ಎರಡನೇ ಕೇಸ್ ಮೂಲಕ ಬಂದ ಸೀತಾರಾಮ್; ಮತ್ತೆ ಖಾಕಿ ತೊಟ್ಟ ವಿಜಯ್ ರಾಘವೇಂದ್ರ

ಎರಡನೇ ಕೇಸ್ ಮೂಲಕ ಬಂದ ಸೀತಾರಾಮ್; ಮತ್ತೆ ಖಾಕಿ ತೊಟ್ಟ ವಿಜಯ್ ರಾಘವೇಂದ್ರ


ವಿಜಯ್ ರಾಘವೇಂದ್ರ (ವಿಜಯ್ ರಾಘವೇಂದ್ರ) ನಟನೆಯ ‘ಸೀತಾರಾಮ್ ಬಿನೋಯ್ ಕೇಸ್ ನಂಬರ್ 18’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿದ್ದು 2021ರ ಆಗಸ್ಟ್ 15ರಂದು. ಈಗ ಐದು ವರ್ಷಗಳ ನಂತರ ಈ ಚಿತ್ರಕ್ಕೆ ಸೀಕ್ವೆಲ್ ತರಲಾಗುತ್ತಿದೆ. ಆ ಚಿತ್ರದ ಹೆಸರು ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’. ಈ ಚಿತ್ರ ಕೂಡ ಸಸ್ಪೆನ್ಸ್ ಶೈಲಿಯಲ್ಲಿ ಮೂಡಿ ಬಂದಿದೆ. ಫೆಬ್ರವರಿ 20 ರಂದು ಸಿನಿಮಾ ರಿಲೀಸ್ ಆಗಲಿದೆ.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ ಅಲ್ಲಿ ವಿಜಯ್ ರಾಘವೇಂದ್ರ ಅವರು ಖಾಕಿ ತೊಟ್ಟು ಮಿಂಚಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಒಂದು ವಾರದ ಒಳಗೆ ಎರಡು ಕೊಲೆ ನಡೆಯುತ್ತಿದೆ. ಮುಂದಾಗೋ ಕೊಲೆ ತಡೆಯೋದು ಮತ್ತು ಕೊಲೆಗಾರನ ಹಿಡಿಯೋ ಜವಾಬ್ದಾರಿ ಕಥಾ ನಾಯಕನ ಮೇಲಿದೆ.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಗೋಪಾಲ್ ಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಪವನ್ ಒಡೆಯರ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ‘ಫ್ಲೈಯಿಂಗ್ ಎಲಿಫಂಟ್ ಸ್ಟೋರಿ ಟೆಲ್ಲರ್ಸ್’ ಸಿನಿಮಾ ಮೂಲಕ ದೇವಿ ಪ್ರಸಾದ್ ಶೆಟ್ಟಿ ಹಾಗೂ ಸಾರ್ವಿಕ್ ಹೆಬ್ಬಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಜೀ5ನಲ್ಲಿ ಬರ್ತಿದೆ ‘ರಾಕ್ಷಸ’ ವೆಬ್ ಸೀರಿಸ್; ಒಟಿಟಿ ಜಗತ್ತಿಗೆ ವಿಜಯ್ ರಾಘವೇಂದ್ರ ಎಂಟ್ರಿ

ಈಗ ಬರ್ತಿರೋದು ಎರಡನೇ ಕೇಸ್. ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಅವರ ಬಳಿ ಇನ್ನೂ ಒಂದು ಕಥೆ ಇದೆಯಂತೆ. ಈ ಬಳಿಕ ವಿಜಯ್ ಅವರು ಆ ಸಿನಿಮಾದಲ್ಲಿ ಕಾಣಿಸಿಕೊಳ್ಳೋ ಸಾಧ್ಯತೆ ಇದೆ. ಸಿನಿಮಾ ರಿಲೀಸ್ ಬಳಿಕ ನಿರ್ದೇಶಕರು ಮುಂದಿನ ದಿನಗಳಲ್ಲಿ ಆಲೋಚನೆ ಮಾಡಲಿದ್ದಾರಂತೆ.

ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಡೋದು ಒಂದು ದೊಡ್ಡ ಸವಾಲಿನ ಕೆಲಸ. ಸಿನಿಮಾ ಬಿಡುಗಡೆ ಮಾಡೋದು ಕೂಡ ಅಷ್ಟೇ ದೊಡ್ಡ ಚಾಲೆಂಜ್ ಎಂಬುದು ವಿಜಯ್ ರಾಘವೇಂದ್ರ ಅವರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *