಮುಂದಿನ ರಜನೀಕಾಂತ್ ಚಿತ್ರರಂಗದಲ್ಲಿ ಮಾತನಾಡಿಕೊಳ್ಳುತ್ತಿರುವಾಗಲೇ ವಿಜಯ್ ಅವರು ರಾಜಕೀಯಕ್ಕಾಗಿ ಸಿನಿಮಾಕ್ಕೆ ವಿದಾಯ ಹೇಳುತ್ತಿದ್ದಾರೆ. ವಿಜಯ್ ಇದೀಗ ತಮ್ಮ ಕೊನೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಸಿನಿಮಾಕ್ಕೆ ಮತ್ತು ತಮ್ಮ ಸಿನಿಮಾ ಅಭಿಮಾನಿಗಳಿಗೆ ಭಾವುಕ ವಿದಾಯವನ್ನು ಹೇಳಲು ವಿಜಯ್ ಸಜ್ಜಾಗಿದ್ದಾರೆ. ಹಲವಾರು ಯೋಜನೆಗಳನ್ನು ಅವರು ಹಾಕಿದ್ದಾರೆ.

ವಿಜಯ್ ಪ್ರಸ್ತುತ ‘ಜನ ನಾಯಕನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಕೊನೆಯ ಸಿನಿಮಾ ಆಗಿರುತ್ತದೆ. ಇದು ತಮ್ಮ ಕೊನೆಯ ಸಿನಿಮಾ ಎಂದು ವಿಜಯ್ ಘೋಷಣೆ ಮಾಡಿದ್ದಾರೆ. ಈ ಸಿನಿಮಾದ ಮೂಲಕ ಇಷ್ಟು ವರ್ಷಗಳ ತಮ್ಮ ಸಿನಿಮಾ ಪಯಕ್ಕೆ ಹಾಗೂ ತಮ್ಮ ಸಿನಿಮಾದ ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಲು ವಿಜಯ್ ಯೋಜನೆ ಹಾಕಿಕೊಂಡಿದ್ದಾರೆ.

ಈ ಸಿನಿಮಾವನ್ನು ಹಾಗೂ ವಿದ್ಯೆಯನ್ನು ನೆನಪಿಸಿಕೊಳ್ಳುವಂತೆ ವಿಜಯ್ ನಿಶ್ಚಯಿಸಿದ್ದು, ಅದಕ್ಕಾಗಿ ಭಾರಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲು ವಿಜಯ್ ಸಜ್ಜಾಗಿದ್ದಾರೆ. ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ತಮಿಳು ಚಿತ್ರರಂಗದ ಕೆಲವು ಸ್ಟಾರ್ ನಟ-ನಿರ್ದೇಶಕರು ಭಾಗಿ ಆಗಲಿದ್ದಾರೆ. ರಜನೀಕಾಂತ್, ಅಜಿತ್, ಕಮಲ್ ಹಾಸನ್, ಸೂರ್ಯ ಇನ್ನೂ ವಿಜಯ್ ಅವರ ಬಗ್ಗೆ ಮಾತನಾಡಿದ ವಿಡಿಯೋಗಳು ಪ್ಲೇ ಆಗಲಿವೆ. ವಿಜಯ್, ತಮ್ಮ ವೃತ್ತಿ ಜೀವನಕ್ಕೆ ಸಹಕರಿಸಿದ ಅನೇಕ ನಿರ್ದೇಶಕರು, ತಂತ್ರಜ್ಞರಿಗೆ ಸನ್ಮಾನ ಮಾಡಲಿದ್ದಾರೆ. ಅಂತಿಮವಾಗಿ ಭಾವುಕ ಭಾಷಣ ಸಹ ಮಾಡಲಿದ್ದಾರಂತೆ.

ಇದನ್ನೂ ಓದಿ:ನಟ, ರಾಜಕಾರಣಿ ದಳಪತಿ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ

ಇನ್ನು ಸಿನಿಮಾದ ಒಳಗೂ ಸಹ ವಿಜಯ್ ಅವರು ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಲಿದ್ದಾರೆ. ‘ಜನ ನಾಯಕನ್’ ಸಿನಿಮಾ ಅಂದರೆ ವಿಜಯ್ ಅವರ ರಾಜಕೀಯ ಭವಿಷ್ಯಕ್ಕೆ ನೆರವಾಗುವಂತೆ ರೂಪಿಸುವಂತೆ. ಸರ್ಕಾರಗಳನ್ನು ಪ್ರಶ್ನೆ ಮಾಡುವ ಸಂಭಾಷಣೆಗಳು, ತಮ್ಮ ಪಕ್ಷದ ಧ್ಯೇಯೋದ್ಧೇಶಗಳ ಪ್ರಚಾರಕ್ಕೂ ಸಹ ‘ಜನ ನಾಯಕನ್’ ಅನ್ನು ಬಳಸಲಾಗುತ್ತಿದೆ. ಜೊತೆಗೆ ಸಿನಿಮಾದ ಕೊನೆಯಲ್ಲಿ ವಿಜಯ್ ಅವರು ಅಭಿಮಾನಿಗಳಿಗೆ ವಿದಾಯ ಹೇಳುವ ದೃಶ್ಯ ಸಹ ಇರಲಿದೆಯಂತೆ.

‘ಜನ ನಾಯಕನ್’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದ್ದಾರೆ, ಎಚ್ ವಿನೋದ್ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಲನ್ ಪಾತ್ರದಲ್ಲಿ ಬಾಬಿ ಡಿಯೋಲ್ ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಸ್ಥೆ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *