ವಿಜಯ್ ಕೊನೆಯ ಸಿನಿಮಾ ಸೌದಿ ಅರೆಬಿಯಾನಲ್ಲಿ ಬ್ಯಾನ್: ಕಾರಣವೇನು?

ವಿಜಯ್ ಕೊನೆಯ ಸಿನಿಮಾ ಸೌದಿ ಅರೆಬಿಯಾನಲ್ಲಿ ಬ್ಯಾನ್: ಕಾರಣವೇನು?


ದಳಪತಿ ವಿಜಯ್ (ತಲಪತಿ ವಿಜಯ್) ನಟನೆಯ ‘ಜನ ನಾಯಕನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಬೆಂಗಳೂರು ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ರಾಜಕೀಯಕ್ಕೆ ಎಂಟ್ರಿ ನೀಡಿರುವ ‘ದಳಪತಿ ವಿಜಯ್, ಜನ ನಾಯಕನ್’ ಬಳಿಕ ತಾವು ಇನ್ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ. ಹೀಗಾಗಿ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ವಿಜಯ್‌ಗೆ ಭಾರತದಲ್ಲಿ ವಿದೇಶದಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಮಲೇಷ್ಯಾ, ಸಿಂಗಪುರ, ಗಲ್ಫ್ ರಾಷ್ಟ್ರದ ಅಮೆರಿಕದ ಅಭಿಮಾನಿಗಳನ್ನು ವಿಜಯ್ ಕಾಣೆ. ಆದರೆ ಇದೀಗ ಸೌದಿ ಅರೆಬಿಯಾನಲ್ಲಿ ವಿಜಯ್ ಅವರ ‘ಜನ ನಾಯಕನ್’ ಸಿನಿಮಾದ ಮೇಲೆ ನಿಷೇಧ ಹೇರಲಾಗಿದೆಯಂತೆ.

ಸೌದಿ ರಾಷ್ಟ್ರಗಳಲ್ಲಿ ಭಾರತೀಯ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ. ಅಲ್ಲಿನ ಅನಿವಾಸಿ ಭಾರತೀಯರ ಜೊತೆಗೆ ಇತರ ಸೌದಿ ಜನರೂ ಸಹ ಭಾರತದ ಸಿನಿಮಾಗಳ ಅಭಿಮಾನಿಗಳಾಗಿದ್ದಾರೆ. ಆದರೆ ಕೆಲವು ಭಾರತೀಯ ಸಿನಿಮಾಗಳ ಮೇಲೆ ನಿಷೇಧಗಳನ್ನು ಹೇರುತ್ತಲೇ ಬಂದಿವೆ ಗಲ್ಫ್ ರಾಷ್ಟ್ರಗಳು. ಇತ್ತೀಚೆಗಷ್ಟೇ ಬಿಡುಗಡೆ ಆಗಿ ಭಾರತದಲ್ಲಿ ಬ್ಲಾಕ್ ಬಸ್ಟರ್ ಆಗಿರುವ ‘ಧುರಂಧರ’ ಸಿನಿಮಾಕ್ಕೂ ಸಹ ಸೌದಿ ರಾಷ್ಟ್ರ ನಿಷೇಧ ಹೇರಿದೆ. ಇದೀಗ ವಿಜಯ್ ಅವರ ಕೊನೆಯ ಸಿನಿಮಾಕ್ಕೂ ನಿಷೇಧ ಹೇರಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:’ಜನ ನಾಯಕನ್’ ರಿಲೀಸ್‌ಗೆ ಸಂಕಷ್ಟ? ಇನ್ನೂ ಸಿಕ್ಕಿಲ್ಲ ಸೆನ್ಸಾರ್ ಪತ್ರ

