ವಿಜಯ್ ರಾಘವೇಂದ್ರ ಹಾಗೂ ಆಯಂಕರ್ ಅನುಶ್ರೀ (ಅನುಶ್ರೀ) ಮಧ್ಯೆ ಒಳ್ಳೆಯ ಗೆಳೆತನ ಇದೆ. ವಿಜಯ್ ರಾಘವೇಂದ್ರ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಜಡ್ಜ್ ಆಗಿದ್ದು, ಅನುಶ್ರೀ ಆಯಂಕರಿಂಗ್ ಮಾಡುತ್ತಿದ್ದಾರೆ. ಸೆಟ್‌ನಲ್ಲಿ ನಡೆದ ಒಂದು ಫನ್ ವಿಡಿಯೋ ಅನುಶ್ರೀ ಹಂಚಿಕೊಂಡಿದ್ದಾರೆ. ಈ ವಾರ ರಿಲೀಸ್ ಆದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ’ ಸಿನಿಮಾದ ಪ್ರಚಾರಕ್ಕಾಗಿ ಈ ವಿಡಿಯೋ ಮಾಡಲಾಗಿದೆ.
ವಿಜಯ್ ರಾಘವೇಂದ್ರ ಅವರು 60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಕೆಳಗಿನ ಕೆಲವು ಹಿಟ್ ಆಗಿವೆ. ಆದರೆ, ಯಾವುದೇ ಸಿನಿಮಾದಲ್ಲಿ ಅವರಿಗೆ ಮಾಸ್ ಡೈಲಾಗ್ ಇಲ್ಲ. ಈ ಮಾಸ್ ಡೈಲಾಗ್ ಅಥವಾ ನೆನಪಿಸಿಕೊಳ್ಳುವ ಡೈಲಾಗ್ ಇಲ್ಲ ಎಂಬ ವಿಷಯದೊಂದಿಗೆ ವಿಡಿಯೋ ಆರಂಭವಾಗುತ್ತದೆ. ‘ವಿಜಯ್ ನಿನ್ನ ಸಿನಿಮಾದ ಒಂದೊಳ್ಳೆಯ ಡೈಲಾಗ್ ಹೇಳು’ ಎಂದು ಅನುಶ್ರೀ ಕೇಳುತ್ತಾರೆ. ಆದರೆ, ಏನೇ ಮಾಡಿದರೂ ಯಾವ ಸಿನಿಮಾದಲ್ಲೂ ಡೈಲಾಗ್ ಸಿಗಲ್ಲ.
ಹಲವು ಸಿನಿಮಾಗಳ ಹೆಸರನ್ನು ಅನುಶ್ರೀ ಹೇಳುತ್ತಾರೆ. ಆದರೆ, ವಿಜಯ್ ರಾಘವೇಂದ್ರ ಅವರಿಂದ ನಕಾರಾತ್ಮಕ ಉತ್ತರವೇ ಬರುತ್ತದೆ. ಈ ವಿಷಯದಲ್ಲಿ ಅನುಶ್ರೀ ಫ್ರೆಸ್ಟ್ರೇಟ್ ಆಗುತ್ತಾರೆ. ಅವರಿಗೆ ಟಾರ್ಚರ್ ರೀತಿಯ ಫೀಲ್ ಆಗುತ್ತದೆ.
ಇದನ್ನೂ ಓದಿ: ವಿಜಯ್ ರಾಘವೇಂದ್ರ ಮತ್ತು ಅನುಶ್ರೀ ಕಾಮಿಡಿ ಪ್ರಮೋಷನ್: ವಿಡಿಯೋ
ವಿಜಯ್ ‘ಕಳ್ಳ ಮಳ್ಳ ಸುಳ್ಳ’ ಸಿನಿಮಾ ಹೆಸರು ಹೇಳಿದರೆ, ‘ಆ ಮೂರು ನೀನೇ’ ಎಂದು ಅನುಶ್ರೀ. ‘ನಾನು ಕಳ್ಳನೂ ಅಲ್ಲ, ಮಳ್ಳನೂ ಅಲ್ಲ, ಸುಳ್ಳನೂ ಅಲ್ಲ’ ಎಂದು ವಿಜಯ್ ಉತ್ತರಿಸುತ್ತಾರೆ. ಆಗ, ಅನುಶ್ರೀ, ‘ಇವನು ಸೀತಾರಾಮ್’ ಎನ್ನುತ್ತಾರೆ. ‘ನೀನು ಮೆಂಟಲ್ ಕೇಸ್ ರೀತಿ ಆಡ್ತಾ ಇದೀಯಾ’ ಎಂದು ವಿಜಯ್ ಹೇಳುತ್ತಾರೆ. ‘ಇದು ಮೆಂಟಲ್ ಕೇಸ್ ಅಲ್ಲ, ಸೆಕೆಂಡ್ ಕೇಸ್ ಆಫ್ ಸೀತಾರಾಮ’ ಎಂದು ಅವರು ಹೇಳಿದರು. ’20ಕ್ಕೆ ಸೆಕೆಂಡ್ ಕೇಸ್ ಆಫ್ ಸೀತಾರಾಮ ಸಿನಿಮಾ ರಿಲೀಸ್ ಆಗುತ್ತಿದೆ. ದಯವಿಟ್ಟು ನೋಡಿ’ ಎಂದು ವಿಜಯ್ ಹಾಗೂ ಅನುಶ್ರೀ ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.