ನಟ ದರ್ಶನ್ (ದರ್ಶನ್) ಅವರು ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬಿತ್ಯಾದಿ ವದಂತಿಗಳು ಈ ಮೊದಲು ಹರಿದಾಡಿದ್ದವು. ಆ ಬಳಿಕ ಮಾತನಾಡಿದ ವಿಜಯಲಕ್ಷ್ಮೀ ದರ್ಶನ್ ಅವರು, ಇದು ಸುಳ್ಳು ಎಂದು ಸ್ಪಷ್ಟನೆ ಕೊಟ್ಟಿದ್ದರು. ಈಗ ವಿಜಯಲಕ್ಷ್ಮೀ ದರ್ಶನ್ ಅವರು ಮತ್ತೊಮ್ಮೆ ಈ ಬಗ್ಗೆ ಮಾತನಾಡಿದ್ದಾರೆ. ಧನ್ವೀರ್ ನಟನೆಯ ‘ಹಯಗ್ರೀವ’ ಟ್ರೇಲರ್ ಲಾಂಚ್ ಈವೆಂಟ್ ನಲ್ಲಿ ಅವರು ಮಾತನಾಡಿ, ದರ್ಶನ್ ಫ್ಯಾನ್ಸ್ ಗೆ ಖುಷಿ ಸುದ್ದಿ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ‘ಹಯಗ್ರೀವ’ ಟ್ರೇಲರ್ ಲಾಂಚ್ ಈವೆಂಟ್ ನಡೆಯಿತು. ಇದಕ್ಕೆ ವಿಜಯಲಕ್ಷ್ಮೀ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ದರ್ಶನ್ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ಕೊಟ್ಟಿದ್ದಾರೆ. ‘ಹಯಗ್ರೀವ ಸಿನಿಮಾದಲ್ಲಿ ನಟಿಸಿರುವ ಧನ್ವೀರ್, ಸಂಜನಾಗೆ ಒಳ್ಳೆದಾಗಲಿ. ಧನ್ವೀರ್ ನಮ್ಮ ಕುಟುಂಬದ ಸದಸ್ಯ. ನಮಗೆ ಪ್ರೀತಿ ತೋರಿಸಿದ ಹಾಗೇ ಧನ್ವೀರ್ಗೂ ಪ್ರೀತಿ ತೋರಿಸಿ.ಪೈರಸಿ ಸಪೋರ್ಟ್ ಮಾಡಬೇಡಿ, ಸಿನಿಮಾ ಥಿಯೇಟರಲ್ಲಿ ನೋಡಿ ಎಂಜಾಯ್ ಮಾಡಿ’ ಎಂದು ವಿಜಯಲಕ್ಷ್ಮೀ ಕೋರಿದರು.
ವಿಜಯಲಕ್ಷ್ಮೀ ಅವರು ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ ಎಂದರೆ ಅವರು ದರ್ಶನ್ ಬಗ್ಗೆ ಮಾತನಾಡಲಿ ಎಂದು ನಿರೀಕ್ಷಿಸೋದು ಸಾಮಾನ್ಯ. ಹೀಗಾಗಿ, ವಿಜಯಲಕ್ಷ್ಮೀ ಅವರು ದರ್ಶನ್ ಬಗ್ಗೆ. ‘ಡಿ ಬಾಸ್ ಚೆನ್ನಾಗಿದ್ದಾರೆ. ಇಷ್ಟು ಕಷ್ಟದಲ್ಲೂ ತುಂಬಾ ಸ್ಟ್ರಾಂಗ್ ಆಗಿದ್ದಾರೆ. ಅದಕ್ಕೆಲ್ಲಾ ಕಾರಣ ನೀವು, ನಿಮ್ಮಿಂದ ಅವರು ಚೆನ್ನಾಗಿದ್ದಾರೆ’ ಎಂದು ಹೇಳಿದರು. ಅವರು ಸ್ಟ್ರಾಂಗ್ ಆಗಿದ್ದಾರೆ ಎಂಬ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ: ‘ಹಯಗ್ರೀವ’ನಾಗಿ ಧನ್ವೀರ್ ಗೌಡ, ಗೌಪ್ಯವಾಗಿರಲಿದೆ ಮತ್ತೊಬ್ಬ ನಾಯಕನ ಹೆಸರು
‘ಹಯಗ್ರೀವ’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ನಿರಂತರವಾಗಿ ನಡೆಯೋ ಭೀಕರ ಕೊಲೆಯ ಸುತ್ತ ಸಾಗುವ ಕಥೆಯನ್ನು ಹೊಂದಿದೆ. ಫೆಬ್ರವರಿ 27ರಂದು ಸಿನಿಮಾ ತೆರೆಗೆ ಬರುತ್ತಿದೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.