ಸಾಮಾನ್ಯವಾಗಿ ಪಾಕಿಸ್ತಾನ ಅಥವಾ ಯಾವುದೇ ಮುಸ್ಲಿಂ ರಾಷ್ಟ್ರ ವಿರೋಧಿ ಅಂಶಗಳು ಅಥವಾ ಇಸ್ಲಾಂ ಧರ್ಮವನ್ನು ಟೀಕಿಸುವ, ಮುಸ್ಲಿಂ ರಾಷ್ಟ್ರಗಳನ್ನು ಖಳರಂತೆ ಬಿಂಬಿಸುವ ಸಿನಿಮಾಗಳನ್ನು ಸೌದಿ ರಾಷ್ಟ್ರಗಳು ನಿಷೇಧಿಸುತ್ತಾ ಬಂದಿವೆ. ‘ಧುರಂಧರ’ ಸಿನಿಮಾ ನಿಷೇಧಕ್ಕೂ ಇದೇ ಕಾರಣವಾಗಿತ್ತು. ಇದೀಗ ‘ಜನ ನಾಯಕ’ ನಿಷೇಧಕ್ಕೂ ಇದೇ ಕಾರಣ ಎನ್ನಲಾಗುತ್ತಿದೆ.

‘ಜನ ನಾಯಕನ್’ ಸಿನಿಮಾದ ವಿಲನ್ ಪಾಕಿಸ್ತಾನದ ವ್ಯಕ್ತಿ, ಸಿನಿಮಾದಲ್ಲಿ ಪಾಕಿಸ್ತಾನದ ವಿರುದ್ಧ, ಪಾಕ್ ಸೈನ್ಯದ ವಿರುದ್ಧ ಸಂಭಾಷಣೆಗಳು, ದೃಶ್ಯಗಳು ಇವೆ. ಟ್ರೈಲರ್ ನಲ್ಲಿ ಸಹ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಇದೇ ಕಾರಣಕ್ಕೆ ‘ಜನ ನಾಯಕನ್’ ಸಿನಿಮಾಕ್ಕೆ ಸೌದಿಯಲ್ಲಿ ಸೆನ್ಸಾರ್ ನಿರಾಕರಿಸಲಾಗಿದೆಯಂತೆ. ಆದರೆ ಚಿತ್ರತಂಡವು, ಕೆಲವು ಸಂಭಾಷಣೆಗಳನ್ನು ಬದಲಾಯಿಸಿ, ಮ್ಯೂಟ್ ಮಾಡಿ ಹಾಗೂ ಕೆಲವನ್ನು ಡಿಲೀಟ್ ಮಾಡುವ ಮೂಲಕ ‘ಜನ ನಾಯಕನ್’ ಸಿನಿಮಾಕ್ಕೆ ಸೆನ್ಸಾರ್ ಪಡೆಯಲು ಮುಂದಾಗಿದೆ.

‘ಜನ ನಾಯಕನ್’ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರಿಮೇಕ್ ಆಗಿದ್ದು, ಸಿನಿಮಾದಲ್ಲಿ ವಿಜಯ್ ಸಾಕು ಪುತ್ರಿಯಾಗಿ ಮಲೆಯಾಳಂ ನಟಿ ಮಮಿತಾ ಬಿಜು ನಟಿಸಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ಇದ್ದಾರೆ. ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ‘ಭಗವಂತ ಕೇಸರಿ’ ರಿಮೇಕ್ ಆದರೂ ಸಹ ಕೆಲವು ಹೆಚ್ಚುವರಿ ದೃಶ್ಯಗಳನ್ನು ಸಿನಿಮಾದಲ್ಲಿ ಸೇರಿಸಲಾಯಿತು, ವಿಜಯ್ ಅವರ ರಾಜಕೀಯಕ್ಕೆ ಸಹಾಯವಾಗುವಂಥ ದೃಶ್ಯಗಳು, ಸಂಭಾಷಣೆಗಳು ಸಿನಿಮಾದಲ್ಲಿ ಹೇರಳವಾಗಿ ಇರಲಿ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *